Advertisement
ಕೋವಿಡ್ ಲಾಕ್‌ಡೌನ್ ಸಡಿಲಗೊಂಡ ಬಳಿಕ ಪ್ರವಾಸೋದ್ಯಮ ಕ್ಷೇತ್ರ ಮತ್ತೆ ಚೇತರಿಕೆ ಕಾಣುತ್ತಿದ್ದು, ದ.ಕ. ಜಿಲ್ಲೆಯ ನೇತ್ರಾವತಿ-ಫಲ್ಗುಣಿ ಹಿನ್ನೀರು ಪ್ರದೇಶಗಳಲ್ಲಿ ವಾಟರ್ ನ್ಪೋರ್ಟ್ಸ್ಗೆ ಉತ್ತೇಜನ ನೀಡಲು ಪ್ರವಾಸೋದ್ಯಮ ಇಲಾಖೆ ಚಿಂತನೆ ನಡೆಸಿದೆ. ಮಂಗಳೂರಿನ ಜಪ್ಪಿನಮೊಗರು ಪ್ರದೇಶದಿಂದ ಕೂಳೂರು ನಡುವಣ ಸುಮಾರು 70 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಸಂಬಂಧಪಟ್ಟಂತೆ ನೇತ್ರಾವತಿ ಇಕೋ ಟೂರಿಸಂ ಸಂಸ್ಥೆ ಪ್ರವಾಸೋದ್ಯಮ ಇಲಾಖೆಗೆ ಪ್ರಸ್ತಾವ ಸಲ್ಲಿಸಿದೆ. ಇದರಂತೆ, ಪ್ರವಾಸೋದ್ಯಮ ಕ್ಷೇತ್ರದ ಉತ್ತೇಜನ ನೀಡುವ ಉದ್ದೇಶದಿಂದ ವಾಟರ್ ನ್ಪೋರ್ಟ್ಸ್ ಅನುಷ್ಠಾನದ ಕುರಿತು ರಾಜ್ಯ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲು ಇಲಾಖೆ ಮುಂದಾಗಿದೆ.
Related Articles
Advertisement
ಉದ್ದೇಶಕ್ಕೆಂದು 20×30 ಅಡಿಯ ಪ್ಲೋಟಿಂಗ್ ಜೆಟ್ಟಿ ನಿರ್ಮಾಣ ಮಾಡಲಾಗುತ್ತದೆ. ಸ್ಥಳದಲ್ಲಿ ಲೈಫ್‌ಗಾರ್ಡ್ ಸಹಿತ ಹಲವು ಮುನ್ನೆಚ್ಚರಿಕ ಕ್ರಮಗಳನ್ನು ಅಳವಡಿಸಲಾಗುತ್ತದೆ. ಇನ್ನು, ಈ ಪ್ರದೇಶ ಅಭಿವೃದ್ಧಿಗೊಂಡರೆ ಸ್ಥಳೀಯರಿಗೆ ಉದ್ಯೋಗದ ಅವಕಾಶವೂ ಒದಗಿ ಬರಲಿದೆ ಎನ್ನುತ್ತಾರೆ.
2 ಲಕ್ಷ ಮಂದಿಯಿಂದ ಬೀಚ್ ವೀಕ್ಷಣೆ :
ಪ್ರವಾಸೋದ್ಯಮ ಕ್ಷೇತ್ರ ಇದೀಗ ಮತ್ತೆ ಹಳಿಯತ್ತ ಬರುತ್ತಿದ್ದು ಜಿಲ್ಲೆಯ ಪ್ರವಾಸಿ ತಾಣಗಳ ವೀಕ್ಷಣೆಗೆ ಲಕ್ಷಾಂತರ ಮಂದಿ ಆಗಮಿಸುತ್ತಿದ್ದಾರೆ. ತಣ್ಣೀರುಬಾವಿ ಕಡಲ ತೀರಕ್ಕೆ ಒಂದು ತಿಂಗಳಲ್ಲಿ ಸುಮಾರು 1.50 ಲಕ್ಷ ಮಂದಿ ಪ್ರವಾಸಿಗರು ಆಗಮಿಸಿದ್ದಾರೆ. ಕೊರೊನಾಗೂ ಹಿಂದೆ ತಿಂಗಳಲ್ಲಿ ಸುಮಾರು 3 ಲಕ್ಷ ಮಂದಿ ಆಗಮಿಸುತ್ತಿದ್ದರು. ಅದೇ ರೀತಿ ಪಣಂಬೂರು ಬೀಚ್‌ಗೆ ತಿಂಗಳಲ್ಲಿ ಸುಮಾರು 70 ಸಾವಿರ ಮಂದಿ ಬೀಚ್ ವೀಕ್ಷಿಸಿದ್ದಾರೆ. ಸಾಮಾನ್ಯವಾಗಿ ಈ ಹಿಂದೆ ತಿಂಗಳಲ್ಲಿ 1 ಲಕ್ಷ ಮಂದಿ ಬರುತ್ತಿದ್ದರು.
ಪ್ರವಾಸೋದ್ಯಮಕ್ಕೆ ಉತ್ತೇಜನ : ಕೋವಿಡ್ ಲಾಕ್‌ಡೌನ್ ಸಡಿಲಗೊಂಡ ಬಳಿಕ ಪ್ರವಾಸೋದ್ಯಮ ಕ್ಷೇತ್ರ ಮತ್ತೆ ಹಳಿಯತ್ತ ಬರುತ್ತಿದೆ. ಜಿಲ್ಲೆಯ ಬೀಚ್‌ಗಳು, ದೇವಸ್ಥಾನಗಳು ಸಹಿತ ಪ್ರವಾಸಿತಾಣಗಳತ್ತ ಜನರು ಆಗಮಿಸುತ್ತಿದ್ದಾರೆ. ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ನೀಡುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ವಾಟರ್ ನ್ಪೋರ್ಟ್ಸ್ಗೆ ಆದ್ಯತೆ ನೀಡಲಾಗುವುದು. –ಸುಧೀರ್ ಗೌಡ, ದ.ಕ. ಜಿಲ್ಲಾ ಪ್ರವಾಸೋದ್ಯಮ ಸಮಾಲೋಚಕರು
-ನವೀನ್ ಭಟ್ ಇಳಂತಿಲ