ಹೈದರಾಬಾದ್: ಮೈಸೂರಿನಿಂದ ಹೊರಟು ಆಂಧ್ರ ತಲುಪಿದ್ದ ಸವಾರನೊಬ್ಬನ ಹೊಚ್ಚ ಹೊಸ ರಾಯಲ್ ಎನ್‌ಫೀಲ್ಡ್ ಮೋಟಾರ್ ಬೈಕ್ ಇದ್ದಕ್ಕಿದ್ದಂತೆ ಸ್ಫೋಟಗೊಂಡ ದೃಶ್ಯದ ವಿಡಿಯೊ ಭಾರೀ ವೈರಲ್ ಆಗಿದೆ.
ರವಿಚಂದ್ರ ಎಂಬುವರು ಮೈಸೂರಿನಿಂದ 387 ಕಿ.ಮೀ. ದೂರದ ಗುಂಟ್ಕಲ್ ಮಂಡಲ್‌ನ ನೆಟ್ಟಿಕಂಟಿ ಆಂಜನೇಯ ಸ್ವಾಮಿ ದೇಗುಲಕ್ಕೆ ಪ್ರಯಾಣ ಕೈಗೊಂಡಿದ್ದರು. ದೇವಸ್ಥಾನದ ಹೊರಭಾಗದ ಪಾರ್ಕಿಂಗ್ ಏರಿಯಾದಲ್ಲಿ ಬೈಕನ್ನು ನಿಲ್ಲಿಸಿದ ಸವಾರ, ದೇವರ ದರ್ಶನಕ್ಕೆ ಹೋದಾಗ ಬೈಕ್ ಸ್ಫೋಟಗೊಂಡಿದೆ.
ಇದನ್ನೂ ಓದಿ:ನೌಶೇರಾ ಸೆಕ್ಟರ್‌ನಲ್ಲಿ ಗಡಿ ನುಸುಳುತ್ತಿದ್ದ ಪಾಕ್ ಉಗ್ರನ ಹತ್ಯೆಗೈದ ಸೇನೆ
ಯಾವುದೇ ಜೀವಹಾನಿ ಆಗಿಲ್ಲ. ಆದರೆ, ಬೈಕ್‌ನ ಪೆಟ್ರೋಲ್ ಟ್ಯಾಂಕ್ ಸ್ಫೋಟಗೊಂಡಿದ್ದರಿಂದಾಗಿ ಮುಗಿಲೆತ್ತರಕ್ಕೆ ಬೆಂಕಿ ಜ್ವಾಲೆ ಹೊಮ್ಮಿದ್ದು, ಅಕ್ಕಪಕ್ಕ ಇದ್ದವರು ಬೆಚ್ಚಿ ಬಿದ್ದಿದ್ದಾರೆ. ಬೈಕ್ ಯಾವ ಕಾರಣಕ್ಕಾಗಿ ಸ್ಫೋಟಗೊಂಡಿತು ಎಂಬುದರ ಬಗ್ಗೆ ನಿರ್ದಿಷ್ಟ ಕಾರಣ ತಿಳಿದುಬಂದಿಲ್ಲ.