Advertisement

ಬಾಹ್ಯಾಕಾಶ ಯುದ್ಧ ತಡೆಗೆ ಹೊಸ ಸಂಸ್ಥೆ

09:06 AM Jun 14, 2019 | sudhir |

ಹೊಸದಿಲ್ಲಿ: ಬಾಹ್ಯಾಕಾಶದ ಮೂಲಕ ನಡೆಯುವ ದಾಳಿಯನ್ನು ತಡೆಯುವ ಸಾಮರ್ಥ್ಯ ಪಡೆದು ಕೊಂಡಿರುವ ಭಾರತ ಈಗ ಮತ್ತೂಂದು ಹೆಜ್ಜೆ ಇರಿಸಿದೆ.

Advertisement

ಆಗಸದಲ್ಲಿ ನಡೆಯುವ ಯುದ್ಧಗಳನ್ನು ನಿಭಾಯಿಸಲೋಸುಗ ಪ್ರತ್ಯೇಕ ಸಂಸ್ಥೆ ಸ್ಥಾಪಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭದ್ರತಾ ವ್ಯವಹಾರಗಳಿಗಾಗಿನ ಕೇಂದ್ರ ಸಂಪುಟ ಸಮಿತಿ (ಸಿಸಿಎಸ್‌) ಮಂಗಳವಾರ ನಿರ್ಧರಿಸಿದೆ. ಹೊಸ ಸಂಸ್ಥೆಯನ್ನು ಬಾಹ್ಯಾಕಾಶ ರಕ್ಷಣಾ ಸಂಶೋಧನಾ ಸಂಸ್ಥೆ (ಡಿಫೆನ್ಸ್‌ ಸ್ಪೇಸ್‌ ರಿಸರ್ಚ್‌ ಏಜೆನ್ಸಿ- ಡಿಎಸ್‌ಆರ್‌ಒ) ಎಂದು ಹೆಸರಿಸಲಾಗಿದೆ.

ಬೆಂಗಳೂರಿನಲ್ಲಿ ಹೊಸ ಸಂಸ್ಥೆಯ ಪ್ರಧಾನ ಕಚೇರಿ ಇರಲಿದೆ.

ಈ ಸಂಸ್ಥೆ ಬಾಹ್ಯಾಕಾಶದ ಮೂಲಕ ನಡೆಯುವ ದಾಳಿ, ಯುದ್ಧ ನಿಭಾಯಿಸುವ ನಿಟ್ಟಿನಲ್ಲಿ ಬಾಹ್ಯಾಕಾಶ ಯುದ್ಧ ವ್ಯವಸ್ಥೆ ರೂಪಿಸಲಿದೆ.

“ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭದ್ರತಾ ವ್ಯವಹಾರಗಳಿಗಾಗಿನ ಕೇಂದ್ರ ಸಂಪುಟ ಸಮಿತಿ ಬಾಹ್ಯಾಕಾಶ ರಕ್ಷಣಾ ಸಂಶೋಧನಾ ಸಂಸ್ಥೆ ರಚಿಸಲು ನಿರ್ಧರಿಸಿದೆ. ಮುಂದಿನ ದಿನಗಳಲ್ಲಿ ಆ ಸಂಸ್ಥೆ ಬಾಹ್ಯಾಕಾಶ ಯುದ್ಧ ವ್ಯವಸ್ಥೆ ರೂಪಿಸುವ ತಂತ್ರಜ್ಞಾನ ಮತ್ತು ವ್ಯವಸ್ಥೆ ಅಭಿವೃದ್ಧಿ ಪಡಿಸಲಿದೆ’ ಎಂದು ರಕ್ಷಣಾ ಸಚಿವಾಲಯದ ಮೂಲಗಳನ್ನು ಉಲ್ಲೇಖೀಸಿ “ಎಎನ್‌ಐ’ ವರದಿ ಮಾಡಿದೆ.

Advertisement

ವಿಜ್ಞಾನಿಗಳ ನೇತೃತ್ವ: ಡಿಎಸ್‌ಆರ್‌ಒ ವಿಜ್ಞಾನಿಗಳು ನೇತೃತ್ವ ವಹಿಸಲಿದ್ದಾರೆ. ನೇತೃತ್ವ ವಹಿ ಸುವ ವಿಜ್ಞಾನಿಗೆ ಜಂಟಿ ಕಾರ್ಯ ದರ್ಶಿಯ ಸ್ಥಾನಮಾನ ನೀಡಲಾಗುತ್ತದೆ. ಏರ್‌-ವೈಸ್‌ ಮಾರ್ಷಲ್‌ ರ್‍ಯಾಂಕ್‌ನ ಹಿರಿಯ ಅಧಿಕಾರಿ ಡಿಫೆನ್ಸ್‌ ಸ್ಪೇಸ್‌ ಏಜೆನ್ಸಿಯ ನೇತೃತ್ವ ವಹಿಸಲಿದ್ದಾರೆ.ಜತೆಗೆ ಸೇನೆಯ ಮೂರು ವಿಭಾಗಗಳ ಹಿರಿಯ ಅಧಿಕಾರಿಗಳ ನೆರವನ್ನೂ ಪಡೆದು, ಬಾಹ್ಯಾಕಾಶ ಸಂಬಂಧಿ ಮಾಹಿತಿ ಪಡೆದು ಕೊಂಡು ಕೆಲಸ ಮಾಡ ಲಿದೆ. ಡಿಫೆನ್ಸ್‌ ಸ್ಪೇಸ್‌ ಏಜೆನ್ಸಿಗೆ ಹೊಸ ಸಂಸ್ಥೆ ಸಂಶೋಧನೆ ಮತ್ತು ಅಭಿವೃದ್ಧಿ ಕೆಲಸಗಳಲ್ಲಿ ನೆರವು ನೀಡಲಿದೆ. ಸೇನೆಯ ಮೂರು ವಿಭಾಗಗಳ ಸದಸ್ಯರು ಹೊಸ ಸಂಸ್ಥೆಯಲ್ಲಿ ಇರಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next