Advertisement

ಪೂರ್ಣಾವಧಿ ಸರ್ಕಾರ ರಚನೆಯಾದರೆ ತಂಬಾಕಿಗೆ ಹೊಸ ನಿಯಾಮಾವಳಿ: ಹೆಚ್ ಡಿಕೆ

09:49 PM Apr 24, 2022 | Team Udayavani |

ಹುಣಸೂರು: ತಂಬಾಕು ಬೆಳೆಗಾರರಿಗೆ ಬೆಲೆ ಇಲ್ಲದ ಸಂಕಷ್ಟಕ್ಕೆ ಒಳಗಾದಾಗ ಹೊರಾಡಿ ರೈತರಿಗೆ ಬೆಲೆ ಕೊಡಿಸಿದ್ದು ನಮ್ಮ ದೇವೇಗೌಡರು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

Advertisement

ಹುಣಸೂರು ನಗರದ ಸಲೀಂ ಪ್ಯಾಲೇಸ್‌ನಲ್ಲಿ ಏರ್ಪಡಿಸಿ ಜನತಾ ಜಲಧಾರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜೆಡಿಎಸ್ ಪಕ್ಷವನ್ನು ಮತ ನೀಡಿ ಬೆಂಬಲಿಸಿ ಪೂರ್ಣಾವಧಿ ಸರ್ಕಾರ ರಚನೆಯಾದರೆ ತಂಬಾಕಿಗೆ ಹೊಸ ನಿಯಾಮಾವಳಿ ರೂಪಿಸಲಾಗುವುದು. ನಮ್ಮ ಸರ್ಕಾರದ ಅವದಿಯಲ್ಲಿ ಈ ತಾಲೂಕಿನಲ್ಲಿ ಮೂರು ಸಾವಿರಕ್ಕೂ ಹೆಚ್ಚಿನ ರೈತರ 150 ಕೋಟಿ ರೂ ಸಾಲ ಮನ್ನಮಾಡಿದ್ದರಿಂದ ೨೬ ಸಾವಿರ ಕುಟುಂಬಗಳಿಗೆ ಅನುಕೂಲವಾಗಿದೆ ಎಂದರು.

ಬಿಜೆಪಿ ಸರ್ಕಾರ ಅಭಿವೃದ್ದಿ ಕೆಲಸಗಳಿಗೆ ಚಾಲನೆ ನೀಡದೆ ಹಿಂದು-ಮುಸ್ಲಿಂ ನಡುವೆ ಕಂದಕ ಸೃಷ್ಟಿಸಿ ಆಡಳಿತ ಮಾಡುತ್ತಿದೆ. ಇದರ ಬಗ್ಗೆ ಧ್ವನಿ ಎತ್ತಿ ವಿರೋಧಿಸುತ್ತಿರುವುದು ನಮ್ಮ ಜೆಡಿಎಸ್. ಸರ್ಕಾರ ರೈತರ ಬೆಳೆಯನ್ನ ಖರೀದಿಸುತ್ತಿರುವುದು ಮುಸ್ಲಿಂ ಸಮುದಾಯದವರೇ ಹಾಗಾಗಿ ನಾವು ಧರ್ಮ ಆಚರಿಸುವುದಾದರೆ ಮನೆಯಲ್ಲಿ ಆಚರಿಸಿಕೊಳ್ಳೋಣ ಎಂದರು.

ಜನತಾ ಜಲಧಾರೆ ಕಾರ್ಯಕ್ರಮದ ಯೋಜನೆಯಲ್ಲಿ ಪ್ರತಿ ರೈತನ ಹೊಲಕ್ಕೆ ನಮ್ಮ ನದಿಯ ನೀರನ್ನು ಕೊಡಲು ೪.೫ ಲಕ್ಷ ಕೋಟಿ ರೂ ಬೇಕು ೫ ವರ್ಷದಲ್ಲಿ ಈ ಹಣವನ್ನು ಶೇಖರಿಸಿ ನೀರು ಕೊಡುವ ಗುರಿಹೊಂದಿದ್ದೇನೆ . ಹಾಗೂ ನಾಡನ್ನಾ ಸದಾ ಹಸಿರಾಗಿಡಲು ಪ್ರಯತ್ನಿಸುತ್ತೇನೆ, ನಮ್ಮ ಸರ್ಕಾರ ಬಂದು ೫ ವರ್ಷ ನನ್ನ ಯೋಜನೆಗಳನ್ನು ಪೂರೈಸದಿದ್ದರೆ ನಮ್ಮ ಪಕ್ಷವನ್ನೇ ವಿಸರ್ಜಿಸಲಾಗುವುದು ಎಂದರು.

ಮೆರವಣಿಗೆ
ಜೆಡಿಎಸ್. ಕಾರ್ಯಕರ್ತರು ಹೆಚ್.ಡಿ.ಕುಮಾರ್‌ಸ್ವಾಮಿರವರಿಗೆ ಬೃಹತ್ ಸೇಬಿನ ಹಾರ ಹಾಕಿ ತೆರದ ವಾಹನದಲ್ಲಿ ಮೆರವಣಿಗೆಯ ಮೂಲಕ ೧೦೧ ಕಳಸ ಹೊತ್ತ ಮಹಿಳೆಯರು ಹಾಗೂ ಬೈಕ್ ರ‍್ಯಾಲಿಯ ವೇದಿಕೆಗೆ ಕರೆದೋಯ್ದರು.

Advertisement

ಮಕ್ಕಳಿಗೆ ಉಚಿತ ಶಿಕ್ಷಣ
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ, ನಾಡಿನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಖಾಸಗಿ ಶಾಲೆಯ ಮಾದರಿಯಲ್ಲಿ. ಸರಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ.ಯಿಂದಲೇ ಉಚಿತ ಇಂಗ್ಲೀಷ್ ಶಿಕ್ಷಣ.ಪ್ರತಿ ಕುಟುಂಬಕ್ಕೆ ಸೂರು ಇಲ್ಲದವರಿಗೆ ನಿವೇಶನ ನೀಡಿ ಮನೆ ನಿರ್ಮಿಸಲಾಗುವುದು.ಪ್ರತಿ ಬಡ ಕುಟುಂಬದ ಒಬ್ಬರಿಗೆ ಉದ್ಯೋಗ, ಬಡವರಿಗೆ ಸ್ವಾವಲಂಬನೆ ನಡೆಸುವ ಆರ್ಥಿಕ ನೆರೆವು ನೀಡಲಾಗುವುದು ಎಂದು ಭರವಸೆ ನೀಡಿದರು.

ವೇದಿಕೆಯಲ್ಲಿ, ಶಾಸಕ ಸಾರಾ ಮಹೇಶ್, ಜೆಡಿಎಸ್ ತಾಲೂಕು ಅಧ್ಯಕ್ಷ ದೇವರಹಳ್ಳಿ ಸೋಮಶೇಖರ್, ಉಪಾಧ್ಯಕ್ಷ ದೇವರಾಜ ಒಡೆಯರ್, ನಗರಸಭೆ ಸದಸ್ಯರಾದ ಶ್ರೀನಾಥ್, ಶರವಣ, ಫಜಲುಲ್ಲಾ, ಗಂಗಾಧರ ಗೌಡ, ಹೊಸೂರು ಅಣ್ಯಯ್ಯ, ಜೆಡಿಎಸ್ ಮುಖಂಡರಾದ ಗೋವಿಂದೇ ಗೌಡ, ವಾಸು, ಬಿಳಿಕೆರೆ ಪ್ರಸನ್ನ, ಧಣಿ ಕುಮಾರ್ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next