Advertisement
ಬೆಳಗಾವಿ ಗಡಿ ವಿವಾದ ಕೆಣಕಲು ಎಂಇಎಸ್ ಕುತಂತ್ರ ನಡೆಸಿದ್ದು, ಹೆಚ್ಚು ಅಭ್ಯರ್ಥಿಗಳನ್ನು ನಿಲ್ಲಿಸಿ, ಮರಾಠಿ ಭಾಷಿಕರ ಮತಗಳನ್ನು ವಿಭಜಿಸುವುದಲ್ಲದೆ, ಗೊಂದಲ ಸೃಷ್ಟಿಸಲು ಷಡ್ಯಂತ್ರ ರೂಪಿಸಿದೆ. 1996ರಲ್ಲಿ 452 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಎಂಇಎಸ್‌ಗೆ ಭಾರೀ ಮುಖಭಂಗವಾಗಿತ್ತು. ಎಲ್ಲ ಅಭ್ಯರ್ಥಿಗಳ ಠೇವಣಿ ಜಪ್ತಿ ಆಗಿತ್ತು. ಈಗ ಮತ್ತೆ ಅಂತಹುದೇ ದುಸ್ಸಾಹಸಕ್ಕೆ ಕೈ ಹಾಕಲು ಸಜ್ಜಾಗಿದೆ.
Related Articles
Advertisement
ಓಟ್‌ಬ್ಯಾಂಕ್ ವೃದ್ಧಿಗೆ ಪ್ಲಾನ್: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಸೋಲು ಕಂಡಿರುವ ಎಂಇಎಸ್‌ಗೆ ಈಗ ಅಸ್ತಿತ್ವ ಇಲ್ಲದಂತಾಗಿದೆ. ಜನರ ವಿರೋಧ ಹೆಚ್ಚಾಗುತ್ತಿದ್ದಂತೆ ಎಂಇಎಸ್‌ನ ಅನೇಕ ಮುಖಂಡರು ರಾಷ್ಟ್ರೀಯ ಪಕ್ಷಗಳ ಮೊರೆ ಹೋಗುತ್ತಿದ್ದಾರೆ.
ಬೆರಳೆಣಿಕೆಯಷ್ಟು ಮುಖಂಡರು ಎಂಇಎಸ್‌ನ ಪ್ರಾಬಲ್ಯ ಮೆರೆಯಲು ಮುಂದಾಗಿದ್ದಾರೆ. ಹೀಗಾಗಿ, ಲೋಕಸಭಾ ಚುನಾವಣೆ ಬಳಿಕ ನಡೆಯುವ ಮಹಾನಗರ ಪಾಲಿಕೆ, ಜಿಪಂ, ತಾಪಂ, ಗ್ರಾಪಂ ಚುನಾವಣೆಗಳಲ್ಲಿ ಹೆಚ್ಚೆಚ್ಚು ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತಯಾರಿ ನಡೆಸುತ್ತಿದೆ. ಇದರಿಂದ ಓಟ್‌ಬ್ಯಾಂಕ್ ಹೆಚ್ಚಿಸಿಕೊಂಡು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುವ ಯೋಜನೆ ಈ ಪಕ್ಷದ್ದು.
ಇದು ಹೊಸದೇನಲ್ಲ1985ರ ವೇಳೆಗೆ ಬೆಳಗಾವಿಯಲ್ಲಿ ಬೋಗಸ್(ನಕಲಿ) ಮತದಾನ ನಡೆಯುತ್ತಿತ್ತು. ಹೀಗಾಗಿ,ಇದನ್ನು ತಡೆಯುವಂತೆ ಹಾಗೂ ಮತದಾನ ಚೀಟಿ ವಿತರಿಸುವಂತೆ ಆಗ್ರಹಿಸಿ ಚುನಾವಣಾ ಆಯೋಗದ ಮೇಲೆ ಒತ್ತಡ ತರಲು ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಭಾಷಿಕ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಬೆಳಗಾವಿ ವಿಧಾನಸಭೆ ಚುನಾವಣೆಯಲ್ಲಿ ಕನ್ನಡದ 305 ಜನಸ್ಪರ್ಧೆ ಮಾಡಿದ್ದರು. ಇದನ್ನೇ ನಕಲು ಮಾಡಿದ ಎಂಇಎಸ್ 1996ರಲ್ಲಿ ಲೋಕಸಭೆಗೆ 452 ಜನರನ್ನು ಅಖಾಡಕ್ಕಿಳಿಸಿತ್ತು. ಈಗ ಮತ್ತೆ 100ಕ್ಕೂ ಹೆಚ್ಚು ಜನರನ್ನು ಅಖಾಡಕ್ಕಿಳಿಸುವ ದುಸ್ಸಾಹಸಕ್ಕೆ ಕೈ ಹಾಕುತ್ತಿದೆ. ಗಡಿ ವಿವಾದ ಈಗಾಗಲೇ ಸುಪ್ರೀಂಕೋರ್ಟ್ ಅಂಗಳದಲ್ಲಿದೆ. ಆದರೆ, ಎಂಇಎಸ್ ಗಡಿ ವಿಷಯವನ್ನೇ ಇಟ್ಟುಕೊಂಡು ಹೆಚ್ಚು ಅಭ್ಯರ್ಥಿಗಳನ್ನು ನಿಲ್ಲಿಸಿ ಚುನಾವಣೆಗೆ ಅಡ್ಡಿಪಡಿಸಲು ಮುಂದಾಗುತ್ತಿದೆ. ಪರೋಕ್ಷವಾಗಿ ಒತ್ತಡ ಹೇರುವ ಕುತಂತ್ರ ಅಡಗಿದೆ. ಒಂದು ವೇಳೆ ನ್ಯಾಯಾಂಗ ನಿಂದನೆಯಾದರೆ ಕೂಡಲೇ ಸರ್ಕಾರ ಹಾಗೂ ಚುನಾವಣಾ ಆಯೋಗ ಸುಪ್ರೀಂಕೋರ್ಟ್ ಗಮನಕ್ಕೆ ತರುವ ಕೆಲಸ ಮಾಡಬೇಕು. ಕಾನೂನು ಕ್ರಮಕ್ಕೆ ಮುಂದಾಗಬೇಕು.
● ಅಶೋಕ ಚಂದರಗಿ, ಕನ್ನಡ ಹೋರಾಟಗಾರ ಭೈರೋಬಾ ಕಾಂಬಳೆ