Advertisement

ಕೇರಳ “ಲವ್‌ ಜೆಹಾದ್‌’ಪ್ರಕರಣಕ್ಕೆ ಹೊಸ ತಿರುವು

09:29 AM Oct 04, 2017 | Team Udayavani |

ಹೊಸದಿಲ್ಲಿ: ಕೇರಳದ ಲವ್‌ ಜೆಹಾದ್‌ ಕೇಸಿಗೆ ಹೊಸ ಟ್ವಿಸ್ಟ್‌ ಸಿಕ್ಕಿದೆ. “ಇಸ್ಲಾಂಗೆ ಮತಾಂತರಗೊಂಡು, ಮುಸ್ಲಿಂ ಯುವಕನನ್ನು ಮದುವೆಯಾಗಿರುವ ಹಿಂದೂ ಯುವತಿ ಪ್ರಾಪ್ತ ವಯಸ್ಕಳಾಗಿರುವ ಕಾರಣ, ಆ ಮದುವೆಯನ್ನು ಅಸಿಂಧು ಎಂದು ಘೋಷಿಸುವ ಅಧಿಕಾರ ಹೈಕೋರ್ಟ್‌ಗಿದೆಯೇ’ ಎಂದು ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ. ಮೇಲ್ನೋಟಕ್ಕೆ ಹೈಕೋರ್ಟ್‌ನ ಆದೇಶ ತಪ್ಪೆಂದು ಕಾಣುತ್ತಿದೆ ಎಂದಿರುವ ಸುಪ್ರೀಂ ನ್ಯಾಯಪೀಠ, ಮುಂದಿನ ವಿಚಾರಣೆಯನ್ನು ಅ.9ಕ್ಕೆ ಮುಂದೂಡಿದೆ.

Advertisement

ಶಾಫಿನ್‌ ಜಹಾನ್‌ ಮತ್ತು ಹದಿಯಾ ವಿವಾಹವನ್ನು ಅಸಿಂಧು ಎಂದು ಹೈಕೋರ್ಟ್‌ ಘೋಷಿಸಿದ್ದನ್ನು ಪ್ರಶ್ನಿಸಿ ಜಹಾನ್‌ ಸುಪ್ರೀಂ ಮೆಟ್ಟಿಲೇರಿದ್ದರು. ಇದು ಲವ್‌ ಜೆಹಾದ್‌ ಆಗಿರುವ ಸಾಧ್ಯತೆಯಿದೆ ಎಂದಿದ್ದ ಹೈಕೋರ್ಟ್‌, ತನಿಖೆಯನ್ನು ಎನ್‌ಐಎಗೆ ವಹಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next