Advertisement
ಕಳೆದ ವಾರ ನಿಧನರಾದ ಸುಷ್ಮಾ ಅವರ ನೆನಪಿಗಾಗಿ ಮಂಗಳವಾರ ಆಯೋಜಿಸಲಾಗಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೆಲವಾರು ವಿಷಯಗಳಲ್ಲಿ ಸುಷ್ಮಾಜೀ ತಮಗೆ ಅಮೂಲ್ಯ ಸಲಹೆಗಳನ್ನು ನೀಡುತ್ತಿದ್ದರು ಎಂದು ತಿಳಿಸಿದರು. ‘2014ರಲ್ಲಿ ವಿಶ್ವಸಂಸ್ಥೆಯಲ್ಲಿ ನನಗೆ ಮೊದಲು ಭಾಷಣ ಮಾಡುವ ಅವಕಾಶ ಸಿಕ್ಕಾಗ, ಸಾಮಾನ್ಯವಾಗಿ ನಾನು ಭಾಷಣ ಬರೆದುಕೊಳ್ಳದೇ ಮಾತನಾಡುವ ಅಭ್ಯಾಸವಿದ್ದು ಅದರಂತೆಯೇ ವಿಶ್ವಸಂಸ್ಥೆಯಲ್ಲೂ ಮಾತನಾಡುವುದಾಗಿ ತಿಳಿಸಿದ್ದೆ. ಆದರೆ, ಅವರು ವಿಶ್ವಸಂಸ್ಥೆಯಲ್ಲಿ ಭಾರತದ ಬಗ್ಗೆ ನೀವು ಮಾತನಾಡಬೇಕಿರುವುದರಿಂದ ಆ ಭಾಷಣಕ್ಕೆ ಪೂರ್ವ ತಯಾರಿ ಬೇಕು’ ಎಂದಿದ್ದರು. ನಾನು ಅವರ ಸಲಹೆಯನ್ನು ಅಳವಡಿಸಿಕೊಂಡಿದ್ದೆ. ಇಂಥ ಹಲವಾರು ಸಲಹೆಗಳನ್ನು ಅವರು ನೀಡುತ್ತಿದ್ದರು” ಎಂದರು. Advertisement
ವಿದೇಶಾಂಗ ಇಲಾಖೆಗೆ ಸುಷ್ಮಾರಿಂದ ಹೊಸ ಸ್ಪರ್ಶ
01:19 AM Aug 14, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.