ಹಳೆಯಂಗಡಿ: ಇಲ್ಲಿನ ಇಂದಿರಾನಗರ ಪ್ರದೇಶದಲ್ಲಿ ಹೊಸದಾಗಿ ಕೊಳವೆ ಬಾವಿಯನ್ನು ಕೊರೆದು ನೀರಿನ ಸಮಸ್ಯೆ ಪರಿಹಾರಿಸಲು ಹಳೆಯಂಗಡಿ ಗ್ರಾಮ ಪಂಚಾಯತ್ ಮುಂದಾಗಿದೆ.
ಇಂದಿರಾನಗರದಲ್ಲಿನ ನೀರಿನ ಬವ ಣೆಯ ಬಗ್ಗೆ ಉದಯವಾಣಿ ಸುದಿನ ಮೇ 5ರಂದು ಜೀವಜಲ ಸರಣಿಯಲ್ಲಿ ವರದಿ ಪ್ರಕಟಿಸಿತ್ತು.
ಗ್ರಾ.ಪಂ.ಕುಡಿಯುವ ನೀರು ಸರಬರಾಜು ಸಮಿತಿ ನೇತೃತ್ವದಲ್ಲಿ ಸೋಮವಾರ ಬೆಳಗ್ಗೆ ಹೊಸದಾಗಿ ಕೊಳವೆ ಬಾವಿಯನ್ನು ಕೊರೆದಿದ್ದು, ಇದರಲ್ಲಿ 3.5 ಇಂಚು ನೀರು ಸಿಕ್ಕಿದೆ. ಇದಕ್ಕೆ ಪಂಪ್ ಅಳವಡಿಸಿ ನೀರು ಸರಬರಾಜಿಗೆ ಕ್ರಮ ಕೈಗೊಳ್ಳಲು ಸಮಿತಿ ಸಜ್ಜಾಗಿದೆ. ಹಳೆಯಂಗಡಿ ಗ್ರಾಮ ಪಂಚಾಯತ್‌ನ ನೀರು ಸರಬರಾಜು ಸಮಿತಿಯ ಅಧ್ಯಕ್ಷ ಎಚ್. ವಸಂತ ಬೆರ್ನಾಡ್, ಪಂ. ಸದಸ್ಯರಾದ ಅಬ್ದುಲ್ ಅಜೀಜ್, ಅಬ್ದುಲ್ ಖಾದರ್ ಮತ್ತಿತರರು ಉಪಸ್ಥಿತರಿದ್ದರು.
ಈ ಬಗ್ಗೆ ಉದಯ ವಾಣಿಯೊಂದಿಗೆ ಸಮಿತಿಯ ಅಧ್ಯಕ್ಷ ಎಚ್. ವಸಂತ ಬೆರ್ನಾಡ್ ಪ್ರತಿಕ್ರಿಯಿಸಿ, ಜನರ ಸಮಸ್ಯೆಗೆ ಪ್ರಥಮ ಆದ್ಯತೆ ನೀಡಿರುವುದರಿಂದ ನೀರಿನ ವ್ಯತ್ಯಯದ ಸಂದರ್ಭದಲ್ಲಿ ಕೊಳವೆ ಬಾವಿ ಅಗತ್ಯವಾಗಿತ್ತು. ಜನ ವಸತಿ ಪ್ರದೇಶವಾಗಿರುವುದರಿಂದ ಇಂದಿರಾ ನಗರದಲ್ಲಿ ತುರ್ತಾಗಿಯೇ ಈ ಕೊಳವೆ ಬಾವಿಯನ್ನು ಸಮಿತಿಯ ಮೂಲಕವೇ ಕೊರೆಯಲಾಗಿದೆ. ಹಿಂದೆ ಇಂತಹ ಸಮಸ್ಯೆಗೆ ಟಾಸ್ಕ್ಫೋರ್ಸ್ ಎಂಬ ಸಮಿತಿ ಇತ್ತು. ಈàಗ ಅವರ ಬಗ್ಗೆ ಮಾಹಿತಿ ಇಲ್ಲ. ವಿದ್ಯುತ್ ಸರಬರಾ ಜಿನಲ್ಲಿ ಏರಿಳಿತ ಕಂಡರೆ ಮಾತ್ರ ನೀರು ಸರಬರಾಜಿನಲ್ಲಿ ಸ್ವಲ್ಪ ತಡೆಯಾಗಬಹುದು ಹೊರತು ಯಾವುದೇ ರೀತಿಯಲ್ಲೂ ನೀರಿನ ನಿರ್ವಹಣೆಗೆ ತೊಡಕಾಗುವುದಿಲ್ಲ ಎಂದರು.