Advertisement

ಚೈತನ್ಯ ಕಲಾವಿದರ ನೂತನ ನಾಟಕ ತೂಯಿನಾಯೆ ಪೋಯೆ ಮುಹೂರ್ತ

05:40 AM Jul 20, 2017 | Team Udayavani |

ಕಾಪು: ಚೈತನ್ಯ ಕಲಾವಿದರು ಬೈಲೂರು ಇವರ ಈ ವರ್ಷದ ತುಳು ಹಾಸ್ಯಮಯ ನಾಟಕ ತೂಯಿನಾಯೆ ಪೋಯೆ ನಾಟಕದ ಶುಭ ಮುಹೂರ್ತವು ಜು. 13ರಂದು ಬೈಲೂರು ಶ್ರೀ ಮಾರಿಯಮ್ಮ ದೇಗುಲದಲ್ಲಿ ನಡೆಯಿತು.

Advertisement

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾರಿಯಮ್ಮ ದೇವಸ್ಥಾನದ ಅರ್ಚಕ ನಾರಾಯಣ ಭಟ್‌ ಮಾತನಾಡಿ, ಪ್ರಸನ್ನ ಶೆಟ್ಟಿ ನೇತೃತ್ವದ ಚೈತನ್ಯ ಕಲಾವಿದರ ತಂಡವು ಈ ಹಿಂದೆಯೇ ಸಾಮಾಜಿಕ ಮೌಲ್ಯ ಹೊತ್ತ ನಾಟಕವನ್ನು ಸಮಾಜಕ್ಕೆ ನೀಡಿ ಶ್ಲಾಘನೆಗೆ ಪಾತ್ರವಾಗಿದೆ. ಈ ನಾಟಕವು ಉತ್ತಮ ನೀತಿಯನ್ನು ಜನತೆಗೆ ನೀಡಿ ಪ್ರಶಂಸೆಗೆ ಪಾತ್ರವಾಗಲಿ ಎಂದು ಶುಭ ಹಾರೈಸಿದರು.

ಹಿರಿಯ ಕಲಾವಿದ ಕರುಣಾಕರ ಹೆಗ್ಡೆ ಮುಹೂರ್ತ ನೆರವೇರಿಸಿದರು. ಕಾಪು ರಂಗ ತರಂಗ ತಂಡದ ಸಂಚಾಲಕ ಸಮಾಜರತ್ನ ಲೀಲಾಧರ ಶೆಟ್ಟಿ, ತಾ. ಪಂ. ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ, ಜಿ. ಪಂ. ಸದಸ್ಯೆ ಸುಮಿತ್‌ ಶೆಟ್ಟಿ ಶುಭ ಹಾರೈಸಿದರು.

ಉದ್ಯಮಿ ಕೃಷ್ಣರಾಜ್‌ ಹೆಗ್ಡೆ, ಚಂದ್ರಶೇಖರ ಮಾಡ, ವಿಕ್ರಂ ಹೆಗ್ಡೆ, ಬೈಲೂರು ವ್ಯ. ಸೇ. ಸ. ಸಂಘದ ಅಧ್ಯಕ್ಷ ವಿನಯ ಕುಮಾರ್‌ ಶೆಟ್ಟಿ, ಗ್ರಾ. ಪಂ. ಸದಸ್ಯ ಸಚ್ಚಿದಾನಂದ ಶೆಟ್ಟಿ, ಮಹೇಶ್‌ ಶೆಣೈ, ನ್ಯಾಯವಾದಿ ಸದಾನಂದ ಸಾಲಿಯಾನ್‌, ಮರ್ವಿನ್‌ ಶಿರ್ವ, ಶರತ್‌ ಉಚ್ಚಿಲ, ನಾಟಕ ತಂಡದ ಕಲಾವಿದರು ಮೊದಲಾದವರು ಉಪಸ್ಥಿತರಿದ್ದರು.

ನಾಲ್ಕನೇ ಕಲಾ ಕಾಣಿಕೆ 
ಪ್ರಸ್ತುತ ನಾಟಕವು ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ತೆಲಿಕೆದ ಅರಸ ಪ್ರಸನ್ನ ಶೆಟ್ಟಿ ಇವರ 4ನೇ ಕಲಾ ಕಾಣಿಕೆಯಾಗಿದೆ. ಬಲೇ ತೆಲಿಪಾಲೆ, ಮೇ 22, ಸ್ಟಾರ್‌ ನಾಟಕಗಳನ್ನು ರಚಿಸಿ ಯಶಸ್ವಿ ಕಥೆಗಾರ, ನಿರ್ದೇಶಕರೆನಿಸಿಕೊಂಡಿದ್ದಾರೆ. ಇದೀಗ ಈ ವರ್ಷದ ತೂಯಿನಾಯೆ ಪೋಯೆ ನಾಟಕವು ಪೇÅಕ್ಷಕರ ಮನಗೆಲ್ಲಲಿದೆ. ನಾಟಕಕ್ಕೆ ಕಿರಣ್‌ ಗರಡಿ ಮಜಲ್‌ ಸಂಗೀತ ನೀಡಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next