Advertisement

ಹೊಸ ಭರವಸೆಯ ಟೊಮೇಟೊ ಹೈಬ್ರಿಡ್‌ ತಳಿ

11:55 PM May 11, 2019 | mahesh |

ತರಕಾರಿ ವಲಯವು ತುಂಬಾ ವೇಗವಾಗಿ ಬೆಳೆಯುತ್ತಿದ್ದರೂ ಹೆಚ್ಚುತ್ತಿರುವ ಜನಸಂಖ್ಯೆಯ ಬೇಡಿಕೆಯನ್ನು ಪೂರೈಸಲು ಹೊಸದಾಗಿ ಅಭಿವೃದ್ಧಿ ಹೊಂದಿದ ಮಿಶ್ರ ತಳಿಗಳು ಹೆಚ್ಚಿನ ಇಳುವರಿಯ ಪ್ರಭೇದಗಳ ಏಕೀಕರಣದ ಮೂಲಕ ನಮ್ಮ ತರಕಾರಿ ಉತ್ಪಾದನೆಯನ್ನು ಹೆಚ್ಚಿಸಬೇಕಿದೆ. ಇದಕ್ಕೆ ವಿವಿಧ ತಂತ್ರಜ್ಞಾನದ ಅಳವಡಿಕೆ, ರಕ್ಷಿತ ಕೃಷಿ, ಹನಿ ನೀರಾವರಿ, ಅರ್ಧ ವಾರ್ಷಿಕ ಬೆಳೆಯ ತರಕಾರಿ ಉತ್ಪಾದನೆ, ಕಂಟೈನರ್‌ ಮತ್ತು ಟೆರೇಸ್‌ ತೋಟಗಾರಿಕೆಯಿಂದ ಅಧಿಕ ಉತ್ಪಾದನೆ ಮಾಡಬಹುದು.

Advertisement

ಭಾರತವು ಚೀನಾಕ್ಕೆ ಸಮೀಪವಿರುವ ಎರಡನೆಯ ಅತಿ ದೊಡ್ಡ ತರಕಾರಿ ಉತ್ಪಾದಕ ರಾಷ್ಟ್ರವಾಗಿದೆ. ಎನ್‌ಎಚ್‌ಬಿ ಡಾಟಾ ಬೇಸ್‌ 2017-18ರ ಪ್ರಕಾರ ಭಾರತದಲ್ಲಿ 10.4 ದಶಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ 180 ದಶಲಕ್ಷ ಟನ್‌ಗಳಷ್ಟು ತರಕಾರಿ ಉತ್ಪಾದನೆ ಯಾಗಿದ್ದು, ಇದರ ಉತ್ಪಾದನ ಮಟ್ಟವು 17.3 ಟನ್‌ (ಹೆಕ್ಟೇರ್‌) ಆಗಿತ್ತು.

ಹಲವು ಬಾರಿ ರೈತರು ಉತ್ತಮವಾದ ಸೌತೆಕಾಯಿ, ಟೊಮೇಟೊ, ದೊಣ್ಣೆಮೆಣಸಿನ ಕಾಯಿಯನ್ನು ಮುಖ್ಯ ಋತುವಿನಲ್ಲಿ ಉತ್ಪಾದಿಸುತ್ತಾರೆ. ಇದು ಅಂತಿಮವಾಗಿ ಮಾರುಕಟ್ಟೆ ಧಾರಣೆಯಲ್ಲಿ ಕುಸಿತ ಅನುಭವಿಸುತ್ತದೆ. ಮತ್ತೂಂದೆಡೆ ತೀವ್ರ ಮಳೆ ಮತ್ತು ಚಳಿಯಿಂದ ತೆರೆದ ಕ್ಷೇತ್ರದ ಸ್ಥಿತಿಯಲ್ಲಿ ಟೊಮೇಟೊ, ದೊಣ್ಣೆಮೆಣಸಿನ ಕಾಯಿ, ಸೌತೆಕಾಯಿ ಬೆಳೆಯುವುದು ಕಷ್ಟ. ಪಾಲಿಹೌಸ್‌ ತಂತ್ರಜ್ಞಾನವು ಹೆಚ್ಚಿನ ಮೌಲ್ಯದ ತರಕಾರಿ ಉತ್ಪಾದನೆಗೆ ಸಹಕಾರಿಯಾಗಿದೆ.

ಹೈಬ್ರಿಡ್‌ ಟೊಮೇಟೊ ಬೀಜವು ರಕ್ಷಿತ ಸ್ಥಿತಿಯಲ್ಲಿ ಸಾರ್ವಜನಿಕ ವಲಯದಲ್ಲಿ ಲಭ್ಯವಿಲ್ಲದಿದ್ದರೂ ಖಾಸಗಿ ಕ್ಷೇತ್ರಗಳು ಹೈಬ್ರಿಡ್‌ ಬೀಜಗಳನ್ನು ಅತಿ ಹೆಚ್ಚು ವೆಚ್ಚದಲ್ಲಿ ಮಾರಾಟ ಮಾಡುತ್ತವೆ. ಇದನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ತರಕಾರಿ ವಿಜ್ಞಾನ ವಿಭಾಗವು ಐಸಿಎಆರ್‌-ಐಎಆರ್‌ಐಯು ಹಲವು ಪ್ರಭೇದ/ಮಿಶ್ರ ತಳಿಗಳನ್ನು ಅಭಿವೃದ್ಧಿಪಡಿಸಿ ರೈತರಿಗೆ ಸಮಂಜಸ ಬೆಲೆಯಲ್ಲಿ ಒದಗಿಸಲು ಹೆಚ್ಚಿನ ಮೌಲ್ಯದ ತರಕಾರಿ ಉತ್ಪಾದನೆಯ ಗುಣಮಟ್ಟ ಹೆಚ್ಚಿಸಲು ಸಹಕಾರಿಯಾಗಿದೆ.

2018-19ರ ಅವಧಿಯಲ್ಲಿ ರಾಜಸ್ಥಾನ ಜೈಪುರದ ಚೊಮುವಿನಲ್ಲಿ ಹೈಬ್ರಿಡ್‌ ಡಿಟಿಪಿಎಚ್‌-60 ಅನ್ನು ಮೊದಲ ಬಾರಿಗೆ ಪ್ರದರ್ಶಿಸಲಾಯಿತು.

Advertisement

ಮಣ್ಣು
ಚೆನ್ನಾಗಿ ಬೆರೆತ ಮರಳು ಕೊಳೆತ ಮಣ್ಣು ಉತ್ತಮ ಬೆಳೆ ಬೆಳೆಯಲು ಸೂಕ್ತ. ಪ್ರತಿ ಹೆಕ್ಟೇರ್‌ಗೆ 125 ಗ್ರಾಂ. ಬಿತ್ತನೆ ಬೀಜ ಅಗತ್ಯ.

ನರ್ಸರಿಯಲ್ಲಿ
ನರ್ಸರಿ ಪಾಲಿಹೌಸ್‌ನಲ್ಲಿ ಕೀಟ ನಿರೋಧಕವಾಗಲು ಕೋಕೋಪೀಟ್‌, ಪಲೈìಟ್‌ ಮತ್ತು ವರ್ಮಿಕ್ಯುಲೈಟ್‌ ಮಿಶ್ರಣದೊಂದಿಗೆ ಬೆಳೆಯಬೇಕು. ಸೆಪ್ಟಂಬರ್‌ ಕೊನೆಯ ವಾರದಲ್ಲಿ ಒಂದು ಕೆ.ಜಿ. ಬೀಜಕ್ಕೆ 3 ಗ್ರಾಂ. ಥಿರಾಮ್‌ ಮಿಶ್ರಣ ಮಾಡಿ ಬಿತ್ತಬೇಕು. ಬಿತ್ತನೆ ಮಾಡಿದ ತತ್‌ಕ್ಷಣ ನೀರಿನಿಂದ ಬೆಳಕು ನೀರಾವರಿ ನೀಡಬೇಕು. ಬಿತ್ತನೆಯ 22ರಿಂದ 25 ದಿನಗಳ ಅನಂತರ 10-12 ಸೆಂ.ಮೀ. ಉದ್ದ, ನಾಲ್ಕು ಎಲೆಗಳು ಹೊರ ಹೊಮ್ಮಿದ ಅನಂತರ ಎರಡು ದಿನಗಳ ಕಾಲ ನೀರು ನೀಡುವ ಮೂಲಕ ಅದನ್ನು ಗಟ್ಟಿಯಾಗಿಸಬೇಕು. 10 ಸೆಂ.ಮೀ. ಎತ್ತರದ ಹಾಸಿಗೆಯ ಎರಡೂ ಬದಿಗಳಲ್ಲಿ 0.75ರಿಂದ 1 ಮೀ. ಅಂತರದಲ್ಲಿ ನೆಡಬೇಕು. ನೀರು ಮತ್ತು ರಸಗೊಬ್ಬರಗಳ ಸಮರ್ಥ ಬಳಕೆಗೆ ಹನಿ ನೀರಾವರಿ ವ್ಯವಸ್ಥೆ ಮಾಡಬೇಕು.

ಗೊಬ್ಬರ, ರಸಗೊಬ್ಬರ
ಹೆಕ್ಟೇರಿಗೆ 25ರಿಂದ 30 ಟನ್‌ನಷ್ಟು ಚೆನ್ನಾಗಿ ಕೊಳೆತ ಜಮೀನಿನ ಗೊಬ್ಬರವನ್ನು ಭೂಮಿ ತಯಾರಿಕೆಯ ಸಮಯ ಸೇರಿಸಬೇಕು. 80 ಕೆ.ಜಿ. ರಂಜಕ, 90 ಕೆ.ಜಿ. ಪೊಟ್ಯಾಶ್‌ ಅನ್ನು ಸೇರಿಸಬೇಕು. 150 ಕಿ.ಗ್ರಾಂ. ಸಾರಜನಕವನ್ನು ವಿಭಜಿತ ಪ್ರಮಾಣದಲ್ಲಿ ಸೇರಿಸಬಹುದು.

ರಕ್ಷಿತ ಸ್ಥಿತಿಯಲ್ಲಿ ಟೊಮೇಟೊ ಒಡೆಯುವುದು ಪ್ರಮುಖವಾದುದು. ಸಸ್ಯಗಳನ್ನು ಲಂಬವಾಗಿ ಸಡಿಲವಾಗಿ ಕಟ್ಟಬೇಕು. ಸ್ಟೇಕ್ಡ್ ಸಸ್ಯಗಳು ಉತ್ತಮ ಗುಣಮಟ್ಟದ ಹಣ್ಣುಗಳನ್ನು ನೀಡುತ್ತವೆ. ಆರಂಭಿಕ ಹಂತಗಳಲ್ಲಿ ಎಲ್ಲ ಕಡೆ ಚಿಗುರುಗಳನ್ನು ತೆಗೆಯಬೇಕು. ಮೊದಲ ಬೆಳೆಯ ಅನಂತರ ನೆಲ ಸ್ಪರ್ಶಿಸುವ ಎಲೆಗಳನ್ನು ತೆಗೆದುಹಾಕಬೇಕು. ಅದು ರೋಗದ ವ್ಯಾಪ್ತಿ, ಗಾಳಿಯ ಪ್ರಸರಣವನ್ನು ತಡೆಗಟ್ಟುತ್ತದೆ.

ಡಿಟಿಪಿಎಚ್‌-60
ಸಂರಕ್ಷಿತ ಪರಿಸರದಲ್ಲಿ ಬೆಳೆಯುವ ತರಕಾರಿಗಳ ಪ್ರಮುಖ ಪ್ರಯೋಜನ
1 ಲಂಬ ಜಾಗದ ಬಳಕೆ, ವರ್ಧಿತ ಬೆಳೆ ಅವಧಿಯ ಕಾರಣ ರಕ್ಷಿತ ರಚನೆಯಡಿ ಯಲ್ಲಿ ಅಧಿಕ ಇಳುವರಿ.
2 ಬಾಹ್ಯ ವಾತಾವರಣದ ಪರಿಣಾಮ ವಿಲ್ಲದೆ ವರ್ಷಪೂರ್ತಿ ಉತ್ಪಾದನೆ.
3 ವಿಭಿನ್ನ ಪರಿಸ್ಥಿತಿಗಳಲ್ಲಿ ಗುಡ್ಡಗಾಡು ಪ್ರದೇಶ, ಮರುಭೂಮಿ, ಅತ್ಯಂತ ಚಳಿ ಪ್ರದೇಶದಲ್ಲಿ, ಎಲ್ಲ ಋತುವಿನಲ್ಲೂ ಬೆಳೆಯಲು ಸಾಧ್ಯ.
4 ನೀರು, ರಸಗೊಬ್ಬರ, ಸೂರ್ಯನ ಬೆಳಕು ಮೊದಲಾದ ಸಂಪನ್ಮೂಲಗಳ ಸಮರ್ಥ ಬಳಕೆ.
5 ಬೆಳೆಯ ಅವಧಿ, ಜೈವಿಕ ಒತ್ತಡಗಳ ಕಡಿಮೆ ಪ್ರಮಾಣದಿಂದ ಉತ್ತಮ ಗುಣಮಟ್ಟದ ಬೆಳೆ ಉತ್ಪತ್ತಿ.

ಪ್ರಮುಖ ಲಕ್ಷಣ
1 ಇದು ಸುರಕ್ಷಿತ ಸ್ಥಿತಿಯಲ್ಲಿ ಬೆಳೆಸಲು ಸೂಕ್ತವಾದ ಟೊಮೇಟೊ ಹೆಬ್ರಿಡ್‌ ವಿಧವಾಗಿದೆ.
2 ಇದರ ಹಣ್ಣುಗಳು ವೃತ್ತಾಕಾರವಾಗಿದ್ದು, 108 ಗ್ರಾಂ. ಸರಾಸರಿ ತೂಕವಿದ್ದು ಕೆಂಪು ಬಣ್ಣ ಹೊಂದಿದೆ.
3 ಇದು 7 ಅಥವಾ 8 ತಿಂಗಳ ಅವಧಿಯಲ್ಲಿ ಪ್ರತಿ ಸಸ್ಯದಲ್ಲಿ 8ರಿಂದ 10 ಕೆ.ಜಿ. ಸರಾಸರಿ ಇಳುವರಿ ನೀಡುತ್ತದೆ.

ಹವಾಮಾನ
ಇದರ ಬೆಳವಣಿಗೆಗೆ ಬೆಚ್ಚಗಿನ ಋತುವಿನ ಅಗತ್ಯವಿದೆ. ಇದು 16 ಡಿಗ್ರಿ ಸೆಂಟಿಗ್ರೇಡ್‌ನಿಂದ 35 ಡಿಗ್ರಿ ಸೆಂಟಿಗ್ರೇಡ್‌ ಉಷ್ಣತೆಯಲ್ಲಿ ಬೆಳೆಯುತ್ತದೆ. ಬಣ್ಣದ ಅಭಿವೃದ್ಧಿಗೆ ರಾತ್ರಿ ಮತ್ತು ದಿನದ ತಾಪಮಾನ 20ರಿಂದ 25 ಡಿಗ್ರಿ ಸೆಂಟಿಗ್ರೇಡ್‌ ಇರಬೇಕು.

ಬಿತ್ತನೆ ಸಮಯ
ಉತ್ತರ ಭಾರತದ ಬಯಲು ಪ್ರದೇಶದಲ್ಲಿ ಸಂಪೂರ್ಣ ನಿಯಂತ್ರಿತ ವಾತಾವರಣದಲ್ಲಿ ಆಗಸ್ಟ್‌ ತಿಂಗಳಲ್ಲಿ ಬಿತ್ತನೆ ಮಾಡಿ ಮೇ ವರೆಗೂ ಬೆಳೆಯಬಹುದು. ಕಡಿಮೆ ವೆಚ್ಚದ ಪಾಲಿಹೌಸ್‌ ಅಥವಾ ನೈಸರ್ಗಿಕ ಗಾಳಿ ರಚನೆಯಡಿಯಲ್ಲಿ ಸೆಪ್ಟಂಬರ್‌ನಲ್ಲಿ ಬಿತ್ತನೆ ಮಾಡಿ ಎಪ್ರಿಲ್‌ನವರೆಗೂ ಬೆಳೆಯಬಹುದು.

-  ಜಯಾನಂದ ಅಮೀನ್‌ ಬನ್ನಂಜೆ

Advertisement

Udayavani is now on Telegram. Click here to join our channel and stay updated with the latest news.

Next