Advertisement
ರಾಷ್ಟ್ರ ರಾಜಧಾನಿ ದೆಹಲಿಗೆ ಕರ್ನಾಟದಿಂದ ಹೆಚ್ಚು ರೈಲ್ವೆ ಸಂಪರ್ಕ ಜಾಲ ಹೊಂದಿರುವ ಜಿಲ್ಲೆಯ ಗೌರಿ ಬಿದ ನೂರಿನಿಂದ ಚಿಕ್ಕಬಳ್ಳಾಪುರಕ್ಕೆ ಹೊಸ ರೈಲು ಮಾರ್ಗಕ್ಕೆ ಅಂತಿಮ ಸರ್ವೆ ನಡೆಸಲು 2022ರ ಜುಲೈ 26 ರಂದು ಕೇಂದ್ರ ಸರ್ಕಾರದ ರೈಲ್ವೆ ಮಂಡಳಿ ಹುಬ್ಬಳ್ಳಿಯಲ್ಲಿರುವ ನೈರುತ್ಯ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರು.
Related Articles
Advertisement
1.10 ಕೋಟಿ ಅನುದಾನ ಬಿಡುಗಡೆ: ಜಿಲ್ಲಾ ಕೇಂದ್ರವಾಗಿರುವ ಚಿಕ್ಕಬಳ್ಳಾಪುರ ಹಾಗೂ ಗೌರಿಬಿದನೂರು ನಡುವೆ ಬರೋಬ್ಬರಿ 44 ಕಿ.ಮೀ ಅಂತರ ಇದ್ದು, 44 ಕಿ.ಮೀ ರೈಲ್ವೆ ಹಳಿ ನಿರ್ಮಾಣಕ್ಕೆ ಸರ್ವೆ ಕಾರ್ಯ ನಡೆಸುವಂತೆ ಹುಬ್ಬಳ್ಳಿಯ ನೈರುತ್ಯ ಇಲಾಖೆಯ ಜನರಲ್ ಮ್ಯಾನೇಜರ್‌ಗೆ ಕೇಂದ್ರದ ರೈಲ್ವೆ ಮಂಡಳಿ ಆದೇಶೀಸಿತ್ತು. ಇದಕ್ಕಾಗಿ ಬರೋಬ್ಬರಿ 1.10 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿತ್ತು.
ಜಿಲ್ಲೆಗಿಲ್ಲ ಹೆಚ್ಚು ರೈಲು ಸೌಲಭ್ಯ: ಚಿಕ್ಕಬಳ್ಳಾಪುರ, ಚಿಂತಾಮಣಿ, ಶಿಡ್ಲಘಟ್ಟ ತಾಲೂಕುಗಳಿಗೆ ರೈಲ್ವೆ ಸಂಪರ್ಕ ಇದೆಯಾದರೂ ಹೆಚ್ಚಿನ ರೈಲುಗಳ ಓಡಾಟ ಇಲ್ಲ. ಪ್ಯಾಸೆಂಜರ್ ರೈಲುಗಳು ಹೊರತುಪಡಿಸಿದರೆ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ಮೊದಲೇ ಇಲ್ಲ. ಇಂತಹ ಸಂದರ್ಭದಲ್ಲಿ ಕೇಂದ್ರದ ರೈಲ್ವೆ ಮಂಡಳಿ ಗೌರಿಬಿದನೂರು ಹಾಗೂ ಚಿಕ್ಕಬಳ್ಳಾಪುರ ನಡುವೆ ಹೊಸ ರೈಲ್ವೆ ಮಾರ್ಗಕ್ಕೆ ಹಸಿರು ನಿಶಾನೆ ನೀಡಿ ವರ್ಷ ಕಳೆದರೂ ಸಮೀಕ್ಷೆ ವಿಚಾರದಲ್ಲಿ ಏನಾಗಿದೆ ಎಂಬುದರ ಬಗ್ಗೆ ಜಿಲ್ಲೆಯ ಜನತೆ ಕುತೂಹಲದಿಂದ ಎದುರು ನೋಡುತ್ತಿದ್ದಾರೆ.
ಪ್ರಯಾಣಿಕರಿಗೆ ಅನುಕೂಲ: ಚಿಕ್ಕಬಳ್ಳಾಪುರ ಜಿಲ್ಲೆಯಾದ ನಂತರ ಜಿಲ್ಲಾಸ್ಪತ್ರೆ, ಖಾಸಗಿ ಆಸ್ಪತ್ರೆ, ಉತ್ತಮ ಶಿಕ್ಷಣ ಸೌಲಭ್ಯವಿರುವುದರಿಂದ ಉನ್ನತ ವ್ಯಾಸಂಗ, ತರಕಾರಿ, ಹೂ ಹಣ್ಣಿನ ವ್ಯಾಪಾರ ಕೇಂದ್ರವಾಗಿ ರೈತರು ಸರ್ಕಾರಿ ಕಚೇರಿಗಳಿಗೆ ಕೂಲಿ ಕಾರ್ಮಿಕರು ಸೇರಿದಂತೆ ಸಾವಿರಾರು ಜನ ಓಡಾಡು ತ್ತಾರೆ. ನಂದಿ ಬೆಟ್ಟ ಸುತ್ತಮುತ್ತಲಿನ ಪ್ರದೇಶಗಳಿ ಗೂ ಭೇಟಿ ನೀಡುತ್ತಾರೆ. ಹೀಗಾಗಿ ಕೇಂದ್ರ ಸರ್ಕಾರ ತ್ವರಿತವಾಗಿ ಗೌರಿಬಿದನೂರು-ಚಿಕ್ಕಬಳ್ಳಾಪುರ ನಡುವೆ ಶೀಘ್ರ ರೈಲ್ವೆ ಮಾರ್ಗ ನಿರ್ಮಿಸಿ ರೈಲು ಸೌಲಭ್ಯ ಒದಗಿಸಿದರೆ ಅನು ಕೂಲವಾಗಲಿದೆ ಎನ್ನುತ್ತಾರೆ ಮಂಚೇನಹಳ್ಳಿ ತಾಲೂಕಿನ ಹಳೇಹಳ್ಳಿಯ ಎಚ್.ಎನ್.ಕಿರಣ್ ಕುಮಾರ್.
2019 ರಲ್ಲಿ ಪತ್ರ ಬರೆದಿದ್ದ ಶಿವಶಂಕರರೆಡ್ಡಿ : ಜಿಲ್ಲೆಯ ಗೌರಿಬಿದನೂರು – ಚಿಕ್ಕಬಳ್ಳಾಪುರ ನಗರಕ್ಕೆ ರೈಲ್ವೆ ಸಂಪರ್ಕ ಕಲ್ಪಿಸುವ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ಸೇರಿದಂತೆ ವಿವಿಧ ಕಾರ್ಯಗಳಿಗಾಗಿ ಚಿಕ್ಕಬಳ್ಳಾಪುರಕ್ಕೆ ಹೋಗಿ ಬರುವ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು 2019 ರಲ್ಲಿ ರೈಲ್ವೆ ರಾಜ್ಯ ಸಚಿವರಾಗಿದ್ದ ಸುರೇಶ್ ಅಂಗಡಿ ಅವರನ್ನು ಖುದ್ದು ಭೇಟಿಯಾಗಿ ಗೌರಿಬಿದನೂರು- ಚಿಕ್ಕಬಳ್ಳಾಪುರ ನಗರಕ್ಕೆ ನೂತನ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಕೋರಿ ಗೌರಿಬಿದನೂರು ಕ್ಷೇತ್ರದ ಆಗಿನ ಶಾಸಕರಾಗಿದ್ದ ಎನ್.ಎಚ್.ಶಿವಶಂಕರರೆಡ್ಡಿ ಮನವಿ ಸಲ್ಲಿಸಿದ್ದರು.
ಗೌರಿಬಿದನೂರು ಹಾಗೂ ಚಿಕ್ಕಬಳ್ಳಾಪುರ ನಡುವೆ ಹೊಸ ಮಾರ್ಗ ಸಮೀಕ್ಷೆ ಕಾರ್ಯಕ್ಕೆ ಒಂದು ವರ್ಷದ ಹಿಂದೆಯೇ ಕೇಂದ್ರದ ರೈಲ್ವೆ ಮಂಡಳಿ ಆದೇಶಿಸಿ ಅನುದಾನ ಸಹ ಬಿಡುಗಡೆ ಮಾಡಿತ್ತು. ಆದರೆ, ಈ ಬಗ್ಗೆ ಏನಾಗಿದೆ ಎಂದು ಕ್ಷೇತ್ರದ ಸಂಸದರು ಕೇಳಬೇಕು, ಸಂಬಂಧಪಟ್ಟ ರೈಲ್ವೆ ಸಚಿವರ ಬಳಿ ಹೋಗಿ ಸಂಸದರು ಒತ್ತಡ ತಂದರೆ ರೈಲ್ವೆ ಕಾಮಗಾರಿ ಆರಂಭವಾಗುತ್ತದೆ. -ಡಾ.ಜಿ.ವಿ.ಮಂಜುನಾಥ, ಕೇಂದ್ರ ರೈಲ್ವೆ ಪ್ರಯಾಣಿಕರ ಸೌಲಭ್ಯ ಸಮಿತಿ ಸದಸ್ಯರು, ಚಿಕ್ಕಬಳ್ಳಾಪುರ
– ಕಾಗತಿ ನಾಗರಾಜಪ್ಪ