Advertisement

ಸ್ವಂತ ಕಚೇರಿಗಳಿಂದ ಸಂಘಟನೆ ಬಲಗೊಳ್ಳಲು ಸಾಧ್ಯ: ಮಹೇಶ್‌ ಎಸ್‌. ಶೆಟ್ಟಿ

12:04 PM Nov 21, 2021 | Team Udayavani |

ಚೆಂಬೂರು: ಸಂಘ-ಸಂಸ್ಥೆಗಳಿಗೆ ಸ್ವಂತ ಕಚೇರಿ ಇದ್ದರೆ ಆ ಸಂಸ್ಥೆಯ ಕಾರ್ಯ ಚಟುವಟಿಕೆಗಳು ಹೆಚ್ಚಾಗುತ್ತದೆ. ಈ ನಿಟ್ಟಿ ನಲ್ಲಿ ತಿಲಕ್‌ ನಗರ ಪೆಸ್ತೂಮ್‌ ಸಾಗರ್‌ ಕರ್ನಾಟಕ ಸಂಘದ ಸ್ವಂತ ಕಚೇರಿ ಯನ್ನು ಉದ್ಘಾಟಿಸಿರುವುದು ಸಂತೋಷವನ್ನುಂಟು ಮಾಡಿದೆ. ಇದಕ್ಕಾಗಿ ಶ್ರಮಿಸಿದ ಎಲ್ಲರನ್ನೂ ನಾನು ಅಭಿನಂದಿಸುತ್ತೇನೆ ಎಂದು ಉದ್ಯಮಿ, ಸಮಾಜ ಸೇವಕ ಮಹೇಶ್‌ ಶೆಟ್ಟಿ ಅವರು ನುಡಿದರು.

Advertisement

ನ. 19ರಂದು ಚೆಂಬೂರಿನ ತಿಲಕ್‌ ನಗರ ಪೆಸ್ತೂಮ್‌ ಸಾಗರ್‌ ಕರ್ನಾಟಕ ಸಂಘದ ನೂತನ ಕಚೇರಿಯನ್ನು ಉದ್ಘಾ ಟಿಸಿ ಮಾತನಾಡಿದ ಅವರು, ಕರಾವಳಿ ಕರ್ನಾ ಟಕದಿಂದ ಬಂದಂತಹ ತುಳು-ಕನ್ನಡಿಗರು ಮುಂಬಯಿಯಲ್ಲಿ ಸಂಸ್ಥೆಗಳನ್ನು ನಿರ್ಮಿಸಿ ಆ ಮೂಲಕ ತಮ್ಮ ಭಾಷೆ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯ ಮಾಡುತ್ತಿದ್ದಾರೆ. ಈ ಸಂಸ್ಥೆಯಿಂದ ನಮ್ಮ ಭಾಷೆ, ಕಲೆ, ಸಂಸ್ಕೃತಿಯನ್ನು ಉಳಿಸಿ- ಬೆಳೆಸುವ ಕೆಲಸಗಳು ನಿರಂತರ ನಡೆಯುತ್ತಿ ರಬೇಕು. ಮಕ್ಕಳಿಗೆ ತುಳುನಾಡಿನ ಸಂಸ್ಕೃತಿ, ಭಾಷೆ ಯನ್ನು ತಿಳಿಯಪಡಿಸುವಂತಹ ಜವಾ ಬ್ದಾರಿ  ಯನ್ನು ಪಾಲಕರು ಹೊಂದಿರ ಬೇಕು ಎಂದು ನುಡಿದು, ನಾನು ಕೆಲವು ಕನ್ನಡಪರ ಸಂಸ್ಥೆಗಳೊಂದಿಗೆ ಸಕ್ರಿಯನಾಗಿದ್ದು ಈ ಸಂಸ್ಥೆಗೆ ಎಲ್ಲ ರೀತಿಯ ಸಹಕಾರವನ್ನು ನೀಡು ವು ದಾಗಿ ಭರವಸೆ ನೀಡಿ ಶುಭಹಾರೈಸಿದರು.

ಗಣ್ಯರು ಪ್ರಾರಂಭದಲ್ಲಿ ದೀಪ ಪ್ರಜ್ವಲಿಸಿ ನೂತನ ಕಚೇರಿಯನ್ನು ಉದ್ಘಾಟಿಸಿದರು. ಅತಿಥಿಯಾಗಿ ಉಪಸ್ಥಿತರಿದ್ದ ಸ್ಥಳೀಯ ನಗರ ಸೇವಕ ಸುಶಾಮ್‌ ಜಿ. ಸಾವಂತ್‌ ಅವರು ಮಾತನಾಡಿ, ಈ ಪರಿಸರದಲ್ಲಿ ಕರ್ನಾಟಕದ ಜನತೆ ಹೆಚ್ಚಿನ ಸಂಖ್ಯೆಯಲ್ಲಿದ್ದು ತುಳು ಕನ್ನಡಿಗರಿಗಾಗಿ ಇಲ್ಲಿ ಒಂದು ಸಂಸ್ಥೆಯು ನಿರ್ಮಾಣಗೊಂಡಿರುವುದು ಸಂತೋಷದ ವಿಷಯವಾಗಿದೆ. ಇಂತಹ ಸಂಸ್ಥೆಗಳಿಂದ ಸಮಾಜದ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯ ವಾಗುತ್ತದೆ. ಇಲ್ಲಿ ನಡೆಯುವ ಕಾರ್ಯ ಚಟುವಟಿಕೆಗಳಿಗೆ ಸಂಪೂರ್ಣ ಸಹಕಾರವನ್ನು ನಾನು ನೀಡುತ್ತೇನೆ ಎಂದರು.

ಇನ್ನೋರ್ವ ಅತಿಥಿ ಸಹ್ಯಾದ್ರಿ ಕ್ರೀಡಾ ಮಂಡಲದ ಅಧ್ಯಕ್ಷ ರಾಹುಲ್‌ ವಾಲಂಜೆ ಅವರು ಮಾತನಾಡಿ, ಸಮಾಜದಲ್ಲಿ ಸಕ್ರಿಯ ವಾಗಿ ಕೆಲಸ ಮಾಡಲು ಸಂಘ -ಸಂಸ್ಥೆಗಳ ಅಗತ್ಯವಿದೆ. ಕರ್ನಾಟಕ ಸಂಘ ಇಂದು ಕಚೇರಿಯನ್ನು ನಿರ್ಮಿಸಿ ಸಮಾಜಪರ ಕಾರ್ಯ  ಗಳಲ್ಲಿ ಸಕ್ರಿಯ ವಾಗಿರುವುದು ಅಭಿ ನಂದನೀಯ. ಇಂತಹ ಸಂಸ್ಥೆಯೊಂದಿಗೆ ನಾನು ಸದಾಯಿದ್ದೇನೆ ಎಂದು ನುಡಿದು ಶುಭಹಾರೈಸಿದರು.

ಈ ಸಂದರ್ಭದಲ್ಲಿ ಅತಿಥಿಯಾಗಿ ಪಾಲ್ಗೊಂಡ ವೇದಾಂತ್‌ ಫೌಂಡೇಶನ್‌ನ ಅಧ್ಯಕ್ಷ ಗುರುನಾಥ್‌ ಅವರು ಮಾತನಾಡಿ, ಸಂಘ-ಸಂಸ್ಥೆಗಳನ್ನು ಬೆಳೆಸುವುದರಿಂದ ಸಮಾಜದ ಏಳಿಗೆಯಾಗುತ್ತದೆ. ಸಂಸ್ಥೆಯಿಂದ ಸದಾ ಸಮಾಜ ಸೇವೆಯೊಂದಿಗೆ ನಾಡಿನ ಸಂಸ್ಕೃತಿ, ಸಂಸ್ಕಾರವನ್ನು ಬಿಂಬಿಸುವ ಕಾರ್ಯ ಕ್ರಮ ಗಳು ನಿರಂತರವಾಗಿ ನಡೆಯುತ್ತಿರಲಿ. ಸಂಸ್ಥೆಯನ್ನು ಎಲ್ಲರು ಒಂದಾಗಿ ಅಭಿವೃದ್ಧಿಯ ಪಥದತ್ತ ಕೊಂಡೊಯ್ಯುವ ಎಂದು ನುಡಿದು ಶುಭಹಾರೈಸಿದರು.

Advertisement

ಪ್ರಾರಂಭದಲ್ಲಿ ತಿಲಕ್‌ ನಗರ ಪೆಸ್ತೂಮ್‌ ಸಾಗರ ಕರ್ನಾಟಕ ಸಂಘದ ಅಧ್ಯಕ್ಷ ಸುರೇಶ್‌ ಶೆಟ್ಟಿ ಅವರು ಅತಿಥಿಗಳನ್ನು ಸ್ವಾಗ ತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯ ದರ್ಶಿ ಅರುಣ್‌ ಕುಮಾರ್‌ ಶೆಟ್ಟಿ ಅವರು ಸಂಘವು ನಡೆಸುತ್ತಿರುವ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸಿದರು.

ತಿಲಕ್‌ ನಗರ ಪೆಸ್ತೂಮ್‌ ಸಾಗರ್‌ ಕರ್ನಾಟಕ ಸಂಘದ ಗೌರವಾಧ್ಯಕ್ಷ ಸತೀಶ್‌ ಶೆಟ್ಟಿ, ಅಧ್ಯಕ್ಷ ಸುರೇಶ್‌ ಶೆಟ್ಟಿ, ಗೌರವ ಕಾರ್ಯ ದರ್ಶಿ ಅರುಣ್‌ ಕುಮಾರ್‌ ಶೆಟ್ಟಿ, ಕೋಶಾಧಿ ಕಾರಿ ಗಣೇಶ್‌ ಪೂಜಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಲಿನಿ ಎಸ್‌. ಶೆಟ್ಟಿ, ಮಾಜಿ ಅಧ್ಯಕ್ಷರಾದ ನ್ಯಾಯವಾದಿ ನಿತ್ಯಾನಂದ ಶೆಟ್ಟಿ, ರಾಮಣ್ಣ ದೇವಾಡಿಗ, ಸಂಸ್ಥೆಯ ಇತರ ಪದಾಧಿಕಾರಿಗಳಾದ ಗಣೇಶ್‌ ಪೂಜಾರಿ, ಶಶಿ ಪೂಜಾರಿ, ಮಾಲತಿ ಜೆ. ಮೊಲಿ, ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷೆ ಹೇಮಲತಾ ಎಸ್‌. ಶೆಟ್ಟಿ, ಜಯಂತಿ ಆರ್‌. ಮೊಲಿ, ವಿದ್ಯಾ ಎ. ಶೆಟ್ಟಿ, ಶೀಲಾ ಜಿ. ಶೆಟ್ಟಿ, ಗೀತಾ ಎಸ್‌. ಮೊದಲಾದವರು ಅತಿಥ-ಗಣ್ಯರನ್ನು ಪುಷ್ಪಗುತ್ಛವನ್ನಿತ್ತು ಗೌರವಿಸಿದರು.

ಕಟ್ಟಡ ಸಮಿತಿಯ ಕಾರ್ಯಧ್ಯಕ್ಷ ಜಯ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು, ಸರಿತಾ ಯು. ಶೆಟ್ಟಿ, ವೇದಾ ಎಸ್‌. ಶೆಟ್ಟಿ, ರೂಪಾ ಎಚ್‌. ಶೆಟ್ಟಿ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ರಾಮಣ್ಣ ದೇವಾಡಿಗ ಅವರು ವಂದಿಸಿದರು. ಈ ಸಂದರ್ಭದಲ್ಲಿ ನೂತನ ಕಚೇರಿ ನಿರ್ಮಿಸಲು ಸಹಕರಿಸಿದ ಎಲ್ಲ ದಾನಿಗಳನ್ನು, ಹಿತೈಷಿಗಳನ್ನು ಗೌರವಿಸಲಾ ಯಿತು.

 

-ಚಿತ್ರ-ವರದಿ: ಸುಭಾಷ್‌ ಶಿರಿಯ.

Advertisement

Udayavani is now on Telegram. Click here to join our channel and stay updated with the latest news.

Next