ಕೇಂದ್ರ ಸರಕಾರ ಮೂರೂವರೆ ದಶಕಗಳ ನಂತರ ಹೊಸ ಶಿಕ್ಷಣ ನೀತಿಯೊಂದನ್ನು ಪಾಸುಮಾಡಿದೆ. ಅದು ಬಹುಶಃ 2021ನೇ ಶೈಕ್ಷಣಿಕ ವರುಷದಿಂದ ಅನುಷ್ಠಾನಗೊಳ್ಳಲಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಯೆಂದು ಹೆಸರಿಡಲಾಗಿದೆ.
ಈ ಶಿಕ್ಷಣ ನೀತಿಯ ಮುಖ್ಯ ಉದ್ದೇಶ ವಿದ್ಯಾರ್ಥಿ ಗಳಲ್ಲಿ ಆಲೋಚನಾ ಶಕ್ತಿ, ಜ್ಞಾನ, ಚೈತನ್ಯ, ಕೌಶಲಾ ಭಿವೃದ್ಧಿ ಮತ್ತು ಜವಾಬ್ದಾರಿಯನ್ನು ಹೆಚ್ಚಿಸುವುದಾಗಿದ್ದು, ಆ ಸಂಬಂಧ ಸಂಶೋಧನೆ ಮತ್ತು ಹೊಸ ಬದಲಾವಣೆಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ ತನ್ನಿಮಿತ್ತ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನವನ್ನು ಸ್ಥಾಪಿಸಲಾಗಿದೆ. ಹಿಂದಿನ 10+2 ಅಧ್ಯಯನ ಪದ್ಧತಿಯನ್ನು ತೆಗೆದು ಶಿಕ್ಷಣ ನೀತಿಯನ್ನು 5+3+3+4 ಎಂದು ನಾಲ್ಕು ಹಂತವಾಗಿ ವಿಂಗಡಿಸಲಾಗಿದ್ದು, ಮೊದ ಲನೆಯ ಹಂತದಲ್ಲಿ 3ನೇ ವರುಷದಿಂದ 8 ವರುಷ- ಅಂಗನವಾಡಿಯಿಂದ ಹಿಡಿದು ಎರಡನೆ ತರಗತಿ. ಎರಡನೆ ಹಂತ ಮೂರನೆಯ ತರಗತಿಯಿಂದ ಐದನೆಯ ತರಗತಿ, ಮೂರನೆ ಹಂತದಲ್ಲಿ 6ರಿಂದ 8ನೇ ತರಗತಿ. ನಂತರ ನಾಲ್ಕು ವರುಷ- 9ರಿಂದ ಹನ್ನೆರಡನೆ ತರಗತಿ. ಪದವಿ ಶಿಕ್ಷಣವು ಒಟ್ಟು ನಾಲ್ಕು ವರುಷದ್ದಾಗಿರುತ್ತದೆ.
ಇನ್ನು ಎಲ್ಲ ಪದವಿ ಕೋರ್ಸ್‌ಗಳಿಗೆ ಮೇಜರ್ ಮತ್ತು ಮೈನರ್ ವಿಷಯಗಳು ಇರುತ್ತವೆ. ವಿದ್ಯಾರ್ಥಿಗಳು ಯಾವುದೇ ಸಂಯೋಜನೆಯನ್ನು ಆಯ್ಕೆಮಾಡ ಬ ಹುದು. ಹೊಸ ಶಿಕ್ಷಣ ಪದ್ಧತಿಯಲ್ಲಿ ಬಿ.ಎ., ಬಿ.ಕಾಂ, ಬಿ.ಎಸ್‌ಸಿ. ಬದಲಾಗಿ ಬಿ.ಎಲ್.ಎ. ಪದವಿ ನೀಡಲಾಗುವುದು. 6ನೇ ಇಯತ್ತೆ ಯಿಂದ ವೃತ್ತಿಪರ ಕೋರ್ಸ್‌ಗೆ ಅವಕಾಶ ನೀಡಿರುವುದು ಸ್ವಾಗತಾರ್ಹ.
ಹಾಗೇ ಹೊಸ ಶಿಕ್ಷಣ ನೀತಿಯ ಸಂಚಾಲಕರು ಪಠ್ಯವನ್ನು ನಿರ್ಮಿಸುವಾಗ ಸದ್ಯ ಇರುವ ಎಲ್ಲ ಸಾಮಾನ್ಯ ವಿಷಯಗಳ ಜತೆಯಲ್ಲಿಯೇ ವಿವಿಧ ಭಾಷೆ ಗಳು, ಸಂಗೀತ, ತತ್ವಶಾಸ್ತ್ರ, ಕಲೆ,ನೃತ್ಯ, ರಂಗ ಭೂಮಿ, ಶಿಕ್ಷಣ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಕ್ರೀಡೆ, ಅನುವಾದ, ವ್ಯಾಖ್ಯಾನ ಮುಂತಾದ ವಿಷಯಗಳನ್ನು ಅಳವಡಿಸಿರುವುದು ಸ್ವಾಗತಾರ್ಹ ಸಂಗತಿ.
ಕಾರಣವೇನೆಂದರೆ , ಇಷ್ಟು ಕಾಲ ವಿದ್ಯಾರ್ಥಿಗಳಿಗೆ ತಮ್ಮ ಇಷ್ಟದ ವಿಷಯಗಳ ಆಯ್ಕೆಗೆ ಅವಕಾಶ ಗಳೇ ಇಲ್ಲವಾಗಿದ್ದವು. ಅದರಿಂದಾಗಿ ಬಹಳಷ್ಟು ಕ್ಲಾಸ್‌ಗಳು ವಿದ್ಯಾರ್ಥಿಗಳಿಲ್ಲದೆ ಭಣ ಗುಡುತ್ತಿದ್ದವು. ಹಾಗೆಯೇ ವಿದ್ಯಾಭ್ಯಾಸದಲ್ಲಿ ಆಸಕ್ತಿ ಕಳೆದುಕೊಂಡು ಶಾಲೆ ಬಿಡುವವರ ಸಂಖ್ಯೆ ಕೂಡ ಇತ್ತು. ಇನ್ನು ಮುಂದೆ ಈ ಸಮಸ್ಯೆಗೆ ಪರಿಹಾರ ಸಿಗಬಹುದು.
ಎಲ್ಲಕ್ಕಿಂತ ಮುಖ್ಯವಾಗಿ ಬಡ ವಿದ್ಯಾರ್ಥಿಗಳ ಅನುಕೂಲತೆಯ ದೃಷ್ಟಿಯಿಂದ ಪದವಿ ವ್ಯಾಸಂಗ ಮಾಡುವವರಿಗೆ ಶೈಕ್ಷಣಿಕ ಸಾಲದ ವ್ಯವಸ್ಥೆಯನ್ನು ಮಾಡಿರುವುದು ತುಂಬಾ ಅನುಕೂಲಕರ. ಬಹಳಷ್ಟು ವಿದ್ಯಾರ್ಥಿಗಳು ದುಬಾರಿ ಶಿಕ್ಷಣ ವೆಚ್ಚ ನೋಡಿ ತಮ್ಮ ಇಷ್ಟದ ಕೋರ್ಸ್‌ಗಳಿಗೆ ಹೋಗುತ್ತಿರಲಿಲ್ಲ. ಆದರೆ ಇನ್ನು ಮುಂದೆ ಆ ಸಮಸ್ಯೆಗೆ ಪೂರ್ಣವಿರಾಮ. ಇನ್ನು 2025ರ ಹೊತ್ತಿಗೆ ಶಾಲೆ ಕಾಲೇಜುಗಳಲ್ಲಿ ಕಲಿಯುವ ಶೇ.50 ರಷ್ಟು ವಿದ್ಯಾರ್ಥಿ ವೃಂದ ವೃತ್ತಿಪರ ಶಿಕ್ಷಣಕ್ಕೆ ಹೊಂದಿಕೊಳ್ಳುವರೆಂಬ ಭರವಸೆಯನ್ನು ಇರಿಸಿಕೊಳ್ಳಲಾಗಿದೆ.
ಶಿಕ್ಷಣ ನೀತಿಯು 2030ರ ನಂತರ ಜಿಲ್ಲೆಗೊಂದರಂತೆ ಬಹು ಶಿಸ್ತಿನ ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡುವ ಉದ್ದೇಶ ಹೊಂದಿದೆ. ಅದರಿಂದಾಗಿ ವೃತ್ತಿಪರ ಶಿಕ್ಷಣವನ್ನು ಮುಂದಿನ ದಶಕಗಳಲ್ಲಿ ಎಲ್ಲಾ ಶಾಲೆ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹಂತ ಹಂತವಾಗಿ ಅಳವಡಿಸುವ ಗುರಿ ಇದೆ…ಅದರಂತೆಯೇ 2040ರ ಹೊತ್ತಿಗೆ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳು ಬಹು ಶಿಸ್ತಿನ ಸಂಸ್ಥೆಗಳಾಗಿ ಮಾರ್ಪಡುವುದರಲ್ಲಿ ಸಂದೇಹವೇ ಇಲ್ಲ.
ಎಲ್ಲ ಕಾಲೇಜುಗಳಿಗೂ ಒಂದೆ ತರಹದ ಮೌಲ್ಯಾಂಕನ ಮಾಡಿ ಶ್ರೇಣಿ ನೀಡಲಾಗುವದು. ಇದರಲ್ಲಿ ಹೊಸ ಬದಲಾವಣೆ ಏನೆಂದರೆ ಪೋಷಕರಿಗಾಗಿಯೇ ಒಂದು ಹೊಸ ಮೂಲಭೂತ ಕಲಿಕೆಯ ಕಾರ್ಯಕ್ರಮವಿದೆ. ಅದು ಕೂಡ ತಮ್ಮ ಮಕ್ಕಳನ್ನು ಮೂರು ವರುಷಗಳಿಂದ ಹಿಡಿದು 6ರವರೆಗೆ ಕಲಿಸುವ ಸಲುವಾಗಿ. ಮನೆಯೇ ಮೊದಲು ಪಾಠ ಶಾಲೆ ಪೋಷಕರೆ ಮೊದಲ ಗುರು ಎಂಬ ಸತ್ಯಕ್ಕೆ ಈ ಸಂಗತಿ ಬಹಳ ಬಲ ತುಂಬಲಿದೆ.
ಪದವಿಯಲ್ಲಿ ವಿದ್ಯಾರ್ಥಿಗಳ ಆಸಕ್ತಿಗನುಗು ಣ ವಾಗಿ ವಿಷಯದ ಆಯ್ಕೆಗೆ ಅವಕಾಶವಿದೆ. ಅದರಲ್ಲಿ ಒಂದು ಮೇಜರ್ ಮತ್ತು ಒಂದು ಮೈನರ್. ಆ ತರಹದ ಸಂಯೋಜನೆಯಲ್ಲಿ ಯಾವುದೇ ವಿಷಯ ವನ್ನು ಆಯ್ಕೆ ಮಾಡಬಹುದು.ಉದಾಹರಣೆಗೆ ಓರ್ವ ಅರ್ಥಶಾಸ್ತ್ರವನ್ನು ಮುಖ್ಯ ವಿಷಯವನ್ನಾಗಿ ಆಯ್ದುಕೊಂಡರೆ ಮೈನರ್ ಎಂದು ಸಂಗೀತ ಅಥವಾ ಕಂಪ್ಯೂಟರ್‌ನ್ನು ಕೂಡ ಆಯ್ದುಕೊಳ್ಳಬಹುದು.
ಹಾಗೇನೆ, ಯಾವುದೇ ಪದವಿ ಪರೀಕ್ಷೆಯಲ್ಲಿ ವಿದ್ಯಾರ್ಥಿ ಒಂದು ವರುಷ ಮುಗಿಸಿದರೆ ಅವನಿಗೆ ಬೇಸಿಕ್ ಪ್ರಮಾಣಪತ್ರವನ್ನು, ಎರಡು ವರುಷ ಮುಗಿಸಿದರೆ ಡಿಪ್ಲೊಮಾ ಪ್ರಮಾಣ ಪತ್ರ ಮತ್ತು ಮೂರು ವರುಷ ಮುಗಿಸಿದರೆ
ಪದವಿ ಸರ್ಟಿಫಿಕೆಟ್ ನೀಡಲಾಗುವುದು.ಹೀಗಾಗಿ ಯಾವುದೇ ವಿದ್ಯಾರ್ಥಿ ಅನಿವಾರ್ಯ ಕಾರಣಗಳಿಂದಾಗಿ ಡ್ರಾಪ್‌ಔಟ್ ಆದರೆ ಅಷ್ಟಾಗಿ ತೊಂದರೆಯಾಗದು. ಹೊಸ ಶಿಕ್ಷಣ ನೀತಿಯಲ್ಲಿ ಕೌಶಲಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿರುವುದು ಸ್ವಾಗತಾರ್ಹ. ಅದ ರಂತೆಯೆ ಆಟೋಟ ಮತ್ತು ಪ್ರಾಯೋಗಿಕ ಕಲಿಕೆಗೆ ಬಹಳ ಮಹತ್ವ ಕೊಟ್ಟಿರುವುದು ವಿದ್ಯಾರ್ಥಿಗಳಲ್ಲಿ ಕಲಿಕೆಯಲ್ಲಿ ಆಸಕ್ತಿ ಮತ್ತು ಕಲಿಯುವ ಹುಮ್ಮಸ್ಸು ಹೆಚ್ಚಿಸುವುದರಲ್ಲಿ ಸಂದೇಹವೇ ಇಲ್ಲ. ಹಾಗೆಯೇ ಎಂಟು ಮುಖ್ಯ ಪ್ರಾದೇಶಿಕ ಭಾಷೆಗಳಲ್ಲಿ ಇ-ಕೋರ್ಸ್‌ನ್ನು ಅಳವಡಿಸುವ ಪ್ರಸ್ತಾವನೆ ಶ್ಲಾಘನೀಯವಾದದ್ದು.
ಚಿಕ್ಕ ಮಕ್ಕಳ ಪ್ರಗತಿ ವರದಿಯಲ್ಲಿ ಅವರ ಜೀವನ ಕೌಶಲ್ಯವನ್ನು ಸೇರಿಸುವ ಕಾರ್ಯಕ್ರಮ ವಿದೆ. ಶಿಕ್ಷಣ ನೀತಿಯ ಮತ್ತೂಂದು ವಿಶೇಷತೆ ಯೆಂದರೆ ಶಾಲಾ ಮಕ್ಕಳಿಗೆ ಮುಂಜಾವಿನ ಟಿಫಿನ್ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆ ಇರುತ್ತದೆ. ಅದರಿಂದಾಗಿ ಶಾಲೆಗೆ ವಿಳಂಬವಾಗಿ ತಲುಪುವ ಪ್ರಮೇಯ ತಪ್ಪುವುದು. ಒಟ್ಟಲ್ಲಿ ಹೊಸ ಶಿಕ್ಷಣ ನೀತಿಯಿಂದ ಸರಕಾರ ಈಡೇರಿ ಸಲಿರುವ ಉದ್ದೇಶಿಸಿ ರುವ ಅಂಶಗಳನ್ನು ಹೀಗೆ ಪಟ್ಟಿ ಮಾಡಬಹುದೇನೋ?
– ಶಿಕ್ಷಣದಲ್ಲಿ ಹೊಸತನ ತರುವುದು
– ವಿದ್ಯಾರ್ಥಿಗಳಲ್ಲಿ ಶ್ರಮ, ಶಿಸ್ತು, ಗೌರವಕ್ಕೆ ಉತ್ತೇಜನ ನೀಡಲು ಸ್ವಾವಲಂಬನ ಭಾವನೆಯನ್ನು ಬೆಳೆಸುವುದು.
– ನಿರುದ್ಯೋಗ ಸಮಸ್ಯೆಗೆ ಪೂರ್ಣ ವಿರಾಮ ಹಾಕುವುದು.
– ಕೌಶಲ್ಯ ಹೆಚ್ಚಿಸಿ ಸ್ವಯಂ ಉದ್ಯೋಗಕ್ಕೆ ಹೆಚ್ಚಿನ ಆಸ್ಪದ ನೀಡುವುದು.
– ಶಿಕ್ಷಣವನ್ನು ಆದಷ್ಟು ವೃತ್ತಿಪರ ಮತ್ತು ಪ್ರಾಯೋಗಿಕ ವಾಗಿರುವಂತೆ ನೋಡಿಕೊಳ್ಳುವುದು
– ವಿದೇಶದಲ್ಲಿ ಸಿಗುವಂಥ ಗುಣ ಮ ಟ್ಟ ದ ಶಿಕ್ಷಣವನ್ನು ನಮ್ಮಲ್ಲಿಯೇ ಒದಗಿಸುವುದು.
– ಪ್ರಗತಿ ಪಥದಲ್ಲಿ ಶಿಕ್ಷಣವೇ ಒಂದು ಶಕ್ತಿ ಎಂದು ಪರಿಗಣಿಸಿ ಪ್ರೋತ್ಸಾಹಿಸುವುದು.
ಆದರೆ ಹೊಸ ಶಿಕ್ಷಣ ನೀತಿಯು ಮಾನವ ಶಕ್ತಿ ಯೋಜನೆಯನ್ನು ಅವಗಣಿಸಿದಂತಿದೆ. ಮಾನವ ಶಕ್ತಿ ಯೋಜನೆಯೆಂದರೆ ಭವಿಷ್ಯದಲ್ಲಿ ಶ್ರಮದ ಬೇಡಿಕೆ ಗನುಗುಣವಾಗಿ ವಿವಿಧ ತರಹದ ಶ್ರಮಿಕರನ್ನು ಅವಶ್ಯಕತೆಗೆ ತಕ್ಕಂತೆ ಪೂರೈಸುವ ವ್ಯವಸ್ಥೆ. ಅದರಿಂದಾಗಿ ನಿರುದ್ಯೋಗ ಸಮಸ್ಯೆ ಪೂರ್ಣವಾಗಿ ನಿವಾರಣೆಯಾಗುತ್ತದೆ ಅಂತ ಹೇಳುವದು ಕಷ್ಟ. ಯಾಕೆಂದರೆ ನಮ್ಮಲ್ಲಿ ಜನಸಂಖ್ಯೆ ಇನ್ನೂ ಏರುಗತಿಯಲ್ಲಿಯೇ ಸಾಗಿದೆ.
ಡಾ| ಎಸ್.ಡಿ.ನಾಯ್ಕ, ಆರ್ಥಿಕ ತಜ್ಞ