Advertisement

Ram Mandir; ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿದ ರಾಮ ಮೂರ್ತಿ ಆಯ್ಕೆ

05:10 PM Jan 15, 2024 | Team Udayavani |

ಹೊಸದಿಲ್ಲಿ: ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಗೊಳ್ಳಲು ಮೈಸೂರು ಮೂಲದ ಅರುಣ್ ಯೋಗಿರಾಜ್ ಕೆತ್ತನೆ ಮಾಡಿದ ರಾಮಲಲ್ಲಾನ ಹೊಸ ಪ್ರತಿಮೆ ಆಯ್ಕೆಯಾಗಿದೆ

Advertisement

ಈ ಬಗ್ಗೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ಸ್ಪಷ್ಟಪಡಿಸಿದ್ದಾರೆ.

ರಾಮ ಲಲ್ಲಾ ಪ್ರಸ್ತುತ ಪ್ರತಿಮೆಯನ್ನು ಹೊಸ ರಾಮಮಂದಿರದ ಗರ್ಭಗುಡಿಯಲ್ಲಿ ಇರಿಸಲಾಗುವುದು ಎಂದಿದ್ದಾರೆ.

ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್ ಸೇರಿ ಮೂವರು ಶಿಲ್ಪಿಗಳು ರಾಮನ ಪ್ರತಿಮೆ ಕೆತ್ತಿದ್ದಾರೆ. ಇವರಲ್ಲದೆ, ಬೆಂಗಳೂರಿನ ಗಣೇಶ್ ಭಟ್ ಮತ್ತು ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಇತರ ಇಬ್ಬರು ಶಿಲ್ಪಿಗಳು.

Advertisement

ಆರು ತಿಂಗಳ ಕಾಲ ಅರುಣ್ ಯೋಗಿರಾಜ್ ಅವರು ಮೂರ್ತಿಯ ಬಗ್ಗೆ ಕೂಲಂಕುಷವಾಗಿ ಕೆಲಸ ಮಾಡಿದ್ದಾರೆ. ಪೀಠವನ್ನು ಒಳಗೊಂಡಿರುವ ಎಂಟು ಅಡಿ ಎತ್ತರದ ವಿಗ್ರಹವು ಮೂರೂವರೆ ಅಡಿ ಅಗಲವನ್ನು ವ್ಯಾಪಿಸಿದೆ, ಸುತ್ತಲೂ ವಿಸ್ತಾರವಾದ ಪ್ರಭಾವಳಿಯನ್ನು ಒಳಗೊಂಡಿದೆ. ಪ್ರತಿಮೆಯ ಬಾಲ್ಯದಲ್ಲಿ ಭಗವಾನ್ ರಾಮನನ್ನು ಚಿತ್ರಿಸುತ್ತದೆ.

ಜನವರಿ 22 ರಂದು ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ನೂರಾರು ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಪ್ರಸ್ತುತ ದೇಶದ ಬಹುಬೇಡಿಕೆಯ ಶಿಲ್ಪಿಗಳಲ್ಲಿ ಒಬ್ಬರಾಗಿರುವ ಅರುಣ್ ಯೋಗಿರಾಜ್ ಅವರು ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ತಂದೆ ಯೋಗಿರಾಜ್ ಮತ್ತು ಅಜ್ಜ ಬಸವಣ್ಣ ಶಿಲ್ಪಿ ಅವರಿಂದ ಪ್ರಭಾವಿತರಾಗಿ ಶಿಲ್ಪಕಲೆಯ ಜಗತ್ತಿನಲ್ಲಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು.

ಎಂಬಿಎ ವ್ಯಾಸಂಗ ಮಾಡಿ ಕಾರ್ಪೊರೇಟ್ ವಲಯದಲ್ಲಿ ಕೆಲಸ ಮಾಡುತ್ತಿದ್ದರೂ, ಶಿಲ್ಪಕಲೆಯ ಬಗ್ಗೆ ಅರುಣ್ ಅವರ ಸಹಜವಾದ ಉತ್ಸಾಹವು ಅವರನ್ನು 2008 ರಲ್ಲಿ ಮತ್ತೆ ಕಲಾ ಪ್ರಕಾರಕ್ಕೆ ಸೆಳೆಯಿತು. ರಾಷ್ಟ್ರವ್ಯಾಪಿ ಮನ್ನಣೆಯನ್ನು ಗಳಿಸಿದ  ಅರುಣ್ ಅವರು ಇಂಡಿಯಾ ಗೇಟ್ ಬಳಿಯ ಅಮರ್ ಜವಾನ್ ಜ್ಯೋತಿಯ ಹಿಂದೆ ಸುಭಾಷ್ ಚಂದ್ರ ಬೋಸ್ ಅವರ 30 ಅಡಿ ಪ್ರತಿಮೆ, ಶಂಕರಾಚಾರ್ಯ ಮೂರ್ತಿ ಸೇರಿ ಹಲವು ಪ್ರಸಿದ್ಧ ಪ್ರತಿಮೆಗಳನ್ನು ಕೆತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next