Advertisement

ಜೆಎನ್‌ಯು ನಲ್ಲಿ ಹೊಸ ನಿಯಮಗಳು: ಧರಣಿಗೆ 20,000 ರೂ. ದಂಡ, ಪ್ರವೇಶ ರದ್ದು

02:05 PM Mar 02, 2023 | Team Udayavani |

ನವದೆಹಲಿ : ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ಧರಣಿ ನಡೆಸಿದರೆ 20,000 ರೂಪಾಯಿ ದಂಡ, ಹಿಂಸಾಚಾರವನ್ನು ನಡೆಸಿದರೆ ಪ್ರವೇಶ ರದ್ದತಿ ಅಥವಾ 30,000 ರೂ.ವರೆಗಿನ ದಂಡವನ್ನು ಎದುರಿಸಬೇಕಾಗುತ್ತದೆ ಎಂದು ಇತ್ತೀಚಿನ ನಿಯಮಗಳನ್ನು ರೂಪಿಸಲಾಗಿದೆ.

Advertisement

10 ಪುಟಗಳ ‘ಜೆಎನ್‌ಯು ವಿದ್ಯಾರ್ಥಿಗಳ ಶಿಸ್ತಿನ ನಿಯಮಗಳು ಮತ್ತು ಸರಿಯಾದ ನಡವಳಿಕೆ’ ಯಲ್ಲಿ ಪ್ರತಿಭಟನೆಗಳು ಮತ್ತು ಫೋರ್ಜರಿಗಳಂತಹ ವಿವಿಧ ರೀತಿಯ ಕೃತ್ಯಗಳಿಗೆ ಶಿಕ್ಷೆಗಳನ್ನು ಮತ್ತು ಪ್ರಾಕ್ಟೋರಿಯಲ್ ವಿಚಾರಣೆ ಮತ್ತು ಹೇಳಿಕೆಯನ್ನು ದಾಖಲಿಸುವ ಕಾರ್ಯವಿಧಾನಗಳನ್ನು ವಿಧಿಸಲಾಗಿದೆ.

ನಿಯಮಗಳು ಫೆಬ್ರವರಿ 3 ರಂದು ಜಾರಿಗೆ ಬರಲಿದ್ದು . ಬಿಬಿಸಿ ಸಾಕ್ಷ್ಯಚಿತ್ರದ ಪ್ರದರ್ಶನದ ಮೇಲೆ ವಿಶ್ವವಿದ್ಯಾನಿಲಯವು ಪ್ರತಿಭಟನೆಗಳಿಗೆ ಸಾಕ್ಷಿಯಾದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ವಿಶ್ವವಿದ್ಯಾನಿಲಯದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಎಕ್ಸಿಕ್ಯೂಟಿವ್ ಕೌನ್ಸಿಲ್ ಇದನ್ನು ಅನುಮೋದಿಸಿದೆ.

ಪಿಟಿಐಗೆ ಕಾರ್ಯಕಾರಿ ಮಂಡಳಿಯ ಸದಸ್ಯರು ಈ ವಿಷಯವನ್ನು ಹೆಚ್ಚುವರಿ ಅಜೆಂಡಾ ಆಗಿ ತರಲಾಗಿದೆ ಮತ್ತು ಕೋರ್ಟ್ ಕಾರಣಗಳಿಗಾಗಿ ಈ ದಾಖಲೆಯನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಿದ್ದಾರೆ.

ಜೆಎನ್‌ಯು ನ ಎಬಿವಿಪಿ ಕಾರ್ಯದರ್ಶಿ ವಿಕಾಸ್ ಪಟೇಲ್ ಅವರು ಹೊಸ ನಿಯಮಗಳನ್ನು ತುಘಲಕಿ ಅಧಿಕಾರ ಎಂದು ಕರೆದಿದ್ದು,ಹಳೆಯ ನೀತಿ ಸಂಹಿತೆ ಸಾಕಷ್ಟು ಪರಿಣಾಮಕಾರಿಯಾಗಿದೆ. ಈ ಕಠಿಣ ನೀತಿ ಸಂಹಿತೆಯನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.

Advertisement

ಜೂಜಾಟದಲ್ಲಿ ತೊಡಗುವುದು, ಹಾಸ್ಟೆಲ್ ಕೊಠಡಿಗಳನ್ನು ಅನಧಿಕೃತವಾಗಿ ವಶಪಡಿಸಿಕೊಳ್ಳುವುದು, ನಿಂದನೀಯ ಮತ್ತು ಅವಹೇಳನಕಾರಿ ಭಾಷೆಯ ಬಳಕೆ ಮತ್ತು ನಕಲಿ ಮಾಡುವುದು ಸೇರಿದಂತೆ 17 ಅಪರಾಧಗಳಿಗೆ ಶಿಕ್ಷೆಗಳನ್ನು ಪಟ್ಟಿ ಮಾಡಲಾಗಿದೆ. ದೂರುಗಳ ಪ್ರತಿಯನ್ನು ಪೋಷಕರಿಗೆ ಕಳುಹಿಸಲಾಗುವುದು ಎಂದು ನಿಯಮಗಳಲ್ಲಿ ಉಲ್ಲೇಖಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next