Advertisement

ಹಬ್ಬಕ್ಕೆ ಊರಿಗೆ ಹೊರಟ್ಟಿದ್ದೀರಾ ?  ಟ್ರಾಫಿಕ್ ನ ಈ ಹೊಸ ನಿಯಮದ ಬಗ್ಗೆ ತಿಳಿದುಕೊಳ್ಳಿ

09:41 AM Sep 02, 2019 | Mithun PG |

ಮಣಿಪಾಲ: ಗಣೇಶ ಚತುರ್ಥಿಯ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಅದ್ದೂರಿ ಉತ್ಸವಕ್ಕೆ ಭರದಿಂದ ತಯಾರಿ ನಡೆಯುತ್ತಿದೆ.  ವಿದ್ಯಾಭ್ಯಾಸ , ಉದ್ಯೋಗ, ಇನ್ನೀತರ ಕಾರಣಗಳಿಗಾಗಿ ಪರವೂರಿಗೆ ತೆರಳಿದವರು ತಮ್ಮ ಊರಿಗೆ ಮರಳಿ ಹಬ್ಬವನ್ನು ಆಚರಿಸುವ ಸಂತಸದ ಕ್ಷಣವಿದು.  ಈ ಅಪೂರ್ವ ಕ್ಷಣವನ್ನು  ಆಚರಿಸುವ ಮುನ್ನ ಕೇಂದ್ರ ಸರಕಾರ ಇಂದಿನಿಂದ ಜಾರಿಗೆ ತಂದಿರುವ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯ ಕುರಿತು  ಒಂದಿಷ್ಟು ತಿಳಿದುಕೊಳ್ಳಿ.

Advertisement

ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವ ಉದ್ಧೇಶದಿಂದ ಹಾಗೂ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ರಾಷ್ಟ್ರಾದ್ಯಂತ ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಜಾರಿಗೆ  ತರಲಾಗಿದೆ.

ಅನಧಿಕೃತ ಚಾಲನೆ, ಅಪಾಯಕಾರಿ ಚಾಲನೆ, ನಿಗದಿತ  ಮಿತಿಗಿಂತ ಹೆಚ್ಚಿನ ವೇಗದಲ್ಲಿ ವಾಹನ ಚಲಾಯಿಸುವುದು, ನಿಗದಿತ ಮಿತಿಗಿಂತ ಹೆಚ್ಚು ಜನರ ಪ್ರಯಾಣ , ಅಪ್ರಾಪ್ತ ವಯಸ್ಕರು ವಾಹನ ಚಲಾವಣೆ ಮಾಡುವುದು, ಮುಂತಾದ ನಿಯಮ ಉಲ್ಲಂಘಿಸಿದರೆ ಭಾರೀ ದಂಡ ತೆರಬೇಕಾಗುತ್ತದೆ. ನಿಯಮ ಉಲ್ಲಂಘನೆಗೆ ಕನಿಷ್ಠ ದಂಡ ಒಂದು ಸಾವಿರ ರೂ. ಆಗಿದ್ದು, ಗರಿಷ್ಠ ಒಂದು ಲಕ್ಷದವರೆಗೂ ದಂಡ ವಿಧಿಸುವ ಅವಕಾಶವಿದೆ. ಅಪ್ರಾಪ್ತರು ವಾಹನ ಚಾಲನೆ ಮಾಡಿ ಸಿಕ್ಕಿಬಿದ್ದರೆ ಅವರ ಪಾಲಕರಿಗೆ ದಂಡ ವಿಧಿಸಲಾಗುತ್ತದೆ. ­­

ನೂತನ ವಿಧೇಯಕದಲ್ಲಿ ವಿಧಿಸಲಾಗಿರುವ ದಂಡದ ಪ್ರಮಾಣ

  • ಸಂಚಾರ ನಿಯಮ ಉಲ್ಲಂಘನೆಗೆ 500 ರೂ. ದಂಡ
  • ಆ್ಯಂಬುಲೆನ್ಸ್ ಗಳಿಗೆ ದಾರಿ ಬಿಡದಿದ್ದರೆ 10,000 ರೂ ದಂಡ, 6 ತಿಂಗಳು ಜೈಲು
  • ಅತೀ ವೇಗದ ಚಾಲನೆಗೆ 1000 ದಿಂದ 2000 ರೂ ದಂಡ, 3 ತಿಂಗಳು ಜೈಲು
  • ಕುಡಿದು ವಾಹನ ಚಾಲನೆ ಮಾಡಿದರೆ 10,000 ರೂ ದಂಡ. 6 ತಿಂಗಳು ಜೈಲು
  • ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿದರೆ 1000 ರೂ. ದಂಡ
  • ವಿಮೆ ರಹಿತ ವಾಹನ ಚಲಾವಣೆಗೆ 2000 ರೂ, ದಂಡ
  • ಅಪ್ರಾಪ್ತರು ವಾಹನ ಚಲಾವಣೆ ಮಾಡಿದರೆ ಪೋಷಕರಿಗೆ 25,000 ರೂ ದಂಡ ಹಾಗೂ ಕಾನೂನು ಕ್ರಮ
  • ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸಿದರೆ 5000 ರೂ. ದಂಡ
  • ವಾಹನಗಳ ಅಪಘಾತವಾದರೆ ಚಾಲಕರಿಗೆ 10 ಲಕ್ಷದವರೆಗೂ ದಂಡ
  • ಸಿಗ್ನಲ್ ಜಂಪ್, ಚಾಲನೆ ವೇಳೆ ಮೊಬೈಲ್ ಬಳಕೆಯ ಅಪರಾಧಕ್ಕೆ 5000 ರೂ ದಂಡ, 6 ತಿಂಗಳು ಜೈಲು ಶಿಕ್ಷೆ       ­
  • ನೋ ಪಾರ್ಕಿಂಗ್ ಗೆ 1000ರೂ. ದಂಡ
Advertisement

Udayavani is now on Telegram. Click here to join our channel and stay updated with the latest news.

Next