Advertisement

ಹೊಸ ಭದ್ರತಾ ವೈಶಿಷ್ಟ್ಯ:  ಶೀಘ್ರ ಬರಲಿದೆ 200 ರೂ ನೋಟು ?

09:50 AM Apr 04, 2017 | Team Udayavani |

ಹೊಸದಿಲ್ಲಿ: ಶೀಘ್ರದಲ್ಲಿ 200 ರೂಪಾಯಿ ಹೊಸ ನೋಟುಗಳನ್ನು ಹೊರತರಲು ಆರ್‌ಬಿಐ ಮುಂದಾಗಿದೆ ಎನ್ನಲಾಗಿದೆ. ವರದಿಯಾದಂತೆ ನೋಟುಗಳಲ್ಲಿ ಹೊಸ ಭದ್ರತಾ ವೈಶಿಷ್ಟ್ಯಗಳಿರಲಿವೆ ಎನ್ನಲಾಗಿದೆ.

Advertisement

ಹೊಸ 500 ರೂ ಮತ್ತು 2000 ರೂ ನೋಟುಗಳಲ್ಲಿ  ಹಲವು ಭದ್ರತಾ ಗುಣಲಕ್ಷಣಗಳನ್ನು ಕಳ್ಳದಂಧೆ ಕೋರರು ವ್ಯಾಪಕವಾಗಿ ಬದಲಾವಣೆ ಮಾಡಿರುವ ಹಿನ್ನಲೆಯಲ್ಲಿ  ಎಚ್ಚೆತ್ತು ಕೊಂಡಿರುವ ಸರ್ಕಾರ ಇನ್ನಷ್ಟು ಸುರಕ್ಷತಾ ಕ್ರಮಗಳೊಂದಿಗೆ 200 ರೂಪಾಯಿ ನೋಟು ಬಿಡುಗಡೆ ಮಾಡುವ ಸಾಧ್ಯತೆಗಳಿವೆ.

ಕಳ್ಳದಂಧೆಕೋರರಿಗೆ ಕಡಿವಾಣ ಸಾಕುವ ನಿಟ್ಟಿನಲ್ಲಿ ಸರ್ಕಾರ, ಪ್ರತಿ 3-4 ವರ್ಷಗಳಿಗೊಮ್ಮೆ ನೋಟು ಗಳಲ್ಲಿ ಅಳವಡಿಸಲಾಗಿರುವ ಭದ್ರತಾ ಲಕ್ಷಣಗಳನ್ನು ಬದಲಿಸಲು ನಿರ್ಧರಿಸಿದೆ. 

ಆರ್‌ಬಿಐನ ಉನ್ನತ ಮಟ್ಟದ ಸಭೆಯಲ್ಲಿ 200 ರೂಪಾಯಿ ನೋಟು ಬಿಡುಗಡೆ ಮಾಡುವ ಕುರಿತು ಚರ್ಚೆಗಳು ನಡೆದಿರುವ ಬಗ್ಗೆ ವರದಿಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next