Advertisement

2020 ಮಾರುಕಟ್ಟೆಗೆ ಹೊಸತು ಹೊಸತು!

11:17 PM Jan 23, 2020 | mahesh |

2020ರ ಹೊಸ ವರ್ಷವನ್ನು ಈಗಾಗಲೇ ಆರಂಭವಾಗಿದೆ. ಎಲ್ಲ ಕಂಪೆನಿಗಳು ಹೊಸ ಹೊಸದಾದ ಸರಕುಗಳನ್ನು ಮಾರುಕಟ್ಟೆಗೆ ತರಲು ಮುಂದಾಗಿವೆ. ಈ ಹಿನ್ನೆಲೆಯಲ್ಲಿ ಗ್ರಾಹಕರು ಕೂಡ ಹೊಸ ನಿರೀಕ್ಷೆಗಳನ್ನೇ ಇಟ್ಟುಕೊಂಡು ಸರಕುಗಳನ್ನು ಕೊಳ್ಳಲು ಮುಂದಾಗುತ್ತಿದ್ದಾರೆ. ಮಾರುಕಟ್ಟೆಗೆ ಯಾವೆಲ್ಲ ಕಂಪೆನಿಯ ಹೊಸ ವಸ್ತುಗಳು ಬಂದಿವೆ, ಬೇಡಿಕೆ ಮತ್ತು ಅವಕಾಶಗಳು ಹೇಗಿವೆ ಎಂಬ ಮಾಹಿತಿ ಇಲ್ಲಿದೆ.

Advertisement

2020 ವರ್ಷ ನವ ನೂತನ ನೀರಿಕ್ಷೆಯಿಂದ ಕೂಡಿದೆ ಎಂದರೆ ತಪ್ಪಾಲಾರದು. ದಿನದಿಂದ ದಿನಕ್ಕೆ ತಂತ್ರಜ್ಞಾನಗಳು ಬದಲಾಗುತ್ತ ಇರುತ್ತದೆ. ಈ ವರ್ಷ ಅನೇಕ ತಂತ್ರಜ್ಞಾನಗಳು ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿದೆ. ಎಲ್ಲ ಸಂಸ್ಥೆಗಳು ತಾ ಮುಂದು ನಾ ಮುಂದು ಎಂಬಂತೆ ತಮ್ಮ ನೂತನ ಉತ್ಪನ್ನಗಳನ್ನು ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಸಿದ್ದಪಡಿಸುತ್ತಿವೆ.

2020ರಲ್ಲಿ ಹಲವು ವಯರ್‌ಲೆಸ್‌ ಹೆಡ್‌ಫೋನ್‌ಗಳು(ಏರ್‌ಪಾಡ್ಸ್‌) ಮಾರುಕಟ್ಟೆಗೆ ಬರಲಿವೆ. ಪವರ್‌ ಫ‌ುಲ್‌ ಸೌಂಡ್‌ ಸಿಸ್ಟಂ ಹೊಂದಿರುವ ಆ್ಯಪಲ್‌ ಏರ್‌ಪಾಡ್ಸ್‌ 5 ಗಂಟೆಗಳ ಬ್ಯಾಟರಿ ಲೈಫ್ ಹೊಂದಿರುತ್ತದೆ. ಇದು ಕಡಿಮೆ ತೂಕವನ್ನು ಹೊಂದಿದ್ದು ಸ್ಪ್ಯಾಶ್‌ ರೆಸಿಸ್ಟೆಂಟ್‌ ಆಗಿದೆ. ಇದು ಸ್ವಯಂ ಚಾಲಿತವಾಗಿ ಆನ್‌ ಆಗುತ್ತದೆ. ಸ್ವಯಂ ಚಾಲಿತವಾಗಿ ಕನೆಕ್ಟ್ ಆಗುತ್ತದೆ. ಎಲ್ಲ ಆ್ಯಪಲ್‌ ಡಿವೈಸ್‌ಗಳಿಗೂ ಸುಲಭವಾಗಿ ಸೆಟ್‌ಅಪ್‌ ಮಾಡಬಹುದು. ಕ್ಯೂಐ ಕಂಪ್ಯಾಟಿಬಲ್‌ ಚಾರ್ಜಿಂಗ್‌ ಮ್ಯಾಟ್‌ ಅಥವಾ ಲೈನಿಂಗ್‌ ಕನೆಕ್ಟರ್‌ ಬಳಸಿ ವಯರ್‌ಲೆಸ್‌ ಆಗಿ ಕೂಡ ಇದನ್ನು ಚಾರ್ಜ್‌ ಮಾಡಬಹುದು. ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬಡ್ಸ್‌ 58 ಎಂಎಎಚ್‌ ಲೀಥಿಯಂ ಐಯಾನ್‌ ಬ್ಯಾಟರಿ ಹೊಂದಿದ್ದು ದೀರ್ಘಾವಧಿ ಬ್ಯಾಟರಿ ಲೈಫ್ ಇರುತ್ತದೆ.

ಟಾಟಾ ಮೋಟಾರ್ನ ಹೊಸ ಆವೃತ್ತಿಗಳು
ಟಾಟಾ ಮೋಟಾರ್ಸ್‌ ನಿರ್ಮಾಣದ ನೆಕ್ಸಾನ್‌ ಕಂಪ್ಯಾಕ್ಟ್ ಎಸುವಿ ಕಾರು ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಬರಲಿದೆ. ಕಾರಿನಲ್ಲಿ ಹಲವಾರು ಹೊಸ ಬದಲಾವಣೆಗಳನ್ನು ಮಾಡಲಾಗಿದೆ. ನೆಕ್ಸಾನ್‌ ಎಲೆಕ್ಟ್ರಿಕ್‌ ಕಾರು ಮಾದರಿಯನ್ನು ಸಹ ಅಭಿವೃದ್ದಿಗೊಳಿಸಿದ್ದು ಹೊಸ ಕಾರು ಅತ್ಯುತ್ತಮ ಬ್ಯಾಟರಿ ಸೌಲಭ್ಯದೊಂದಿಗೆ 300 ಕಿ.ಮೀ. ಮೈಲೇಜ್‌ ರೇಂಜ್‌ ಪಡೆದುಕೊಂಡಿದೆ. ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ ನೆಕ್ಸಾನ್‌ ಎಲೆಕ್ಟ್ರಿಕ್‌ ಕೂಡ 2020ರ ಆಟೋ ಎಕ್ಸ್ಪೋದಲ್ಲಿ ಪ್ರದರ್ಶನಗೊಂಡ ಬಳಿಕ ಬಿಡುಗಡೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಮಿನಿ ಎಲ್‌ಇಡಿ ಲ್ಯಾಪ್‌ಟಾಪ್‌
ಮೈಕ್ರೋ ಸ್ಟಾರ್‌ ಇಂಟರ್‌ನ್ಯಾಶನಲ್‌ ಕಂಪೆನಿ ತನ್ನ ಹೊಸ ಆವೃತ್ತಿಯ ಎಂಎಸ್‌ಐ 17 ಲ್ಯಾಪ್‌ಟಾಪ್‌ಗ್ಳನ್ನು 2020ರಲ್ಲಿ ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಡಿಸ್‌ಪ್ಲೇ ವಿನ್ಯಾಸ ವಿಶಿಷ್ಟವಾಗಿದೆ. ಮಿನಿ ಎಲ್‌ಇಡಿ ಡಿಸ್‌ಪ್ಲೇ ಹೊಂದಿರುವ ಮೊದಲ ಲ್ಯಾಪ್‌ಟಾಪ್‌ ಇದಾಗಲಿದೆ ಎನ್ನಲಾಗಿದೆ. ಹೊಸ ತಂತ್ರಜ್ಞಾನದ ಸಹಾಯದಿಂದ ಹೆಚ್ಚು ತೆಳ್ಳಗಾಗಿದ್ದು ಹೆಚ್ಚು ಶಕ್ತಿಯನ್ನು ಹೊಂದಿದೆ.

Advertisement

ಎಆರ್‌ಎ ಸ್ಮಾರ್ಟ್‌ಫೋನ್‌
ಪ್ರತಿದಿನ ಪ್ರತಿಕ್ಷಣ ಸ್ಮಾರ್ಟ್‌ ಫೋನ್‌ ಜಗತ್ತು ಬದಲಾಗುತ್ತ ಇರುತ್ತದೆ. ಏನಾದರೂ ಹೊಸತನವನ್ನು ಗ್ರಾಹಕರು ಬಯಸುತ್ತಾರೆ. ಇಂತಹ ಗ್ರಾಹಕರಿಗಾಗಿ ಎ ಆರ್‌ ಎ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಬರಲಿದೆ. ಇದರಲ್ಲಿ ಭೌತಿಕ ವಸ್ತುಗಳನ್ನು ಬಳಕೆದಾರ ಯಾವುದೇ ಸಮಸ್ಯೆ ಇಲ್ಲದೆ ಬದಲಿಸಬಹುದಾಗಿದೆ. ಉದಾಹರಣೆಗೆ ಫೋನ್‌ ಬಳಕೆದಾರ 16ಎಂಪಿ ಕೆಮರಾ ಬೇಕಾದಲ್ಲಿ ಮೊದಲಿನ ಕೆಮರಾವನ್ನು ಸುಲಭವಾಗಿ ತೆಗೆದು ಇದನ್ನು ಅಳವಡಿಸಬಹುದಾಗಿದೆ.

ಸ್ಮಾರ್ಟ್‌ಫೋನ್‌ ಗಾತ್ರದ ಡ್ರೋನ್‌
ನಾವು ಇಂದು ಡ್ರೋನ್‌ ಜಮಾನದಲ್ಲಿದ್ದೇವೆ ಎಂದರೆ ತಪ್ಪಾಗಲಾರದು. ಮದುವೆ, ಜಾತ್ರೆ ಹೀಗೆ ನಾನಾ ಸಮಾರಂಭ ಅಥವಾ ಕಟ್ಟಡಗಳ ಸಂಪೂರ್ಣ ಚಿತ್ರಣಕ್ಕಾಗಿ ಡ್ರೋನ್‌ ಅನ್ನು ಬಳಸಲಾಗುತ್ತಿದೆ. ಇಂತಹ ಡ್ರೋನ್‌ ಈ ವರ್ಷದಲ್ಲಿ ಮತ್ತಷ್ಟು ಸ್ಮಾರ್ಟ್‌ ಆಗುತ್ತಿದೆ. ಸ್ಮಾರ್ಟ್‌ಫೋನ್‌ ಗಾತ್ರದ ಅತ್ಯಂತ ಚಿಕ್ಕದಾದ ಮಿನಿ ಡ್ರೋನ್‌ನನ್ನು ಅಭಿವೃದ್ಧಿ ಪಡಿಸಲಾಗಿದ್ದು ಇದು 2020ರಲ್ಲಿ ಹೆಚ್ಚು ಜನರನ್ನು ಆಕರ್ಷಿಸುವ ನಿರೀಕ್ಷೆ ಇದೆ.

ಸ್ಮಾರ್ಟ್‌ ಲೆನ್ಸ್‌
ಮೈಕ್ರೋಸಾಫ್ಟ್ ಸ್ಮಾರ್ಟ್‌ ಲೆನ್ಸ್‌ನು° ತಯಾರಿಸಿದ್ದು ಇದು ಹೆಡ್‌ಸೆಟ್‌ ರೀತಿಯಲ್ಲಿದೆ. ದೂರದೃಷ್ಟಿಗೆ ಚಿಕಿತ್ಸೆಯಾಗಿ ಕೂಡ ಇದನ್ನು ಬಳಸಲಾಗುತ್ತದೆ. ಆಟೋ ಫೋಕಸ್‌, ಥರ್ಮಲ್‌ ಇಮೇಜಿಂಗ್‌ಗೆ ಇದು ಸಹಾಯಕವಾಗಿದೆ.

 ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next