Advertisement

FITBOSS; ಹೊಸ ಕಾರ್ಯಕ್ರಮ ‘ಫಿಟ್ ಬಾಸ್’; ಪ್ರಶಾಂತ್‌ ಸಂಬರಗಿ ನಿರೂಪಣೆ

03:19 PM Oct 16, 2023 | Team Udayavani |

ಸದ್ಯ ಕಿರುತೆರೆಯಲ್ಲಿ “ಬಿಗ್‌ಬಾಸ್‌’ ರಿಯಾಲಿಟಿ ಶೋ ಪ್ರಸಾರವಾಗುತ್ತಿರುವುದು ನಿಮಗೆ ಗೊತ್ತಿರಬಹುದು. ಈಗ ಇಂಥದ್ದೇ ಒಂದು ರಿಯಾಲಿಟಿ ಶೋ “ಫಿಟ್‌ಬಾಸ್‌’ ಕನ್ನಡದ ಆಯೂಷ್‌ ಟಿವಿ ಹಾಗೂ ಸಿರಿಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಅಂದಹಾಗೆ, “ಫಿಟ್‌ಬಾಸ್‌’ ಮೊಟ್ಟ ಮೊದಲ ಹೆಲ್ತ್‌ ರಿಯಾಲಿಟಿ ಶೋ.

Advertisement

ಆಯುಷ್‌ ಟಿ.ವಿ, ಸಿರಿಕನ್ನಡ ವಾಹಿನಿ ಹಾಗೂ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಕೇಂದ್ರ (ಕ್ಷೇಮವನ) ಇವರ ಸಹಭಾಗಿತ್ವದಲ್ಲಿ ಆಯೋಜಿಸಿರುವ ವಿಶ್ವದ ಮೊಟ್ಟ ಮೊದಲ ಆರೋಗ್ಯದ ಕುರಿತಾದ ರಿಯಾಲಿಟಿ ಶೋ ಎಂಬ ಹೆಗ್ಗಳಿಕೆಯನ್ನು ಹೊತ್ತು “ಫಿಟ್‌ಬಾಸ್‌’ ಪ್ರಸಾರವಾಗುತ್ತಿದೆ.

“ಫಿಟ್‌ಬಾಸ್‌’ ರಿಯಾಲಿಟಿ ಶೋ ನ ಆಡಿಷನ್‌ನಲ್ಲಿ ಸುಮಾರು 2000 ಜನ ಪಾಲ್ಗೊಂಡಿದ್ದರು. ಅಂತಿಮವಾಗಿ ಸುಮಾರು 100 ಕೆಜಿ ಗಿಂತ ಹೆಚ್ಚು ತೂಕವಿರುವ 21 ಜನರನ್ನು ಆಯ್ಕೆ ಮಾಡಿಕೊಳ್ಳಲಾಯಿತು. 21 ದಿನ, ತಮ್ಮ ದೇಹದ ಅತಿಯಾದ ತೂಕವನ್ನು ಕಡಿಮೆ ಮಾಡಲು ಇಲ್ಲಿ ಪಾಲ್ಗೊಂಡಿದ್ದು ವಿಶೇಷ, ತಮ್ಮ ಆರೋಗ್ಯದ ಸಮಸ್ಯೆಗಳನ್ನು ವೈಜ್ಞಾನಿಕವಾಗಿ ಕ್ಯೂರ್‌ ಮಾಡಿಕೊಳ್ಳುವುದರ ಜೊತೆಗೆ ಆಟ, ಮೋಜು, ಮಸ್ತಿ, ಮತ್ತು ಸ್ನೇಹ ಸಂಬಂಧಗಳ ಮೌಲ್ಯಗಳನ್ನು ಈ ರಿಯಾಲಿಟಿ ಶೋನಲ್ಲಿ ತೋರಿಸಲಾಗಿದೆ.

“ಫಿಟ್‌ ಬಾಸ್‌’ ರಿಯಾಲಿಟಿ ಶೋನ ಆರಂಭದ ಹಾಗೂ ಫಿನಾಲೆಗೆ ಪ್ರಶಾಂತ್‌ ಸಂಬರಗಿ ನಿರೂಪಕನಾಗಿದ್ದು, ಕಲಾವಿದರಾದ ಗಣೇಶ್‌, ಅಮೂಲ್ಯ, ರೂಪಿಕಾ, ನಿರೂಪಕ ಮುರಳಿ, ಆರ್ಯನ್‌ ಶ್ಯಾಮ್‌ ಮುಂತಾದವರು ಗ್ರ್ಯಾಂಡ್‌ ಫಿನಾಲೆಗೆ ಆಗಮಿಸಿ ಸ್ಪರ್ಧಿಗಳಿಗೆ ಶುಭ ಕೋರಿದ್ದಾರೆ. ಅಂತಿಮ ವಿಜೇತ ಸ್ಪರ್ಧಿಗೆ 5 ಲಕ್ಷ ರೂಪಾಯಿ ಬಹುಮಾನ ನೀಡಲಾಗಿದೆ. ಆರೋಗ್ಯದ ಕುರಿತು ಜಾಗೃತಿ ಮೂಡಿಸುವ “ಫಿಟ್‌ಬಾಸ್‌’ ರಿಯಾಲಿಟಿ ಶೋ ಇದೇ ಅ. 16 ರಿಂದ ಸೋಮವಾರದಿಂದ ಶುಕ್ರವಾರದವರೆಗೂ “ಆಯೂಷ್‌ ಟಿವಿ’ ಸಂಜೆ 7ಕ್ಕೆ ಹಾಗೂ “ಸಿರಿ ಕನ್ನಡ’ ವಾಹಿನಿಯಲ್ಲಿ ರಾತ್ರಿ 8ಕ್ಕೆ ಪ್ರಸಾರವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next