Advertisement

ನವ ಜೋಡಿಗಳ ಮತದಾನ

11:35 PM May 19, 2019 | Lakshmi GovindaRaj |

ಕಲಬುರಗಿ: ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಭಾನುವಾರ ಮೂವರು ನವವಿವಾಹಿತ ಜೋಡಿಗಳು ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಂಡರು.

Advertisement

ರಟಕಲ್‌ ಗ್ರಾಮದ ಒಂದೇ ಕುಟುಂಬದ ನವ ದಂಪತಿ ರಾಮಶೆಟ್ಟಿ ಸೀಗಿ-ನಾಗವೇಣಿ ಮತ್ತು ವೀರಣ್ಣ ಸೀಗೆ-ಲಕ್ಷ್ಮಿ ಒಟ್ಟಾಗಿ ಬಂದು 2ನೇ ವಾರ್ಡ್‌ನ ಮತಗಟ್ಟೆಯಲ್ಲಿ ಮತದಾನದ ಹಕ್ಕು ಚಲಾಯಿಸಿದರು.

ಚಿಮ್ಮಾಇದಲಾಯಿ ಗ್ರಾಮದಲ್ಲಿ ನವ ಜೋಡಿ ವೀರೇಶ ಧೂಳಪ್ಪನವರ ಮತ್ತು ಸ್ವಪ್ನಾ ಅವರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸ್ಥಾಪಿಸಲಾದ ಮತಗಟ್ಟೆಯಲ್ಲಿ ಮತದಾನ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next