Advertisement

ಹೊಸ ವರ್ಷಕ್ಕೆ ಹೊಸ ರಶ್ಮಿ

10:02 AM Dec 03, 2019 | Team Udayavani |

ದುನಿಯಾರಶ್ಮಿ ಮೊಗದಲ್ಲೀಗ ಮಂದಹಾಸಮೂಡಿದೆ. ಅದಕ್ಕೆ ಕಾರಣ, “ಬಿಗ್‌ಬಾಸ್‌‘.ಹೀಗಂತ ಸ್ವತಃ ರಶ್ಮಿ ಅವರೇ ಹೇಳಿಕೊಳ್ಳುತ್ತಾರೆ. ಅಷ್ಟಕ್ಕೂ ರಶ್ಮಿ ಅಷ್ಟೊಂದು ಖುಷಿಗೆ ಕಾರಣ, ಅವರೀಗ ಸದ್ಯಕ್ಕೆ ಎರಡು ಕಥೆಗಳನ್ನು ಕೇಳಿ ಇಷ್ಟಪಟ್ಟಿದ್ದು, ಎಲ್ಲಾ ಅಂದುಕೊಂಡಂತೆ ನಡೆದರೆ, ಹೊಸ ವರ್ಷಕ್ಕೆ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ.

Advertisement

ಅಂದಹಾಗೆ, ಅವರು ಬಿಗ್‌ಬಾಸ್‌ಮನೆಯಿಂದ ಹೊರಬಂದ ತಕ್ಷಣ ಸಾಕಷ್ಟು ಕಥೆಗಳನ್ನು ಕೇಳಿದ್ದಾರೆ.ಅವರು ಕೇಳಿದ ಆರೇಳು ಕಥೆಗಳಲ್ಲಿ ಎರಡು ಕಥೆಗಳನ್ನು ಇಷ್ಟಪಟ್ಟಿದ್ದಾರೆ.ಈ ಕುರಿತು ಹೇಳಿಕೊಳ್ಳುವ ದುನಿಯಾರಶ್ಮಿ, “ಸದ್ಯಕ್ಕೆ ನಾನು ಬಿಗ್‌ಬಾಸ್‌ಮನೆಯಿಂದ ಬಂದಾಗ, ಒಂದಷ್ಟು ಕಥೆಗಳನ್ನು ಕೇಳಿದ್ದೇನೆ.

ಅದರಲ್ಲಿ ಎರಡು ಕಥೆಗಳು ತುಂಬಾ ಚೆನ್ನಾಗಿವೆ. ಒಂದು ನಾವೆಲ್‌ ಬೇಸ್ಡ್ ಸ್ಟೋರಿ. ಇನ್ನೊಂದು ಲವ್‌ ಸ್ಟೋರಿ. ಅದರಲ್ಲೂ ಒಂದು ಕಥೆಯಲ್ಲಿ ಲೇಡಿ ಪೊಲೀಸ್‌ ಪಾತ್ರವೂ ಇದೆ. ಆದರೆ, ನನಗೆ ಅದು ಸೂಟ್‌ ಆಗುತ್ತಾ ಇಲ್ಲವೋ ಗೊತ್ತಿಲ್ಲ. ಆ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ಎರಡು ಕಥೆಗೆ ಗ್ರೀನ್‌ಸಿಗ್ನಲ್‌ ಕೊಟ್ಟಿದ್ದೇನೆ. ಜನವರಿಯಲ್ಲಿ ಶುರುವಾಗಬಹುದು. ಆ ಬಳಿಕ ಚಿತ್ರದ ಶೀರ್ಷಿಕೆ, ನಿರ್ದೇಶಕರು, ಬ್ಯಾನರ್‌ಇತ್ಯಾದಿ ವಿಷಯಗಳನ್ನು ಹೇಳಬಹುದು. ಅಲ್ಲಿಯವರೆಗೆ ಸಸ್ಪೆನ್ಸ್‌ಎನ್ನುತ್ತಾರೆ ರಶ್ಮಿ. ಅವರೀಗ ಸದ್ಯ, ಹೊಸ ಬಗೆಯ ಕಥೆಗಳತ್ತ ಗಮನಹರಿಸುತ್ತಿದ್ದಾರೆ.

ಅದರಲ್ಲೂ ಅವರಿಗೆ ಮಹಿಳಾ ಪ್ರಧಾನ ಚಿತ್ರಗಳ ಮೇಲೆ ಒಲವು. ಜನವರಿ ಬಳಿಕ ಮೆಲ್ಲನೆ ಬಿಝಿಯಾಗುವ ಸೂಚನೆ ಕೊಡುವ ರಶ್ಮಿ, “ಬಂದ ಕಥೆಗಳನ್ನುಒಪ್ಪುವುದಿಲ್ಲ. ಕೇವಲ ಹಣಕ್ಕಾಗಿ ಬಂದ ಅವಕಾಶ ಒಪ್ಪಿದರೆ, ಸಮಸ್ಯೆ ಎದುರಾಗುತ್ತೆ. ನಮಗೆ ಸರಿಹೊಂದುವ ಕಥೆ ಎನಿಸಿದರೆ ಮಾತ್ರ ಆಯ್ಕೆ ಮಾಡಿಕೊಳ್ಳಬಹುದುಎಂಬುದು ರಶ್ಮಿ ಮಾತು.

Advertisement

Udayavani is now on Telegram. Click here to join our channel and stay updated with the latest news.

Next