Advertisement

ಬಿಡುಗಡೆಗೆ ಮುನ್ನವೇ ಸೋರಿ ಹೋದ 50 ರೂ. ಹೊಸ ನೋಟಿನ ಚಿತ್ರ

04:54 PM Aug 18, 2017 | |

ಹೊಸದಿಲ್ಲಿ : 50 ರೂಪಾಯಿ ಹೊಸ ನೋಟುಗಳನ್ನು ಸರಕಾರ ಇನ್ನೂ ಮಾರುಕಟ್ಟೆಗೆ ಬಿಡುಗಡೆ ಮಾಡಿಲ್ಲ; ಆದರೂ ಹೊಸ ವಿನ್ಯಾಸ ಮತ್ತು ಹೊಸ ಶ್ರೇಣಿಯ ಸಂಖ್ಯೆ ಹೊಂದಿರುವ ಈ ನೋಟುಗಳ ಚಿತ್ರಗಳು ಸಾಮಾಜಿಕ ಜಾಲ ತಾಣಗಳಲ್ಲಿ ಈಗಾಗಲೇ ಹರಿದಾಡತೊಡಗಿವೆ. 

Advertisement

ಅಧಿಕೃತ ಬಿಡುಗಡೆಗೆ ಮುನ್ನವೇ ಹೊಸ 50 ರೂ. ನೋಟುಗಳ ಚಿತ್ರಗಳು ಸಾಮಾಜಿಕ ಜಾಲ ತಾಣದಲ್ಲಿ ಸೋರಿ ಹೋಗಿರುವುದು ಅಚ್ಚರಿ ಮತ್ತು ಶಂಕೆಗೆ ಕಾರಣವಾಗಿದೆ. ಚಿತ್ರದಲ್ಲಿ ಕಂಡು ಬಂದಿರುವ 50 ರೂ. ಹೊಸ ನೋಟು ಕಡು ಟರ್ಕಾಯಿಸ್‌ ಬಣ್ಣದಲ್ಲಿದೆ. ಗಾತ್ರದಲ್ಲಿ ಇವು ಈಗ ಚಾಲ್ತಿಯಲ್ಲಿರುವ 50 ರೂ. ನೋಟುಗಳಿಗಿಂತ ಉದ್ದ – ಅಗಲದಲ್ಲಿ ಕಿರಿದಾಗಿರುವಂತೆ ಕಂಡು ಬರುತ್ತವೆ. 

50ರ ಈ ಹೊಸ ನೋಟುಗಳು 2005ರ ಮಹಾತ್ಮಾ ಗಾಂಧಿ ಶ್ರೇಣಿಯಲ್ಲಿ  ಹಾಲಿ ಆರ್‌ಬಿಐ ಗವರ್ನರ್‌ ಊರ್ಜಿತ್‌ ಪಟೇಲ್‌ ಸಹಿಯೊಂದಿಗೆ ಮುದ್ರಿತವಾಗಿವೆ. 50 ರೂ.ಗಳ ಹೊಸ ನೋಟುಗಳನ್ನು ಬಿಡುಗಡೆ ಮಾಡಲಾಗುವುದೆಂದು ಪಟೇಲ್‌ ಕಳೆದ ವರ್ಷವೇ ಪ್ರಕಟಿಸಿದ್ದರು. ಅಂತೆಯೇ ಈ ಹೊಸ ನೋಟುಗಳು 2016ರ ಮುದ್ರಿತ ವರ್ಷದ್ದಾಗಿದೆ.

ಈಗಾಗಲೇ 2,000 ರೂ. ನೋಟುಗಳ ಮುದ್ರಣ ನಿಲ್ಲಿಸಿರುವ ಆರ್‌ಬಿಐ. ಹೊಸ ರೂಪ, ವಿನ್ಯಾಸದ 500 ರೂ. ನೋಟುಗಳನ್ನು ಈಗಾಗಲೇ ಚಾಲ್ತಿಗೆ ತಂದಿದೆ. ಅಂತೆಯೇ ಸದ್ಯದಲ್ಲೇ ಹೊಸ 200 ರೂ. ನೋಟುಗಳು ಕೂಡ ಮಾರುಕಟ್ಟೆಗೆ ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next