ಹೊಸದಿಲ್ಲಿ: ನೂತನವಾಗಿ ರಚಿಸಲಾಗಿರುವ ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಅನ್ನು ಮಾದರಿ ರಾಜ್ಯವನ್ನಾಗಿ ಮಾಡಲಾಗುತ್ತದೆ. ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಡಿಜಿಟಲ್ ಇಂಡಿಯಾ ಪರಿಕಲ್ಪನೆಯ ಮೂಲಕ ಎಲ್ಲಾ ಆಡಳಿತವನ್ನು ಪೇಪರ್‌ಲೆಸ್ ರೂಪದಲ್ಲಿ ನಡೆಸುವ ಸಾಧ್ಯತೆ ಇದೆ.
ಮೊದಲ ಬಾರಿ ರಾಜ್ಯವೊಂದರಲ್ಲಿ ಪೇಪರ್‌ಲೆಸ್ ಆಡಳಿತವನ್ನು ತಂದು ಸದಾ ಗುಂಡಿನ ಸದ್ದಿನಲ್ಲೇ ಕೇಳಿ ಬರುತ್ತಿದ್ದ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿಸುವ ಉದ್ದೇಶ ಕೇಂದ್ರ ಸರಕಾರ ಹೊಂದಿದೆ.
ಇದಕ್ಕಾಗಿ ಸರಕಾರ “ಸುಶಾಸನ್ ಸಂಕಲ್ಪ್’ ಎಂಬ ಹೊಸ ಕಾರ್ಯಕ್ರವನ್ನು ಜಾರಿಗೆ ತಂದಿದ್ದು, ಒಳ್ಳೆಯ ಆಡಳಿತ ನೀಡುವ ಪ್ರಸ್ತಾವನೆಯನ್ನು ಇದು ಹೊಂದಿದೆ. ಡಿಜಿಟಲ್ ಮೂಲಕ ವ್ಯವಸ್ಥೆಯನ್ನು ಜಾರಿಗೊಳಿಸಲಾದರೆ ಎಲ್ಲ ವ್ಯವಹಾರಗಳೂ ಕಾಗದ ರಹಿತವಾಗಿ ನಡೆಯಲಿದೆ. ಸ್ಥಳೀಯ ಸರಕಾರಗಳಾದ ನಗರ ಸಭೆ, ಪಟ್ಟಣ ಪಂಚಾಯತ್, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್‌ಗಳ ಆಡಳಿತಗಳೂ ಡಿಜಿಟಲ್ ನತ್ತ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನವನ್ನು ಹಿಂಗೆದುಕೊಂಡ ಬಳಿಕ ಅಕ್ಟೋಬರ್ 31ರಂದು ಒಂದು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲಾಗಿತ್ತು. ನೂತನ ಕೇಂದ್ರಾಡಳಿತ ಪ್ರದೇಶದಲ್ಲಿ ಎಲ್ಲವೂ ಡಿಜಿಟಲ್ ಮೂಲಕ ನಡೆಯಲಿರುವ ಕಾರಣ ಅಲ್ಲಿನ ಕೃಷಿಕರು ಅದರಲ್ಲೂ ಮುಖ್ಯವಾಗಿ ಸೇಬು ಬೆಳೆಗಾರರು ಆನ್‌ಲೈನ್‌ನಲ್ಲಿ ವ್ಯವಹಾರವನ್ನು ನಡೆಸಬಹುದಾಗಿದೆ. ದೇಶ ವ್ಯಾಪ್ತಿಯಲ್ಲಿ ಆನ್‌ಲೈನ್ ಮೂಲಕ ವ್ಯವಹಾರವನ್ನು ಕಂಡುಕೊಳ್ಳಬಹುದಾಗಿದೆ.