ಹೊಸದಿಲ್ಲಿ: ನೂತನ ಸಂಸತ್ ಭವನದಲ್ಲಿ ಸೆ.18ರಿಂದ ವಿಶೇಷ ಸಂಸತ್ ಅಧಿವೇಶನ ನಡೆಯಲಿದೆ. ಈ ಹೊತ್ತಿಗೆ ಇನ್ನೊಂದು ಸುದ್ದಿ ಕೇಳಿಬಂದಿದೆ. ಲೋಕಸಭಾ ಕಾರ್ಯಾಲಯ ಸಿಬಂದಿಯ ವಸ್ತ್ರದ ಮಾದರಿ ಇನ್ನು ಬದಲಾಗಲಿದೆ. ಕ್ರೀಮ್ ಬಣ್ಣದ, ಮ್ಯಾಂಡಾರಿನ್ ಕಲರ್‌ನ ಕಾಲರ್ ಹೊಂದಿರುವ ಅಂಗಿಯನ್ನು ಬಳಸ ಲಾಗುತ್ತದೆ. ಇದರ ಮೇಲೆ ಗುಲಾಬಿ ಬಣ್ಣದ ಕಮಲದ ಚಿತ್ರಗಳಿರುತ್ತವೆ. ತೋಳುರಹಿತ ಜ್ಯಾಕೆಟ್‌ಗಳನ್ನು ಇದರ ಮೇಲೆ ಧರಿಸಲಾಗುತ್ತದೆ, ಹಾಗೆಯೇ ಖಾಕಿ ಬಣ್ಣದ ಪ್ಯಾಂಟ್ ಬಳಸಲಾಗುತ್ತದೆ ಎಂದು ಮೂಲಗಳು ಹೇಳಿವೆ.
ಇದುವರೆಗೆ ಲೋಕಸಭಾ ಅಧಿಕಾರಿಗಳೆಲ್ಲ ಒಂದೇ ರೀತಿಯ ಸಫಾರಿಯನ್ನು ಧರಿಸಿ ಒಳಪ್ರವೇಶಿಸುತ್ತಿ ದ್ದರು. ಹೊಸ ವಸ್ತ್ರಸಂಹಿತೆಯ ಪ್ರಕಾರ, ಒಂದೊಂದು ವರ್ಗ ಒಂದೊಂದು ರೀತಿಯ ದಿರಿಸನ್ನು ಧರಿಸುತ್ತದೆ. ಸಂಸತ್ ಭದ್ರತಾ ಸಿಬಂದಿ ಇನ್ನು ಮುಂದೆ ತಮ್ಮ ಹಳೆ ಯ ನೀಲಿ ಬಣ್ಣದ ಸಫಾರಿಯನ್ನು ತ್ಯಜಿಸಿ, ಸೇನಾ ಸಮವಸ್ತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿಆರ್‌ಪಿಎಫ್ನ ಸಂಸತ್ ಕರ್ತವ್ಯ ದಳ (ಪಿಡಿಜಿ) ಮಾತ್ರ ಹಿಂದಿನ ಸಮವಸ್ತ್ರದಲ್ಲೇ ಕಾಣಿಸಿಕೊಳ್ಳಲಿದೆ.
ಹೊಸ ವಸ್ತ್ರ ಮಾದರಿಯನ್ನು ರಾಷ್ಟ್ರೀಯ ಫ್ಯಾಶನ್ ತಂತ್ರಜ್ಞಾನ ಸಂಸ್ಥೆ ಸಿದ್ಧಪಡಿಸಿದೆ. ಆದರೆ ಈ ವಸ್ತ್ರಸಂಹಿತೆ ಮಹಿಳೆಯರಿಗೆ, ಪುರುಷರಿಗೆ ಒಂದೇ ರೀತಿಯಿರುತ್ತದಾ, ಮಹಿಳೆಯರಿಗೇ ಪ್ರತ್ಯೇಕವಾಗಿರುತ್ತದಾ ಎನ್ನುವುದು ಮಾತ್ರ ಇಲ್ಲಿನ ಪ್ರಶ್ನೆ. ಹೊಸ ಸಮವಸ್ತ್ರವನ್ನು ಶೀಘ್ರವೇ ಪಡೆದುಕೊಳ್ಳಬೇಕು ಎಂದು ಲೋಕಸಭಾ ಕಾರ್ಯಾಲಯ ಸೂಚಿಸಿದೆ.
ಗಮನಿಸಬೇಕಾದ ವಿಚಾರವೆಂದರೆ, ಮೇ 28ರಂದು ನೂತನ ಸಂಸತ್ ಉದ್ಘಾಟನೆಯಾ ದಾಗಲೇ ಹೊಸ ವಸ್ತ್ರಗಳೂ ಬಳಕೆಯಾಗಬೇಕಿತ್ತು. ಈಗ ವಿಶೇಷ ಅಧಿವೇಶನದಿಂದಂತೂ ಬಳಕೆ ಖಾತ್ರಿಯಾಗಿದೆ.