Advertisement

ಭಾರತಕ್ಕೆ ಬಂದ ಪ್ರಯಾಣಿಕರಿಗೆ ಕಡ್ಡಾಯ 7 ದಿನಗಳ ಕ್ವಾರಂಟೈನ್‌ ಇಲ್ಲ

12:23 AM Feb 11, 2022 | Team Udayavani |

ಹೊಸದಿಲ್ಲಿ: ವಿದೇಶದಿಂದ ಭಾರತಕ್ಕೆ ಬರುವ ಪ್ರಯಾಣಿಕರಿಗೆ ಕೇಂದ್ರ ಸರಕಾರ ಸಿಹಿಸುದ್ದಿ ನೀಡಿದೆ.

Advertisement

ಇದುವರೆಗೆ ವಿದೇಶದಿಂದ ವಿಮಾನದಲ್ಲಿ ಆಗಮಿಸುವ ಪ್ರಯಾಣಿಕರು ಕಡ್ಡಾಯವಾಗಿ 7 ದಿನ ಮನೆಯಲ್ಲೇ ಕ್ವಾರಂಟೈನ್‌ನಲ್ಲಿರಬೇಕಿತ್ತು. ಹಾಗೆಯೇ 8ನೇ ದಿನಕ್ಕೆ ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಿಸಿಕೊಳ್ಳ ಬೇಕಿತ್ತು.

ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವಿಯಾ ಈ ನಿರ್ಬಂಧವನ್ನು ಸಡಿಲಿಸಿದ್ದಾರೆ. ಇದರ ಬದಲು ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರ ಪೈಕಿ ಶೇ.2ರಷ್ಟು ಮಂದಿಯನ್ನು ಒಟ್ಟಾರೆಯಾಗಿ ಆಯ್ಕೆ ಮಾಡಿ ಪರೀಕ್ಷೆ ಮಾಡಲಾಗುತ್ತದೆ.

ಉಳಿದ ವರನ್ನು ಬಿಟ್ಟು ಕಳಿಸಲಾಗುತ್ತದೆ. ಇದರ ಬದಲು ಪ್ರಯಾಣಿಕರು ಮನೆಗೆ ತೆರಳಿದ ಮೇಲೆ ತಮ್ಮ ಆರೋಗ್ಯವನ್ನು 14 ದಿನಗಳ ಕಾಲ ತಾವೇ ಪರೀಕ್ಷೆಗೊಳಪಡಿಸಿಕೊಳ್ಳಬೇಕು ಎಂದು ಹೇಳಲಾಗಿದೆ. ಇದು ಪ್ರಯಾಣಿಕರಿಗೆ ತೀವ್ರ ಸಮಾಧಾನ ತರಲಿದೆ.

ಇದನ್ನೂ ಓದಿ:ಕೋವಿಡ್ ದಿಂದಾಗಿ ವಿದೇಶಗಳಲ್ಲಿ 4,355 ಭಾರತೀಯರ ಸಾವು

Advertisement

ಆದರೆ ಪ್ರಯಾಣ ಆರಂಭಕ್ಕೂ 72 ಗಂಟೆಗಳೊಳಗೆ ಪಡೆದ ಆರ್‌ಟಿಪಿಸಿಆರ್‌ ಪರೀಕ್ಷಾ ಪ್ರಮಾಣಪತ್ರ ಸಲ್ಲಿಕೆ ಕಡ್ಡಾಯ. ಜತೆೆಗೆ ಲಸಿಕೆ ಪ್ರಮಾಣಪತ್ರ ಸಲ್ಲಿಸಲು ಅವಕಾಶವಿದೆ. ಹೊಸ ಬದಲಾವಣೆ ಅಮೆರಿಕ, ಇಂಗ್ಲೆಂಡ್‌, ನ್ಯೂಜಿಲೆಂಡ್‌, ಆಸ್ಟ್ರೇಲಿಯಾ ಸೇರಿ 82 ದೇಶಗಳಿಗೆ ಅನ್ವಯಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next