Advertisement

ನೂತನ ಪಂಚಾಯತ್‌ ಕಚೇರಿ ಉದ್ಘಾಟನೆ

03:49 PM Mar 05, 2018 | |

ದೇರಳಕಟ್ಟೆ: ಅಭಿವೃದ್ಧಿಯಾಗುತ್ತಿರುವ ದೇರಳಕಟ್ಟೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಬೆಳ್ಮ ಗ್ರಾಮ ಪಂಚಾಯತ್‌ ದೂರದರ್ಶಿತ್ವ ಯೋಜನೆಯಿಂದ ಗಾಂಧೀಜಿ ಕಂಡ ರಾಮರಾಜ್ಯದ ಕನಸು ನನಸು ಮಾಡಲಿ ಎಂದು ಸಚಿವ ಯು.ಟಿ. ಖಾದರ್‌ ಅಭಿಪ್ರಾಯಪಟ್ಟರು. ಬೆಳ್ಮ ನೂತನ ಗ್ರಾ.ಪಂ. ಕಚೇರಿಗೆ ಚಾಲನೆ ಮತ್ತು ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದರು.

Advertisement

ಗ್ರಾ.ಪಂ. ಅಧ್ಯಕ್ಷೆ ವಿಜಯಾ ಕೃಷ್ಣಪ್ಪ, ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ತಾ.ಪಂ. ಅಧ್ಯಕ್ಷ ಮಹಮ್ಮದ್‌ ಮೋನು ಮಲಾರ್‌, ಸದಸ್ಯರಾದ ನೂರ್‌ ಜಹಾನ್‌, ಅಬ್ದುಲ್‌ ಜಬ್ಟಾರ್‌ ಬೋಳಿಯಾರ್‌, ಮಾಜಿ ಸದಸ್ಯ ಮಹಮ್ಮದ್‌ ಮುಸ್ತಫಾ ಮಲಾರ್‌, ಜಿಲ್ಲಾ ಅಲ್ಪಸಂಖ್ಯಾಕ ಘಟಕದ ಅಧ್ಯಕ್ಷ ಎನ್‌,ಎಸ್‌, ಕರೀಂ, ಕಣಚೂರು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕಣಚೂರು ಮೋನು, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸದಾನಂದ, ಬೆಳ್ಮ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಹಸನಬ್ಬ, ಪಿಡಿಒ ನವೀನ್‌ ಹೆಗ್ಡೆ, ಸದಸ್ಯರಾದ ರಝಿಯಾ, ನಝಿಮಾ, ಕೆ.ಎಚ್‌. ಹಸೈನಾರ್‌, ಅಬ್ದುಲ್ಲಾ ಎಂ.ಎ, ವಿನೋದ ಶ್ಯಾಂ ಸುಂದರ್‌, ಸುಂದರಿ, ಮರಿಯಮ್ಮ, ಮಹಮ್ಮದ್‌ ಕಬೀರ್‌ ಡಿ, ಸುಹೈಲಾ ಉಸ್ಮಾನ್‌, ಅಬ್ದುಲ್‌ ರಝಾಕ್‌ ಡಿ, ಭವಾನಿ, ಸತೀಶ್‌ ಕುಮಾರ್‌, ಕಾರ್ಯದರ್ಶಿ ಬಾಲಕೃಷ್ಣ, ಗಟ್ಟಿ, ಮೆಸ್ಕಾಂ ಸಲಹಾ ಸಮಿತಿ ಸದಸ್ಯರಾದ ಮಹಮ್ಮದ್‌ ಅಡ್ಕರೆ, ನಾಗಪ್ಪ ಬರಿಕೆ, ಕೆಡಿಪಿ ಸದಸ್ಯ ಪದ್ಮನಾಭ ನರಿಂಗಾನ, ಮುಖಂಡರಾದ ರವಿರಾಜ್‌ ಶೆಟ್ಟಿ, ಮೊಯಿದಿನ್‌ ಕುಂಞಿ ಪಟ್ಟೋರಿ, ನಿವೃತ್ತ ಕಂದಾಯ ಉಪನಿರೀಕ್ಷಕ ನಾರಾಯಣ ಶೆಟ್ಟಿ , ರಾಜ್ಯ ಆಹಾರ ಇಲಾಖೆಯ ಸಲಹ ಸಮಿತಿ ಸದಸ್ಯ ಟಿ.ಎಸ್‌. ಅಬ್ದುಲ್ಲಾ, ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಡಿ. ಅಬ್ಟಾಸ್‌, ಯುವ ಕಾಂಗ್ರೆಸ್‌ ಅಧ್ಯಕ್ಷ ಅಬ್ದುಲ್‌ ರವೂಫ್‌ ಸಿ.ಎಂ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಗದೀಶ್‌ ರೈ, ಉದ್ಯಮಿ ಇಬ್ರಾಹಿಂ, ಮಂಜನಾಡಿ ಗ್ರಾ.ಪಂ. ಅಧ್ಯಕ್ಷ ಮಹಮ್ಮದ್‌ ಅಸೈ, ಕಿನ್ಯ ಗ್ರಾ.ಪಂ. ಉಪಾಧ್ಯಕ್ಷ ಸಿರಾಜ್‌ ಕಿನ್ಯ, ಮಾಜಿ ಸದಸ್ಯ ಅಮರ್‌ ಪ್ರಸಾದ್‌ ಶೆಟ್ಟಿ ಉಪಸ್ಥಿತರಿದ್ದರು. ಗ್ರಾ.ಪಂ. ಉಪಾಧ್ಯಕ್ಷ ಬಿ.ಎಂ.ಅಬ್ದುಲ್‌ ಸತ್ತಾರ್‌ ಸ್ವಾಗತಿಸಿ, ಮಾಜಿ ಅಧ್ಯಕ್ಷ ಯೂಸುಫ್‌ ಬಾವ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯ ಉಸ್ಮಾನ್‌ ಅಕ್ಸಾ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next