Advertisement
ಮಂತ್ರೋಪದೇಶಶನಿವಾರ ಬೆಳಗ್ಗೆ ಶಿಷ್ಯನಿಗೆ ಗುರುಗಳು ಅಷ್ಟಮಹಾಮಂತ್ರಗಳನ್ನು ಉಪ ದೇಶಿಸಿದರು. ಇದೇ ವೇಳೆ ವಾಯು ಸ್ತುತಿ ಪುರಶ್ಚರಣೆ ಹೋಮವನ್ನು ವೈದಿಕರು ನಡೆಸಿದರು.
ಶನಿವಾರ ಸಂಜೆಯೂ ನೂತನ ಯತಿಗಳು ಶುಕ್ರವಾರ ಸಂಜೆಯಂತೆ “ನಾಸ್ತಿಕ್ಯವಾದ ನಿರಾಕರಣೆ, ವಿಷ್ಣು ಸರ್ವೋತ್ತಮತ್ವದ ಸಮರ್ಥನೆ’ ವಿಷಯವಾಗಿ ವಾಕ್ಯಾರ್ಥ ಗೋಷ್ಠಿಯ ಸಂವಾದದಲ್ಲಿ ಪಾಲ್ಗೊಂಡರು. ಶ್ರೀ ವಿದ್ಯಾಧೀಶತೀರ್ಥರು, ಶ್ರೀ ಈಶಪ್ರಿಯ ತೀರ್ಥರು ನೂತನ ಶ್ರೀಗಳ ವಾಕಟುತ್ವ ವೃದ್ಧಿಸಲಿ ಎಂದು ಹಾರೈಸಿದರು. ರವಿವಾರ ಮಧ್ಯಾಹ್ನ 12ಕ್ಕೆ ಹಿರಿಯ ಸ್ವಾಮೀಜಿಯವರು ಶಿಷ್ಯನನ್ನು ಮಠದ ಉತ್ತರಾಧಿಕಾರಿಯಾಗಿಸುವ ಧಾರ್ಮಿಕ ಪ್ರಕ್ರಿಯೆಗಳನ್ನು ನಡೆಸು ವರು. ಸಾರ್ವಜನಿಕರು ವೀಕ್ಷಿಸಲು ಅನುವಾಗುವಂತೆ ರಾಜಾಂಗಣದಲ್ಲಿ ನೇರ ಪ್ರಸಾರ ವ್ಯವಸ್ಥೆ ಮಾಡಲಾಗಿದೆ.
Related Articles
ರವಿವಾರ ಬೆಳಗ್ಗೆ 10 ಗಂಟೆಯೊಳಗೆ ಹಿರಿಯ ಸ್ವಾಮೀಜಿ ಶ್ರೀಕೃಷ್ಣನಿಗೆ ನಿತ್ಯದ ಮಹಾ ಪೂಜೆಯನ್ನು ಪೂರೈಸ ಲಿದ್ದಾರೆ. ಇದೇ ವೇಳೆ ಶ್ರೀಕೃಷ್ಣ ಮಠದ ಗರ್ಭಗುಡಿ ಹೊರಪೌಳಿ, ರಾಜಾಂಗಣದಲ್ಲಿ ವೇದ, ಭಾಗವತ, ಮಹಾಭಾರತಾದಿ ಗ್ರಂಥಗಳ ಪಾರಾಯಣ, ಮಹಿಳೆಯರಿಂದ ಲಕ್ಷ್ಮೀಶೋಭಾನೆ ಪಠನ ನಡೆಯಲಿದೆ. ಸುಮಾರು 600 ವರ್ಷಗಳ ಹಿಂದೆ ಪಲಿಮಾರು ಮಠದ ಆರನೆಯ ಯತಿ ಶ್ರೀ ರಾಜರಾಜೇಶ್ವರತೀರ್ಥರು ರಚಿಸಿದ “ಮಂಗಲಾಷ್ಟಕ’ವನ್ನು ದೇಶಕ್ಕೆ ಒಳಿತಾಗಲೆಂದು ಹಾರೈಸಿ ಬಾಲಕರು ಪಠಿಸಲಿದ್ದಾರೆ. ಇದಕ್ಕೆ “ಮಂಗಲ ಭಾರತ ನಿರ್ಮಾಣ’ ಎಂದು ಹೆಸರಿಸಲಾಗಿದೆ.
Advertisement
ಇದೇ ದಿನ ರಾಜರಾಜೇಶ್ವರತೀರ್ಥರ ಗುರು ಶ್ರೀ ವಿದ್ಯಾಮೂರ್ತಿತೀರ್ಥರ ಆರಾಧನೋತ್ಸವವೂ ಆಗಿರುವುದ ರಿಂದ ಶಿಷ್ಯಸ್ವೀಕಾರದ ವೇಳೆ ಸಾಮೂಹಿಕ ಅಭಿಯಾನ ಕೈಗೆತ್ತಿಕೊಳ್ಳ ಲಾಗಿದೆ. “ಮಂಗಲಾಷ್ಟಕ’ ಕುರಿತು “ಉದಯವಾಣಿ’ ಸರಣಿ ಲೇಖನ ಗಳನ್ನು ಪ್ರಕಟಿಸಿದ್ದು, ಪುಸ್ತಕವಾಗಿ ಮಠದಿಂದ ಮುದ್ರಿಸಿ ಹಂಚಲಾಗಿದೆ.