Advertisement
ಕೆಟ್ಟು ತಿಂಗಳು ಕಳೆದರೂ ರಿಪೇರಿ- ನಿರ್ವಹಣೆ ಕಾಣದ ಈ ಘಟಕದ ಬಗ್ಗೆ ಈ ಭಾಗದ ಬಳಕೆದಾರರು ಕಳಪೆ ಮಟ್ಟದ ಯಂತ್ರ, ಕಳಪೆ ಕಾಮಗಾರಿಯ ಶಂಕೆ ವ್ಯಕ್ತಪಡಿಸಿದ್ದರು. ಆದರೆ ಇದೀಗ ಶನಿವಾರ ತಂತ್ರಜ್ಞರು ಆಗಮಿಸಿ ಹೊಸತಾದ ಮೋಟಾರನ್ನು ಅಳವಡಿಸಿದ್ದಾರೆ. ಸ್ಟೀಲ್ ಡ್ರಮ್ ಹೊಂದಿದ್ದ ಅತಿ ಸಣ್ಣ ರಂಧ್ರವನ್ನು ಪ್ಯಾಚ್ ಮೂಲಕ ಸರಿಪಡಿಸಲಾಗಿದೆ. ಇದೀಗ ಎರಡು ರೂ. ನಾಣ್ಯವನ್ನು ಬಳಸಿ 10 ಲೀಟರ್ ಶುದ್ಧ ಕುಡಿಯುವ ನೀರನ್ನು ಪಡೆಯುವ ಈ ಯೋಜನೆಯನ್ನು ಜನರ ಬಳಕೆಗೆ ಸಿದ್ಧಪಡಿಸಲಾಗಿದೆ.ಈ ಬಗ್ಗೆ ಉದಯವಾಣಿ ವರದಿ ಪ್ರಕಟಿಸಿತ್ತು.
ಕರ್ನಾಟಕ ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಜಿ. ಪಂ. ಉಡುಪಿ, ತಾ.ಪಂ. ಉಡುಪಿ, ಗ್ರಾ. ಪಂ. ಕುರ್ಕಾಲು 2016-17ನೇ ಸಾಲಿನ ಎಸ್‌ಸಿಪಿ/ಟಿಎಸ್‌ಪಿ ಯೋಜನೆಯಡಿಯಲ್ಲಿ ಕುಂಜಾರುಗಿರಿಯಲ್ಲಿ ಉಡುಪಿಯ ಕೆ. ಆರ್. ಐ. ಡಿ. ಎಲ್. ಇಲಾಖೆಯು 5 ಲಕ್ಷ ರೂ. ವೆಚ್ಚದ ಈ ಘಟಕವನ್ನು ಅನುಷ್ಠಾನಗೊಳಿಸುವ ಮೂಲಕ ಈ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಿಸಲಾಗಿತ್ತು. ಘಟಕ ನಿರ್ವಹಣೆ ಮಾಡಲಾಗಿದೆ
ಘಟಕದಲ್ಲಿ ವೋಲ್ಟೆàಜ್ ಸಮಸ್ಯೆಯಿಂದಾಗಿ ಕೆಟ್ಟು ಹೋಗಿದ್ದ ಮೋಟಾರನ್ನು ಬದಲಾಯಿಸಿ ಹೊಸತಾದ ಮೋಟಾರನ್ನು ಅಳವಡಿಸಲಾಗಿದೆ. ಸ್ಟೀಲ್ ಡ್ರಮ್ಮು ದುರಸ್ತಿ ಮಾಡಿದ್ದು, ಘಟಕವನ್ನು ನಿರ್ವಹಣೆ ಮಾಡಲಾಗಿದೆ .
-ಧೀರಜ್, ಏರಿಯಾ ಎಂಜಿನಿಯರ್