Advertisement
ಕೋವಿಡ್ 19 ಸೋಂಕು ಮಾರುಕಟ್ಟೆಯ ಮೇಲೆ ನಿರೀಕ್ಷೆಗಿಂತ ಹೆಚ್ಚಿನ ದುಷ್ಪರಿಣಾಮ ಬೀರುತ್ತಿದೆ. ಆರ್ಥಿಕತೆ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಈ ಸಮಯದಲ್ಲಿಯೂ, ಹೂಡಿಕೆದಾರರನ್ನು ಆಕರ್ಷಿಸುವಲ್ಲಿ ಸ್ಟಾಕ್ ಮಾರುಕಟ್ಟೆ ಹಿಂದೆ ಬಿದ್ದಿಲ್ಲ. ಈ ವರ್ಷ ಮೊದಲ ಐದು ತಿಂಗಳಲ್ಲಿ ಹೊಸದಾಗಿ ತೆರೆಯಲಾದ ಡಿಮ್ಯಾಟ್ ಖಾತೆಗಳ ಸಂಖ್ಯೆಯೇ ಅದಕ್ಕೆ ಸಾಕ್ಷಿ.
Related Articles
Advertisement
ಮ್ಯೂಚುವಲ್ ಫಂಡ್: ಷೇರುಪೇಟೆಯಲ್ಲಿ ಲಾಭ ತಂದುಕೊಡುವ ಷೇರುಗಳನ್ನು ಆರಿಸಲು ಜಾಣ್ಮೆ ಅತ್ಯಗತ್ಯ. ಇಕ್ವಿಟಿ ಹೂಡಿಕೆಗಳ ಕುರಿತಾಗಿ ಕೆಲ ಸರಳ ವಿಚಾರಗಳನ್ನು ತಿಳಿದುಕೊಳ್ಳ ಬೇಕಾದ್ದು ಅವಶ್ಯ. ಕಂಪನಿಗಳ ಹಣಕಾಸು ವರದಿಯನ್ನು ಪರಿಶೀಲಿಸಿ, ಯಾವ ಯಾವ ಬಗೆಯ ಷೇರುಗಳನ್ನು ಸಂಸ್ಥೆ ಕೊಡುತ್ತಿದೆ ಎಂಬುದನ್ನು ತಿಳಿದುಕೊಳ್ಳ ಬೇಕಾಗುತ್ತದೆ. ಹೀಗಾಗಿ, ಸಮಯ ಮತ್ತು ಅನುಭವ ವನ್ನು ಬೇಡುವ ಕೆಲಸವಿದು. ಹೂಡಿಕೆದಾ ರರು ತಂತಮ್ಮ ಕೆಲಸಗಳಲ್ಲಿ ಬಿಝಿಯಾಗಿರುವುದರಿಂದ ಷೇರುಪೇಟೆಯ ಕಡೆ ಗಮನ ನೀಡಲು ಸಾಧ್ಯವಾಗದೇ ಹೋಗಬಹುದು.
ತಾವು ಕೊಳ್ಳಬೇಕಿರುವ ಷೇರುಗಳ ಸಂಸ್ಥೆಯ ಇತ್ಯೋಪರಿಯನ್ನು ಜಾಲಾಡಲು ತುಸು ಕಷ್ಟವಾಗಬಹುದು. ಇಂಥವರು ಮ್ಯೂಚುವಲ್ ಫಂಡ್ ಮೊರೆ ಹೋಗಬಹುದು. ಮ್ಯೂಚುವಲ್ ಫಂಡ್ ಗಳನ್ನು ವೃತ್ತಿಪರ ಫಂಡ್ ಮ್ಯಾನೇಜರ್ ಗಳು ನಿರ್ವಹಿಸುತ್ತಿರು ತ್ತಾರೆ. ಅವರ ಕೆಲಸವೇ ಲಾಭ ತಂದುಕೊಡುವ ಷೇರುಗಳನ್ನು ಆರಿಸಿ ಅದರಲ್ಲಿ ಹಣ ತೊಡಗಿಸುವುದು. ಅವರು ತಮ್ಮ ಅನುಭವದಿಂದ ಲಾಭ ದೊರಕಿಸಿಕೊಡುವ ಷೇರುಗಳನ್ನು ಪತ್ತೆ ಹಚ್ಚಿ, ಆ ಸಂಸ್ಥೆಯ ಇತ್ಯೋಪರಿಯನ್ನು ಹೂಡಿಕೆದಾರರ ಮುಂದಿರಿಸುತ್ತಾರೆ. ಇದರಿಂದಾಗಿ ಹೂಡಿಕೆದಾರರ ಅರ್ಧ ತಲೆನೋವು ನಿವಾರಣೆಯಾಗುತ್ತದೆ.
ಫಂಡ್ ಮ್ಯಾನೇಜರ್‌ಗಳು ಹತ್ತು ಹಲವು ವಿವಿಧ ಬಗೆಯ ಸಂಸ್ಥೆಗಳನ್ನು ಅಧ್ಯಯನಕ್ಕೊಳಪಡಿಸಿ, ಅವುಗಳ ಪೋರ್ಟ್ ಫೋಲಿಯೋಗಳನ್ನು ಹೂಡಿಕೆದಾರರ ಮುಂದಿರಿಸು ತ್ತಾರೆ. ಅದರಲ್ಲಿ ತಮಗಿಷ್ಟವಾದ ಪ್ಯಾಕೇಜುಗಳನ್ನು ಆರಿಸಿಕೊಂಡು ಹೂಡಿಕೆ ದಾರರು ಹಣ ತೊಡಗಿಸ ಬಹುದು. ಇದಕ್ಕಾಗಿ ಫಂಡ್ ಮ್ಯಾನೇಜಿಂಗ್ ಸಂಸ್ಥೆಗಳು ನಿಗದಿತ ಶುಲ್ಕ ವಿಧಿಸುತ್ತವೆ. ಮ್ಯೂಚುವಲ್ ಫಂಡ್ ಉದ್ಯಮ, “ಕ್ಯಾಪಿಟಲ್ ಮಾರ್ಕೆಟ್ ರೆಗ್ಯುಲೇಟರ್ ಸೆಕ್ಯುರಿಟೀಸ್ ಅಂಡ್ ಎಕ್ಸ್ ಚೇಂಚ್ ಬೋರ್ಡ್ ಆಫ್ ಇಂಡಿಯಾ’ದ ನಿಯಂತ್ರಣಕ್ಕೆ ಒಳಪಟ್ಟಿದೆ. ಹೂಡಿಕೆ ದಾರರಿಗೆ ಅನುಕೂಲ ಮಾಡಿಕೊಡುವುದೇ ಈ ಮಂಡಳಿಯ ಗುರಿ.
ಹೀಗಾಗಿ ಮ್ಯೂಚುವಲ್ ಫಂಡ್‌ಗಳು ರಿಸ್ಕ್ ರಹಿತ ಹೂಡಿಕೆಗೆ ಅವಕಾಶ ಮಾಡಿಕೊಡು ತ್ತವೆ. ಇಕ್ವಿಟಿ ಮಾರು ಕಟ್ಟೆಯಲ್ಲಿ 500 ರೂ.ನಷ್ಟು ಸಣ್ಣ ಮೊತ್ತದ ಹೂಡಿಕೆಯನ್ನು ಮಾಡಲೂ ಮ್ಯೂಚುವಲ್ ಫಂಡ್ ಅನುವು ಮಾಡಿಕೊಡುತ್ತದೆ. ಮ್ಯೂಚು ವಲ್ ಫಂಡ್‌ನಲ್ಲಿ ಸಿಸ್ಟಮ್ಯಾಟಿಕ್ ಇನ್ವೆಸ್ಕ್‌ಮೆಂಟ್ ಪ್ಲಾನ್(ಎಸ್ ಐಪಿ) ಮಾರ್ಗವನ್ನು ಅನುಸರಿಸುವುದು ಉತ್ತಮ. ಎಸ್ ಐಪಿ ಮುಖಾಂತರ ಒಂದೆರಡು ಇಕ್ವಿಟಿ ಫಂಡ್‌ಗಳಲ್ಲೂ ಹಣ ಹೂಡಿದರೆ ಮೂರ್ನಾಲ್ಕು ವರ್ಷಗಳಲ್ಲಿ ಮಾರುಕಟ್ಟೆ ಯಾವ ರೀತಿ ವರ್ತಿಸುತ್ತದೆ ಎನ್ನುವುದು ಹೂಡಿಕೆದಾರರಿಗೆ ತಿಳಿದು ಬಿಡುತ್ತದೆ. ಇಕ್ವಿಟಿಗಳಿಂದ ಉತ್ತಮ ಲಾಭಾಂಶವನ್ನು ಪ್ರತಿವರ್ಷ ನಿರೀಕ್ಷಿಸ ಲಾಗದು. ಕೆಲ ವರ್ಷಗಳ ಕಾಲ ಅಲ್ಲಿಯೇ ಬಿಡಬೇಕು.
ಪರಿಣತರ ಸಹಾಯ: ದೈನಂದಿನ ಚಟುವಟಿಕೆಗಳಲ್ಲಿ ಮುಳುಗಿರುವವರು, ಷೇರುಪೇಟೆ ಮಾರುಕಟ್ಟೆಯ ಬೆಳವಣಿಗೆಗಳ ಬಗ್ಗೆ ಗಮನ ಹರಿಸಲು ಸಾಧ್ಯವಾಗದೇ ಇರುವವರು ಹಣಕಾಸು ಪರಿಣತರ ನೆರವು ಪಡೆಯಬಹುದು. ಇವರನ್ನು ಫೈನಾನ್ಷಿಯಲ್ ಪ್ಲಾನರ್ ಎಂದು ಕರೆಯುತ್ತಾರೆ. ಮಾರುಕಟ್ಟೆಯಲ್ಲಿ 2,500ಕ್ಕೂ ಹೆಚ್ಚಿನ ಮ್ಯೂಚುವಲ್ ಫಂಡ್ ಯೋಜನೆಗಳಿವೆ. ಫೈನಾನ್ಷಿಯಲ್ ಪ್ಲಾನರ್ ಅಥವಾ ಸೆಬಿ (ಸ್ಟಾಕ್ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ) ನೋಂದಾಯಿತ ಹೂಡಿಕೆ ಸಲಹೆಗಾರನ ಸಹಾಯ ಪಡೆದುಕೊಂಡು, ಸೂಕ್ತವೆನಿಸಿದ ಮ್ಯೂಚುವಲ್ ಫಂಡ್ ಯೋಜನೆಯನ್ನು ಆರಿಸಿಕೊಳ್ಳಬಹುದು.
ಪ್ರತಿ ಯೋಜನೆಯಲ್ಲಿಯೂ ವಿವಿಧ ಬಗೆಯ ಸಂಸ್ಥೆಯ ಷೇರುಗಳಿರುತ್ತವೆ. ಫೈನಾನ್ಷಿಯಲ್ ಪ್ಲಾನರ್‌ಗಳು ನಿಷ್ಪಕ³ಪಾತಿಗಳಾಗಿರುತ್ತಾರೆ. ಅವರು ಹೂಡಿಕೆದಾರನ ಆದಾಯ, ಖರ್ಚು ವೆಚ್ಚಗಳನ್ನು ಪರಿಗಣಿಸಿ ತಮ್ಮ ಅನುಭವದ ಆಧಾರದ ಮೇಲೆ ಸೂಕ್ತವಾದ ಮ್ಯೂಚುವಲ್ ಫಂಡ್ ಯೋಜನೆಯನ್ನು ಆರಿಸುತ್ತಾರೆ. ಅಲ್ಲದೆ, ಹೂಡಿಕೆಯನ್ನು ಕಾಲಕಾಲಕ್ಕೆ ಪರಾಮರ್ಶೆಗೆ ಗುರಿಪಡಿಸಿ ಅದರ ವರದಿಯನ್ನು ಹೂಡಿಕೆದಾರರಿಗೆ ನೀಡುತ್ತಾರೆ.