ವಾಷಿಂಗ್ಟನ್: ನಮ್ಮ ನೂತನ ನಿಯಮ ಮತ್ತು ಗೌಪ್ಯತಾ ನೀತಿಯನ್ನು ಒಪ್ಪಿಕೊಳ್ಳಿ, ಇಲ್ಲದಿದ್ದರೇ ಖಾತೆ ಡಿಲೀಟ್ ಮಾಡುವುದಾಕ್ಕಿ ಎಚ್ಚರಿಸಿದ್ದ ವಾಟ್ಸಾಪ್ ಇದೀಗ ತನ್ನ ನಿರ್ಧಾರವನ್ನು ಮುಂದೂಡಿದೆ.
ಫೆಬ್ರವರಿ 8 ರಂದು ಯಾವುದೇ ಖಾತೆಯನ್ನು ಅಮಾನತು ಅಥವಾ ಡಿಲೀಟ್ ಮಾಡುವುದಿಲ್ಲ. ಬಳಕೆದಾರರ ಭದ್ರತೆ ಮತ್ತು ಖಾಸಗಿತನಕ್ಕೆ ಸಂಬಂಧಿಸಿದ ಅಪ್ ಡೇಟ್ ಮುಂದೂಡಲಾಗಿದೆ. ನಮ್ಮ ನೂತನ ಅಪ್ ಡೇಟ್ ನಿಂದ ಹಲವು ಬಳಕೆದಾರರು ಗೊಂದಲಕ್ಕೆ ಒಳಗಾಗಿದ್ದರು. ಫೇಸ್ ಬುಕ್ ನೊಂದಿಗೆ ಯಾವುದೇ ವಾಟ್ಸಾಪ್ ಡೇಟಾ ಹಂಚಿಕೊಳ್ಳುವುದಿಲ್ಲ. ಖಾಸಗಿ ಡೇಟಾಗಳ ಎಂಡ್ ಟು ಎಂಡ್ ಎನ್ ಕ್ರಿಪ್ಷನ್ ಮುಮದುವರೆಯುತ್ತದೆ. ಅದನ್ನು ಫೇಸ್ ಬುಕ್ ಮೂಲಕ ಓದಲಾಗದು ಎಂದು ಸ್ಪಷ್ಟನೆ ನೀಡಿದೆ.
ಇದನ್ನೂ ಓದಿ: ವಿಶ್ವದ ಅತಿದೊಡ್ಡ ಲಸಿಕೆ ಆಂದೋಲನಕ್ಕೆ ಮೋದಿ ಚಾಲನೆ:10:30ಕ್ಕೆ ದೇಶವನ್ನು ಉದ್ದೇಶಿಸಿ ಭಾಷಣ !
ಮಾತ್ರವಲ್ಲದೆ ನೂತನ ಅಪ್ ಡೇಟ್ ಪ್ರಕ್ರಿಯೆಯನ್ನು ಮೇ ತಿಂಗಳವರೆಗೂ ಮುಂದೂಡುವುದಾಗಿ ತಿಳಿಸಿದೆ.
ವಾಟ್ಸಾಪ್ ನ ನೂತನ ಗೌಪ್ಯತಾ ನೀತಿ ಘೋಷಣೆಯಾದ ಬೆನ್ನಲ್ಲೆ ಹಲವು ಬಳಕೆದಾರರು ಅಸಮಾಧಾನ ಹೊರಹಾಕಿದ್ದರು. ಮಾತ್ರವಲ್ಲದೆ ವಾಟ್ಸಾಪ್ ಪರ್ಯಾಯವಾಗಿ ‘ಸಿಗ್ನಲ್ ಮತ್ತು ಟೆಲಿಗ್ರಾಂ’ ಕಡೆಗೆ ಮುಖ ಮಾಡಿದ್ದರು. ಇದರಿಂದ ಸಿಗ್ನಲ್ ಆ್ಯಪ್ ಪ್ರಚಲಿತಕ್ಕೆ ಬಂತು. ಇದೀಗ ವಾಟ್ಸಾಪ್ ತನ್ನ ನಿರ್ಧಾರವನ್ನು ಪರಿಶೀಲನೆಗೆ ಒಳಪಡಿಸುವುದಾಗಿ ತಿಳಿಸಿದೆ.
ಇದನ್ನೂ ಓದಿ: ಚಿನ್ನದ ಸರ ಕಳ್ಳತನವಾಗಿದೆ ಎಂದ ಅಜ್ಜಿ:ಪೊಲೀಸರ ತನಿಖೆಯ ವೇಳೆ ಬಯಲಾಯ್ತು ಬೆಚ್ಚಿ ಬೀಳುವ ರಹಸ್ಯ