Advertisement

ಹೊಸ ಪ್ರಭೇದದ ಕಪ್ಪೆಯ ಅನ್ವೇಷಣೆ

07:45 AM May 17, 2018 | Karthik A |

ಉಳ್ಳಾಲ: ಮಂಗಳೂರು ವಿಶ್ವವಿದ್ಯಾಲಯದ ಸಂಶೋಧಕರು ಹಾಗೂ ATREE (Ashoka trust for research in Ecology and the Environment) ವಿಜ್ಞಾನಿಗಳು ಜತೆಗೂಡಿ ಮಂಗಳೂರು ನಗರದಲ್ಲಿ ಹೊಸ ಕಪ್ಪೆಯ ಅನ್ವೇಷಣೆ (ಡಿಸ್ಕವರಿ) ಮಾಡಿರುತ್ತಾರೆ. ಈ ಹೊಸ ಪ್ರಭೇದದ ಕಪ್ಪೆ ಕರ್ನಾಟಕದ ಕರಾವಳಿ ಮಂಗಳೂರು ನಗರದ ಬೈಕಂಪಾಡಿಯಿಂದ ಅನ್ವೇಷಣೆ ನಡೆದಿದೆ.

Advertisement

ಈ ಕಪ್ಪೆಯು ಸಣ್ಣ- ಬಾಯಿಯ (ಮೈಕ್ರೊಹಿಲಾ)(Microhyla) ಕಪ್ಪೆಗಳ ಜಾತಿ (Genus)ಗೆ ಸೇರಿದ್ದು, ಅನ್ವೇಷಣಾ ತಂಡವು ಇದನ್ನು ಮಂಗಳೂರಿನ ಸಣ್ಣ – ಬಾಯಿಯ ಕಪ್ಪೆ (Mangaluru narrow-mouthed frog ಎಂದು ಹೆಸರಿಟ್ಟಿದೆ. Microhyla kodial (ಮೈಕ್ರೊಹಿಲಾ ಕೊಡಿಯಾಲ್‌) ಇದರ ವೈಜ್ಞಾನಿಕ ಹೆಸರು, ಕೊಡಿಯಾಲ್‌ ಎಂದರೆ ಕೊಂಕಣಿ ಭಾಷೆಯಲ್ಲಿ ಮಂಗಳೂರು ಎಂದರ್ಥ. ಮಂಗಳೂರು ನಗರದಲ್ಲಿ ಈ ಪ್ರಬೇಧವು ಪ್ರಥಮ ಭಾರಿ ಕಾಣಸಿಕ್ಕಿದರಿಂದ ಈ ಕಪ್ಪೆಗೆ ಈ ಹೆಸರನ್ನು ಇಡಲಾಗಿದೆ . ಹಾಗೆಯೇ ಮಂಗಳೂರಿನ ಜೀವವೈವಿದ್ಯತೆಯನ್ನು ಜಗತ್ತಿಗೆ ಪರಿಚಯಿಸುವ ನಿಟ್ಟಿನಿಂದ ಈ ಹೆಸರನ್ನು ಇಡಲಾಗಿದೆ.  ಈ ಪ್ರಬೇಧವು ಇತರ ಎಲ್ಲ ಕಪ್ಪೆ ಅನ್ವೇಷಣೆಗಳಿಗೆ ಹೋಲಿಸಿದಲ್ಲಿ ಅತ್ಯಂತ ಗಮನಾರ್ಹವಾಗಿದೆ , ಈ ಪ್ರಬೇಧವು ಕೇವಲ ನಗರ ಪ್ರದೇಶದಿಂದ ದಾಖಲಿಸಲಾಗಿದೆ.

ಈ ಕಪ್ಪೆಯ ಜೆನೆಟಿಕ್‌ ಅನಾಲಿಸಿಸ್‌ ಪ್ರಕಾರ ಇದರ ಅತ್ಯಂತ ಹತ್ತಿರದ ಪ್ರಭೇದದ ಕಪ್ಪೆಗಳು ಆಗ್ನೇಯ ಏಷ್ಯದಲ್ಲಿ ಇರುವುದನ್ನು ಅಂದಾಜು ಮಾಡಲಾಗಿದೆ . ಈ ಕಪ್ಪೆ ಆಗ್ನೇಯ ಏಷ್ಯಾದಿಂದ ಇಲ್ಲಿಗೆ ಮರಸಾಗಾಣಿಕೆಯ ಮೂಲಕ ಮಂಗಳೂರಿನ ಬಂದರಿನ ಮೂಲಕ ಪ್ರವೇಶಿಸಿರಬಹುದು ಎಂದು ಸಂಶೋಧನಾ ತಂಡ ಊಹಿಸು ತ್ತದೆ. ಹಲವು ವರ್ಷಗಳಿಂದ ಈ ಜಾಗದಲ್ಲೇ ಮರದ ರಾಶಿ ಹಾಕಲಾಗುತ್ತಿತ್ತು. ಆದರೂ, ಇದಕ್ಕೆ ಖಚಿತ ಉತ್ತರ ನೀಡಲು ಇನ್ನಷ್ಟು ಸಂಶೋಧನೆ ನಡೆಯಬೇಕಿದೆ.

ಮಂಗಳೂರು ವಿವಿಯ ಅನ್ವಯಿಕ ಪ್ರಾಣಿ ಶಾಸ್ತ್ರ
ವಿಭಾಗದ ವಿನೀತ್‌ ಕುಮಾರ್‌, ರಾಧಾಕೃಷ್ಣ ಉಪಾಧ್ಯಾಯ ಹಾಗೂ ಪ್ರೊ| ರಾಜಶೇಖರ್‌  ಪಾಟೀಲ್‌ ಅವರು ಅತ್ರೀ ಪರಿಸರ ವಿಜ್ಞಾನ ಸಂಸ್ಥೆಯ ಡಾ| ಅರವಿಂದ ಮಧ್ಯಸ್ಥ ಮತ್ತು ಸಂಶೋದನಾ ವಿದ್ಯಾರ್ಥಿ ಅನ್ವೇಷಾ ಸಾಹ ಹಾಗೂ
ಮಂಗಳೂರಿನ ಅಲೋಸಿಯಸ್‌ ಪಿಯು ಕಾಲೇಜಿನ ಗೋಡ್ವಿನ್‌ ಡಿ’ಸೋಜಾರನ್ನು ತಂಡ ಒಳಗೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next