ಕ್ಯಾನ್ಬೆರಾ : ಕ್ಯಾನ್ಸರ್, ಕ್ರೋನಿಕ್ ಕಿಡ್ನಿ ಡಿಸೀಸ್ , ಡಯಾಬಿಟಿಸ್, ಅಧಿಕ ರಕ್ತದೊತ್ತಡಗಳಂತಹ ಕಾಯಿಲೆಗಳು ಕೋವಿಡ್ 19 ಸಾವಿಗೆ ಮುಖ್ಯ ಕಾರಣವಾಗುತ್ತಿದೆ ಎಂದು ಆಸ್ಟ್ರೇಲಿಯಾದ ಗ್ರಿಫಿತ್ ವಿಶ್ವವಿದ್ಯಾಲಯದ ಸಂಶೋಧನೆ ತಿಳಿಸಿದೆ.
ಓದಿ : ಇನ್ನು ಬೋರ್ ವೆಲ್ ತೋಡುವುದು ಕಷ್ಟ! ಮುಷ್ಕರ ಹೂಡಲಿರುವ ಕೊಳವೆ ಬಾವಿ ತೋಡುವ ಯಂತ್ರಗಳು!
ಗ್ರಿಫಿತ್ ಸಂಶೋಧಕರ ತಂಡ ಜಾಗತಿಕ ಮಟ್ಟದಲ್ಲಿ ಈ ಸಂಶೋಧನೆಯನ್ನು ನಡೆಸಿದ್ದು, 14 ದೆಶಗಳ ಸುಮಾರು 375,859 ಮಂದಿಯನ್ನು ಸಂಶೋಧನೆಗೆ ಒಳಪಡಿಸಿದೆ. ಸಂಶೋಧನೆಯಲ್ಲಿ ತಿಳಿದು ಬಂದ ಅಂಕಿ ಅಂಶಗಳ ಪ್ರಕಾರ ದೀರ್ಘ ಕಾಲದ ಮೂತ್ರ ಪಿಂಡದ ಕಾಯಿಲೆ (ಕ್ರೊನಿಕ್ ಕಿಡ್ನಿ ಡಿಸೀಸ್) ಕೋವಿಡ್ 19 ಸಾವಿಗೆ ಅತ್ಯಂತ ಪ್ರಮುಖವಾದ ಕಾರಣವಾಗಿದೆ ಎಂದು ಕ್ಸಿನ್ಹುಹಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಜಾಗತಿಕ ಮಟ್ಟದಲ್ಲಿ ಕೋವಿಡ್ ಸೋಂಕಿಗೆ ಒಳಗಾದವರಲ್ಲಿ ಹೆಚ್ಚಿನವರಿಗೆ ಅಧಿಕ ರಕ್ತದೊತ್ತಡ, ಬೊಜ್ಜು, ಡಯಾಬಿಟಿಸ್ ನಂತಹ ಆರೋಗ್ಯ ಸಮಸ್ಯೆ ಇದೆ ಎಂದು ಸಹ ಸಂಶೋಧನೆ ಹೇಳಿದೆ.
“ದೀರ್ಘ ಕಾಲದ ಆರೋಗ್ಯ ಸಮಸ್ಯೆಗಳು (ಕ್ರೋನಿಕ್ ಡಿಸೀಸ್) ಕೋವಿಡ್ 19 ಸಮಸ್ಯೆಗಳಿಗೆ ತೀವ್ರ ತೊಂದರೆಯನ್ನುಂಟು ಮಾಡುತ್ತದೆ. ಅದಾಗ್ಯೂ, ನಿರ್ದಿಷ್ಟ ಆರೋಗ್ಯ ಸಮಸ್ಯೆಗಳು ಯಾವ ಮಟ್ಟಿಗೆ ಪರಿಣಾಮ ಬೀರುತ್ತವೆ ಎನ್ನುವುದು ಚರ್ಚಾಸ್ಪದವಾಗಿದೆ” ಎಂದು ಸಹ ಲೇಖಕ ಆ್ಯಡಮ್ ಟೇಲರ್ ಹೇಳಿದ್ದಾರೆ.
ಇನ್ನು, “ಈ ದೀರ್ಘ ಕಾಲದ ಆರೋಗ್ಯ ಸಮಸ್ಯೆಗಳು ಕೋವಿಡ್ 19 ಸೋಂಕಿನ ತೀವ್ರತೆಗೆ ಕಾರಣವಾಗುತ್ತದೆ ಎನ್ನುವುದನ್ನು ಅರಿಯಲು ಮತ್ತಷ್ಟು ಅಧ್ಯಯನ ನಡೆಸಬೇಕಾಗುತ್ತದೆ” ಎಂದು ಪ್ರಮುಖ ಲೇಖಕ ಪ್ರೊಫೆಸರ್ ಸುರೇಶ್ ಮಹಾಲಿಂಗಮ್ ತಿಳಿಸಿದ್ದಾರೆ.
ಓದಿ : ಮಹಿಳಾ ಸುರಕ್ಷತೆಯ ದೃಷ್ಟಿಯಿಂದ ರೈಲುಗಳಿಗೆ ಹೈ ಟೆಕ್ ಟಚ್