Advertisement

ಹೊಸ ವಾಹನ ನೋಂದಣಿಯಲ್ಲಿ ತುಸು ಏರಿಕೆ

12:15 AM Jun 23, 2020 | Sriram |

ಉಡುಪಿ: ಸರಕಾರಕ್ಕೆ ಹೆಚ್ಚಿನ ಆದಾಯ (ರಾಜಸ್ವ) ತಂದುಕೊಡುವ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ)ಯಲ್ಲಿ ಲಾಕ್‌ಡೌನ್‌ ಬಳಿಕ ತುಸು ಏರಿಕೆಯಾಗಿದೆ. ಎಪ್ರಿಲ್‌ನಲ್ಲಿ ಕೇವಲ 137 ವಾಹನ ಗಳು ನೋಂದಣಿ ಆಗಿದ್ದರೆ ಮೇ ತಿಂಗಳಿನಲ್ಲಿ 915 ವಾಹನಗಳು ನೋಂದಣಿಯಾಗಿದ್ದವು. ಜೂನ್‌ನಲ್ಲಿ ಮತ್ತಷ್ಟು ಏರಿಕೆ ಕಂಡಿದ್ದು, ಹತ್ತು ದಿನದೊಳಗೆ 564 ವಾಹನಗಳು ನೋಂದಣಿಯಾಗಿವೆ.

Advertisement

ಶೇ. 44 ಗುರಿ ಸಾಧನೆ
ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯು ರಾಜಸ್ವ ಸಂಗ್ರಹಣೆಯಲ್ಲಿ ರಾಜ್ಯದಲ್ಲೇ ಅಗ್ರಸ್ಥಾನದಲ್ಲಿತ್ತು. 2020-21ನೇ ಸಾಲಿನ ಎಪ್ರಿಲ್‌ನಲ್ಲಿ 19.06 ಲ.ರೂ. ಸಂಗ್ರಹವಾಗುವ ಮೂಲಕ ಶೇ. 1.64 ಹಾಗೂ ಮೇ ತಿಂಗಳಲ್ಲಿ 5.12 ಕೋ. ರೂ. ಸಂಗ್ರಹವಾಗುವ ಮೂಲಕ ಶೇ. 44 ಗುರಿ ಸಾಧಿಸಿದೆ. ಆದರೆ 2018-19 ಹಾಗೂ 2019-20ನೇ ಸಾಲಿನ ಎಪ್ರಿಲ್‌ನಲ್ಲಿ ಕ್ರಮವಾಗಿ 11.2 ಕೋ. ರೂ. ಹಾಗೂ 10.82 ಕೋ.ರೂ. ಸಂಗ್ರಹವಾಗುವ ಮೂಲಕ ಶೇ. 94ರಷ್ಟು ಗುರಿ ಸಾಧಿಸಿತ್ತು. ಈ ಬಾರಿ ಕೋವಿಡ್ ಲಾಕ್‌ಡೌನ್‌ದಿಂದಾಗಿ ಎರಡು ತಿಂಗಳಲ್ಲಿ ಹಿಂದಿನ ಗುರಿ ತಲುಪಲಾಗಲಿಲ್ಲ. ಹಾಗಾಗಿ 18 ಕೋ.ರೂ. ನಷ್ಟವಾಗಿದೆ. ಸಾರಿಗೆ ಕಚೇರಿಯಲ್ಲಿ ಮಾರ್ಚ್‌ ತಿಂಗಳಿನಲ್ಲಿ 1,387 ಮೋಟಾರು ಸೈಕಲ್‌, ಎಲ್‌ಎಂವಿ(ಲೈಟ್‌ ಮೋಟಾರ್‌ ವೆಹಿಕಲ್‌) 322, ತ್ರಿಚಕ್ರ ವಾಹನ 91, ಇತರ 152 ವಾಹನಗಳ ಸಹಿತ 1,952 ವಾಹನಗಳು ನೋಂದಣಿಯಾಗಿವೆ.

ಎಪ್ರಿಲ್‌ನಲ್ಲಿ 137 ಮೋಟಾರು ಸೈಕಲ್‌, ಎಲ್‌ಎಂವಿ 4, ತ್ರಿಚಕ್ರ ವಾಹನ 3, ಇತರ 11 ಸಹಿತ 155 ವಾಹನಗಳು, ಮೇ ನಲ್ಲಿ 915 ಮೋಟಾರು ಸೈಕಲ್‌, ಎಲ್‌ಎಂವಿ 184, ತ್ರಿಚಕ್ರ ವಾಹನ 30, ಇತರ 4 ಸಹಿತ 1,233 ವಾಹನಗಳು ಹಾಗೂ ಜೂನ್‌ (10ರ ವರೆಗೆ) ನಲ್ಲಿ 491 ಮೋಟಾರು ಸೈಕಲ್‌, ಎಲ್‌ಎಂವಿ 54, ತ್ರಿಚಕ್ರ ವಾಹನ 13, ಇತರ 6 ಸಹಿತ 564 ವಾಹನಗಳು ನೋಂದಣಿಯಾಗಿವೆ. 2019ರ ಎಪ್ರಿಲ್‌, ಮೇ, ಜೂನ್‌(10ರ ವರೆಗೆ) ಕ್ರಮವಾಗಿ 2,122 ಮತ್ತು
228, 565 ವಾಹನಗಳು ನೋಂದಣಿಯಾಗಿವೆ.

ಗುರಿ ಸಾಧನೆಗೆ ತೊಡಕು?
ಮೂರು ತಿಂಗಳುಗಳಿಂದ ವಾಹನಗಳ ನೋಂದಣಿ ಸಂಖ್ಯೆ ಕುಸಿತವಾಗುತ್ತಿರುವುದು ಉಡುಪಿ ಪ್ರಾದೇಶಿಕ ಸಾರಿಗೆ ಕಚೇರಿಯ ಗುರಿ ಸಂಗ್ರಹಣೆಗೆ ಹಿನ್ನಡೆಯಾಗುವ ಆತಂಕ ಎದುರಾಗಿದೆ. 2018- 19ರಲ್ಲಿ 140 ಕೋ. ರೂ. ಗುರಿ ನೀಡಿದ್ದು, ಅದರಲ್ಲಿ 135.11 ಕೋ. ರೂ. ಸಂಗ್ರಹಿಸಿದೆ. 2019-20ರಲ್ಲಿ 139.98 ಕೋ. ರೂ. ಗುರಿ ನೀಡಿದ್ದು, 123 ಕೋ.ರೂ. ಗುರಿ ಸಾಧಿಸಿದೆ. 2020-21ನೇ ಸಾಲಿನಲ್ಲಿ 140.4 ಕೋ.ರೂ. ಗುರಿ ನೀಡಲಾಗಿದೆ. ಎಪ್ರಿಲ್‌ನಿಂದ ಮೇ ಅಂತ್ಯಕ್ಕೆ 18 ಕೋ.ರೂ. ಸಂಗ್ರಹವಾಗಬೇಕಿತ್ತು. ಆದರೆ ಲಾಕ್‌ಡೌನ್‌ ಕಾಲದಲ್ಲಿ ಕೇವಲ 5.31 ಕೋ. ರೂ. ರಾಜಸ್ವ ಸಂಗ್ರಹವಾಗಿದೆ.

ಬಿಎಸ್‌4 ವಾಹನ ನೋಂದಣಿ ಸ್ಥಗಿತ
ಕೋವಿಡ್ ಲಾಕ್‌ಡೌನ್‌ನಿಂದಾಗಿ ವಾಹನಗಳ ನೋಂದಣಿ ಪ್ರಮಾಣ ಕುಸಿದಿದೆ. ಇನ್ನೊಂದೆಡೆ ಸರಕಾರದ ಆದೇಶದಂತೆ ಬಿಎಸ್‌ 4 ವಾಹನಗಳ ನೋಂದಣಿಯನ್ನು ನಿಲ್ಲಿಸಲಾಗಿದೆ.
-ರಾಮಕೃಷ್ಣ ,
ಪ್ರಾದೇಶಿಕ ಸಾರಿಗೆ ಅಧಿಕಾರಿ, ಉಡುಪಿ

Advertisement
Advertisement

Udayavani is now on Telegram. Click here to join our channel and stay updated with the latest news.

Next