Advertisement

ಮೇಘಾಲಯ ನಿವಾಸಿಗಳ ಸುರಕ್ಷತೆಗೆ ಹೊಸ ನಿಯಮ ಜಾರಿ

12:35 PM Nov 03, 2019 | Team Udayavani |

ಶಿಲ್ಲಾಂಗ್‌: ಈಶಾನ್ಯ ರಾಜ್ಯ ಮೇಘಾಲಯದಲ್ಲಿ 24 ಗಂಟೆಗಳಿಂದ ಹೆಚ್ಚು ಕಾಲ ಇರಲು ಬಯಸುವವರು ನೋಂದಣಿ ಮಾಡಿಸಿಕೊಳ್ಳಬೇಕು. ಇಂಥದ್ದೊಂದು ನಿಯಮವನ್ನು ತಕ್ಷಣದಿಂದಲೇ ಜಾರಿಗೆ ತರಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಿ ಉದ್ಯೋಗಿಗಳಿಗೆ ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ. ಈ ಉದ್ದೇಶಕ್ಕಾಗಿ ಮೇಘಾಲಯ ನಿವಾಸಿಗಳ ಸುರಕ್ಷತೆ ಮತ್ತು ಭದ್ರತಾ ಕಾಯ್ದೆ 2016ಕ್ಕೆ ತಿದ್ದುಪಡಿ ತರುವ ಪ್ರಸ್ತಾಪಕ್ಕೆ ಅನುಮೋದನೆ ನೀಡಲಾಗಿದೆ. ಮೇಘಾಲಯದ ಬುಡಕಟ್ಟು ಜನರ ಹಿತರಕ್ಷಣೆಗೆ ಮತ್ತು ಹೊರಗಿನವರ ಒಳಿತಿಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸರಕಾರ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next