Advertisement

ಹೆಮ್ಮಾಡಿ: ಗ್ರಾಮ ಕರಣಿಕರಿಗೆ ಕೊನೆಗೂ ಸಿಕ್ತು ಶಾಶ್ವತ ಸೂರು

10:15 AM May 07, 2022 | Team Udayavani |

ಹೆಮ್ಮಾಡಿ: ಕಳೆದ 4 ವರ್ಷಗಳಿಂದ ತಾತ್ಕಾಲಿಕವಾಗಿ ಶಾಲೆಯ ಕೊಠಡಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹೆಮ್ಮಾಡಿಯ ಗ್ರಾಮ ಕರಣಿಕರ ಕಚೇರಿಗೆ ಕೊನೆಗೂ ಶಾಶ್ವತ ಸೂರೊಂದು ಸಿಕ್ಕಿದೆ.

Advertisement

ಹೊಸ ಕಟ್ಟಡ ನಿರ್ಮಾಣ

ಕಂದಾಯ ಇಲಾಖೆಯ ಅಧೀನದಲ್ಲಿ ಬರುವ ಹೆಮ್ಮಾಡಿಯ ಗ್ರಾಮ ಕರಣಿಕರ ಕಚೇರಿಯು ಕಳೆದ 3 ವರ್ಷಗಳಿಂದ ಸ್ವಂತ ಕಟ್ಟಡವಿಲ್ಲದೆ, ಹೆಮ್ಮಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಕ್ಷರ ದಾಸೋಹದ ಕೊಠಡಿಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿತ್ತು. ಅದಕ್ಕಾಗಿ ಹೆಮ್ಮಾಡಿ ಗ್ರಾಮ ಪಂಚಾಯತ್‌ ಮುತುವರ್ಜಿಯಲ್ಲಿ ಹೊಸ ಕಟ್ಟಡ ನಿರ್ಮಾಣಗೊಂಡಿದ್ದು, ಒಂದಷ್ಟು ದಿನಗಳ ವಿಳಂಬದ ಅನಂತರ ಈಗ ಸ್ಥಳಾಂತರ ಪ್ರಕ್ರಿಯೆ ಆಗಿದೆ.

ಅದಕ್ಕೂ ಹಿಂದೆ ಗ್ರಾ.ಪಂ. ಕಚೇರಿ ಬಳಿಯೇ ಇದ್ದ 50 ವರ್ಷಗಳಿಗೂ ಹಳೆಯದಾದ ಕಟ್ಟಡವನ್ನು ಕೆಡವಲಾಗಿತ್ತು. ಈಗ ಆ ಜಾಗದಲ್ಲಿ ಹೊಸ ಕಟ್ಟಡ ನಿರ್ಮಾಣಗೊಂಡಿದ್ದು, ಅದೇ ಕಟ್ಟಡದಲ್ಲಿ ಸಂಜೀವಿನಿ ಒಕ್ಕೂಟದ ಕಚೇರಿ, ಹೆಮ್ಮಾಡಿಯ ಗ್ರಾಮೀಣ ಅಂಚೆ ಕಚೇರಿಯೊಂದಿಗೆ ಈಗ ಗ್ರಾಮ ಕರಣಿಕರ ಕಚೇರಿಯು ಆರಂಭಗೊಂಡಿದೆ.

ಜನರಿಗೆ ಅನುಕೂಲ

Advertisement

ಕೊನೆಗೂ ಹೊಸ ಕಟ್ಟಡಕ್ಕೆ ಇಲ್ಲಿನ ಗ್ರಾಮ ಕರಣಿಕರ ಕಚೇರಿಯನ್ನು ಸ್ಥಳಾಂತರಿಸಲಾಗಿದ್ದು, ಇದರಿಂದ ಜನರಿಗೆ ಬಹಳಷ್ಟು ಪ್ರಯೋಜನವಾಗಲಿದೆ. ಹಿಂದೆ ಇದ್ದ ಕಚೇರಿಯಲ್ಲಿ ಮಳೆಗಾಲದಲ್ಲಿ ಜನರಿಗೆ ಸಮಸ್ಯೆಯಾಗುತ್ತಿತ್ತು. ಈ ಬಗ್ಗೆ ತಹಶೀಲ್ದಾರ್‌ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಈಗ ಸ್ಥಳಾಂತರಿಸಲಾಗಿದ್ದು, ಆದರೆ ಇನ್ನೂ ನಾಮಫಲಕ ಅಳವಡಿಸಿಲ್ಲ. ಅದನ್ನೊಂದು ಆದಷ್ಟು ಬೇಗ ಅಳವಡಿಸಲಿ. -ಯು. ಸತ್ಯನಾರಾಯಣ ರಾವ್‌, ಹೆಮ್ಮಾಡಿ ಗ್ರಾ.ಪಂ. ಅಧ್ಯಕ್ಷ್ಯ

Advertisement

Udayavani is now on Telegram. Click here to join our channel and stay updated with the latest news.

Next