Advertisement

“ಯುಟ್ಯೂಬರ್‌’ಗಳ ಗಿಫ್ಟ್ ಗಳ ಮೇಲೆ ತೆರಿಗೆ! : ಜು. 1ರಿಂದ ಜಾರಿಗೊಳ್ಳಲಿರುವ ಹೊಸ ನಿಯಮಗಳು 

06:16 PM Jun 21, 2022 | Team Udayavani |

ನವದೆಹಲಿ: ಜುಲೈ 1ರಿಂದಲೇ ಟಿಡಿಎಸ್‌(ಮೂಲದಿಂದ ತೆರಿಗೆ ಕಡಿತ)ಗೆ ಸಂಬಂಧಿಸಿದ ಹೊಸ ನಿಯಮವು ಜಾರಿಗೆ ಬರಲಿದ್ದು, ವೈದ್ಯರು ಹಾಗೂ ಸಾಮಾಜಿಕ ಜಾಲತಾಣಗಳ ಇನ್‌ಫ್ಲ್ಯೂಯೆನ್ಸರ್‌ಗಳ ಮೇಲೆ ಇದು ಪರಿಣಾಮ ಬೀರಲಿದೆ.

Advertisement

ಕಳೆದ ಬಜೆಟ್‌ನಲ್ಲಿ ಘೋಷಿಸಲಾಗಿದ್ದ ಈ ಹೊಸ ನಿಬಂಧನೆಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ(ಸಿಬಿಡಿಟಿ) ಸೋಮವಾರ ಬಿಡುಗಡೆ ಮಾಡಿದೆ. ಅದರಂತೆ, ಸೇಲ್ಸ್‌ ಪ್ರೊಮೋಷನ್‌ಗಾಗಿ ಕಂಪನಿಗಳು ನೀಡುವ ಉಡುಗೊರೆಗಳನ್ನು ಸ್ವೀಕರಿಸುವಂಥ ವೈದ್ಯರು ಮತ್ತು ಸಾಮಾಜಿಕ ಜಾಲತಾಣಗಳ ಇನ್‌ಫ‌ೂÉಯೆನ್ಸರ್‌ಗಳು ಆ ಉಡುಗೊರೆಗಳ ಮೇಲೆ ಶೇ.10ರಷ್ಟು ಟಿಡಿಎಸ್‌ ಪಾವತಿಸಬೇಕಾಗುತ್ತದೆ. ವರ್ಷಕ್ಕೆ 20 ಸಾವಿರ ರೂ.ಗಳಿಗಿಂತ ಹೆಚ್ಚಿನ ಮೊತ್ತದ ಉಡುಗೊರೆಗಳಿಗೆ ಇದು ಅನ್ವಯವಾಗುತ್ತದೆ.

ವೈದ್ಯರಿಗೆ ಹೇಗೆ ಅನ್ವಯ? :

ವೈದ್ಯರಿಗೆ ಔಷಧ ಕಂಪನಿಗಳು ನೀಡುವ ಉಚಿತ ಔಷಧಗಳ ಸ್ಯಾಂಪಲ್‌ಗ‌ಳು, ವಿದೇಶ ಪ್ರವಾಸಕ್ಕೆಂದು ನೀಡುವ ವಿಮಾನದ ಟಿಕೆಟ್‌ಗಳು, ಉಚಿತ ಐಪಿಎಲ್‌ ಟಿಕೆಟ್‌ಗಳಿಗೆ ಟಿಡಿಎಸ್‌ ಪಾವತಿಸಬೇಕಾಗುತ್ತದೆ. ರಿಯಾಯ್ತಿ ಅಥವಾ ರಿಬೇಟ್‌ ಹೊರತುಪಡಿಸಿ ಕಂಪನಿಗಳು ನೀಡುವ ನಗದು, ಕಾರು, ಟಿವಿ, ಕಂಪ್ಯೂಟರ್‌ಗಳು, ಚಿನ್ನದ ನಾಣ್ಯಗಳು ಮತ್ತು ಮೊಬೈಲ್‌ ಫೋನ್‌ಗಳೂ ಇದರ ವ್ಯಾಪ್ತಿಗೆ ಬರುತ್ತದೆ. ಇಂಥ ಉಡುಗೊರೆಗಳ ಕುರಿತು ವೈದ್ಯರು ಆದಾಯ ತೆರಿಗೆ ರಿಟರ್ನ್Õ ಸಲ್ಲಿಕೆ ವೇಳೆ ನಮೂದಿಸಬೇಕು ಎಂದು ವಿತ್ತ ಸಚಿವಾಲಯದ ಜಂಟಿ ಕಾರ್ಯದರ್ಶಿ ಕಮಲೇಶ್‌ ಸಿ. ವಾಷ್ಣೆì ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮಗಳ ಪ್ರಭಾವಿಗಳಿಗೂ ಅನ್ವಯ :

Advertisement

ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದಾದರೂ ಕಂಪನಿಯ ಉತ್ಪನ್ನಗಳ ಮಾರ್ಕೆಟಿಂಗ್‌ ಮಾಡುವ, ಅದರ ಬಗ್ಗೆ ಪ್ರಚಾರ ನೀಡುವ ವ್ಯಕ್ತಿಗಳಿಗೆ ಆ ಕಂಪನಿಗಳು ನೀಡುವಂಥ ಉಡುಗೊರೆಗಳು ಹಾಗೂ ಸಲಕರಣೆಗಳಿಗೂ ತೆರಿಗೆ ಪಾವತಿಸಬೇಕಾಗುತ್ತದೆ. ಉದಾಹರಣೆಗೆ, ಕಾರು, ಮೊಬೈಲ್‌, ಉಡುಪು, ಕಾಸ್ಮೆಟಿಕ್ಸ್‌ ಇತ್ಯಾದಿ. ಒಂದು ವೇಳೆ ಆ ಸಾಧನಗಳನ್ನು ಕಂಪನಿಗೆ ಹಿಂತಿರುಗಿಸಬೇಕೆಂದರೆ, ಅದಕ್ಕೆ ಟಿಡಿಎಸ್‌ ಅನ್ವಯವಾಗುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next