Advertisement

Chaina: ಚೀನಾಗೆ ಹೊಸ ಸಂಕಷ್ಟ: ಅಂತಾರಾಷ್ಟ್ರೀಯ ಪ್ರವಾಸಿಗರ ಸುಳಿವಿಲ್ಲ!

03:46 PM Aug 07, 2023 | Pranav MS |

ಬೀಜಿಂಗ್‌: ಕೊರೊನಾ ಹಾಗೂ ಅದರ ನಂತರ ಚೀನಾಗೆ ಭೇಟಿ ನೀಡುವ ಅಂತಾರಾಷ್ಟ್ರೀಯ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಚೀನಾ ಕುರಿತು ಅನೇಕ ನಕಾರಾತ್ಮಕ ವಿಷಯಗಳೇ ಇದಕ್ಕೆ ಕಾರಣ ಎನ್ನಲಾಗಿದೆ.

Advertisement

ಕೊರೊನಾ ಮೊದಲು 2019ಕ್ಕೆ ಹೋಲಿಸಿದರೆ 2023ರ ಮೊದಲ ತ್ತೈಮಾಸಿಕದಲ್ಲಿ ಅದರ ಕಾಲು ಭಾಗದ ಸಂಖ್ಯೆಯಷ್ಟು ವಿದೇಶಿ ಪ್ರವಾಸಿಗರು ಮಾತ್ರ ಚೀನಾಗೆ ಭೇಟಿ ನೀಡಿದ್ದಾರೆ. ಬೀಜಿಂಗ್‌, ಶಾಂಘೈ ಸೇರಿದಂತೆ ಪ್ರಮುಖ ಪ್ರದೇಶಗಳಿಗೆ 2023ರ ಮೊದಲ ತ್ತೈಮಾಸಿಕದಲ್ಲಿ ಕೇವಲ 52,000 ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದಾರೆ. 2019ರ ಮೊದಲ ತ್ತೈಮಾಸಿಕದಲ್ಲಿ ಒಟ್ಟು 37 ಲಕ್ಷ ಅಂತಾರಾಷ್ಟ್ರೀಯ ಪ್ರವಾಸಿಗರು ಭೇಟಿ ನೀಡಿದ್ದರು.

ಪ್ರಮುಖವಾಗಿ ಯೂರೋಪ್‌, ಅಮೆರಿಕ, ಜಪಾನ್‌ ಮತ್ತು ಕೊರಿಯಾದ ಪ್ರವಾಸಿಗರು ಚೀನಾಗೆ ಭೇಟಿ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಕೆಲವು ಪ್ರವಾಸಿಗರು ಚೀನಾದಲ್ಲಿ ಮೃತಪಟ್ಟಿರುವುದು ಕೂಡ ಪ್ರವಾಸಿಗರ ಸಂಖ್ಯೆ ಕುಸಿತಕ್ಕೆ ಕಾರಣ ಎನ್ನಲಾಗಿದೆ.

ಎಫ್ಡಿಎ ಕುಸಿತ:
ಇನ್ನೊಂದೆಡೆ, 2022ರ ಮೊದಲ ತ್ತೈಮಾಸಿಕದಲ್ಲಿ ಚೀನಾದ ವಿದೇಶಿ ನೇರ ಹೂಡಿಕೆ(ಎಫ್ಡಿಎ) 10 ಸಾವಿರ ಕೋಟಿ ಡಾಲರ್‌ ಇದ್ದು, ಈ ವರ್ಷದ ಮೊದಲ ತ್ತೈಮಾಸಿಕದಲ್ಲಿ ಎಫ್ಡಿಎ ಕೇವಲ 2 ಸಾವಿರ ಕೋಟಿ ಡಾಲರ್‌ ಇದೆ ಎಂದು ಮಾರುಕಟ್ಟೆ ಸಂಶೋಧನಾ ಸಂಸ್ಥೆ ಮಾರ್ಕ್‌ ವಿಟ್ಜ್ ವರದಿ ತಿಳಿಸಿದೆ. ಇದು ಚೀನಾದ ಆರ್ಥಿಕತೆ ಮೇಲೆ ಕೂಡ ಪರಿಣಾಮ ಬೀರಿದೆ.

ಒಂದು ಕಡೆ ಕೊರೊನಾ ಅಲ್ಲಿನ ಸಾಮಾನ್ಯ ಜನರ ಜೀವನವನ್ನು ನರಕವನ್ನಾಗಿಸಿದರೆ, ಕುಸಿಯುತ್ತಿರುವ ಆರ್ಥಿಕತೆಯು ಅವರ ಜೀವನ ನಿರ್ವಹಣೆ ಮೇಲೆ ಪರಿಣಾಮ ಬೀರಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next