Advertisement

ಎಲ್ಲೋ ಕಟ್ಟಿ ಇನ್ನೆಲ್ಲೋ ಜೋಡಿಸುವ ತಂತ್ರಜ್ಞಾನದಲ್ಲಿ ಕಟ್ಟಡ ನಿರ್ಮಾಣ

02:08 PM Aug 12, 2020 | sudhir |

ಹೊಸದಿಲ್ಲಿ: ಸಿಂಗಾಪುರದಲ್ಲಿ ಎರಡು ಗಗನಚುಂಬಿ ವಸತಿ ಸಂಕೀರ್ಣಗಳು ಇಷ್ಟರಲ್ಲೇ ತಲೆ ಎತ್ತಲಿವೆ. ಅದರಲ್ಲೇನು ವಿಶೇಷ ಅಂದ್ರೆ, ಆ ಕಟ್ಟಡಗಳು ಮಲೇಷ್ಯಾದಲ್ಲಿ ಬಿಡಿಭಾಗಗಳ ರೂಪದಲ್ಲಿ ತಯಾರಾಗುತ್ತಿದ್ದು, ಸಿಂಗಾಪುರದಲ್ಲಿ ಆ ಬಿಡಿಭಾಗಗಳನ್ನು ಜೋಡಿಸಿ ಕಟ್ಟಡವಾಗಿ ನಿರ್ಮಾಣ ಮಾಡಲಾಗುತ್ತದೆ.

Advertisement

ಅಚ್ಚರಿಯೆನಿಸಿದರೂ ಇದು ಸತ್ಯ. ಪ್ರೀ ಫ್ಯಾಬ್ರಿಕೇಟೆಡ್‌ ಪ್ರೀ ಫಿನಿಶ್ಡ್ ವಾಲ್ಯುಮೆಟ್ರಿಕ್‌ ಕನ್ಸ್ ಟ್ರಕ್ಷನ್’ (ಪಿಪಿವಿಸಿ) ಎಂಬ ತಂತ್ರಜ್ಞಾನದಡಿ ಮಲೇಷ್ಯಾದ ಎಡಿಡಿಪಿ ಆರ್ಕಿಟೆಸ್ಟ್ಸ್ ಸಂಸ್ಥೆಯ ಇಂಜಿನಿಯರ್ಗಳು ಈ ಕಟ್ಟಡಗಳ ಮನೆಗಳನ್ನು ಅಲ್ಲಿಯೇ ನಿರ್ಮಿಸುತ್ತಿದ್ದಾರೆ. ಆನಂತರ ಅವುಗಳನ್ನು ತಂದು ಸಿಂಗಾಪುರದಲ್ಲಿ ಜೋಡಿಸಲಾಗುತ್ತದೆ. ಅವೆನ್ಯೂ ಸೌತ್‌ ರೆಸಿಡೆನ್ಸಸ್’ ಎಂಬ ಹೆಸರಿನ ಈ ಅವಳಿ ಕಟ್ಟಡಗಳಲ್ಲಿ ಒಟ್ಟಾರೆ 988 ಫ್ಲಾಟ್ ಗಳು ಇರಲಿದ್ದು, ಪ್ರತಿಯೊಂದು ಟರ್ವ 630 ಅಡಿ ಎತ್ತರದಲ್ಲಿರಲಿವೆ.

ನಿರ್ಮಾಣ ಹೇಗೆ?: ಪ್ರತಿಯೊಂದು ಮನೆಯ ಬಾಹ್ಯ ಹಾಗೂ ಒಳಾಂಗಣಗಳ ಮೂಲ ಕಟ್ಟಡವನ್ನು ಬಾಕ್ಸ್ ಗಳ ರೀತಿಯಲ್ಲಿ ಮೊದಲು ತಯಾರಿಸಲಾಗುತ್ತದೆ. ಆನಂತರ ಅವುಗಳಿಗೆ ನೀರು, ವಿದ್ಯುತ್, ಅಡುಗೆ ಅನಿಲ ಮುಂತಾದ ಸಂಪರ್ಕಗಳಿಗೆ ಪೈಪುಗಳನ್ನು ಅಳವಡಿಸಿ ಜಾಗ ಬಿಟ್ಟಿರಲಾಗುತ್ತದೆ. ಆ ಬೇಸಿಕ್‌ ಮನೆಯನ್ನು ಸಿಂಗಾಪುರಕ್ಕೆ ರವಾನಿಸಲಾಗುತ್ತದೆ.

ಸಿಂಗಾಪುರಕ್ಕೆ ಆಗಮಿಸಿದ ಮೇಲೆ ಇಂಜಿನಿಯರ್ಗಳು ಇನ್ನಷ್ಟು ಸೌಕರ್ಯಗಳನ್ನು ಕಲ್ಪಿಸಿ ಅದನ್ನು ನಿರ್ಮಾಣದ ಸ್ಥಳಕ್ಕೆ ಕೊಂಡೊಯ್ಯುತ್ತಾರೆ. ಹಾಗೆ ಸಾಗುವ ಬಾಕ್ಸ್ ಮಾದರಿಯ ಮನೆಗಳು ಶೇ. 80ರಷ್ಟು ಪೂರ್ಣಗೊಂಡಿರುತ್ತವೆ. ಅಲ್ಲಿ ಅವುಗಳನ್ನು ಕ್ರೇನ್ಸ್ ಗಳ ಮೂಲಕ ಒಂದರ ಮೇಲೊಂದು ಜೋಡಿಸಿ ಕಾಂಕ್ರೀಟ್‌ ಸಹಾಯದಿಂದ ಗಟ್ಟಿಯಾಗಿ ನಿಲ್ಲಿಸಲಾಗುತ್ತದೆ. ಎಲ್ಲಾ ಮನೆಗಳನ್ನು ಜೋಡಿಸಿದ ನಂತರ ವಿದ್ಯುತ್, ನೀರು ಇತ್ಯಾದಿ ಸಂಪರ್ಕಗಳನ್ನು ನೀಡಿ ಒಳಾಂಗಣಗಳಲ್ಲಿ ಪೀಠೊಪಕರಣಗಳ, ಇತ್ಯಾದಿಗಳನ್ನು ಅಳವಡಿಸಿ ಅಂತಿಮ ಸ್ಪರ್ಶ ನೀಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next