ಭುವನೇಶ್ವರ : ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ 21 ಸದಸ್ಯರ ಸಚಿವ ಸಂಪುಟದಲ್ಲಿ, ಒಂಬತ್ತು ನಾಯಕರು ಮತ್ತೆ ಹೊಸ ಸಂಪುಟದಲ್ಲಿ ಮರು ಸೇರ್ಪಡೆಗೊಂಡಿದ್ದು, 11 ಸಚಿವರನ್ನು ಕೈಬಿಟ್ಟಿದ್ದಾರೆ. ಭಾನುವಾರ 13 ಸಂಪುಟ ಸಚಿವರು, 8 ರಾಜ್ಯ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು
ಪಶ್ಚಿಮ ಒಡಿಶಾದ ಪ್ರಾತಿನಿಧ್ಯವನ್ನು ಏಳಕ್ಕೆ ಹೆಚ್ಚಿಸಿದ್ದಾರೆ, ಈ ಪ್ರದೇಶದಲ್ಲಿ ಆಡಳಿತಾರೂಢ ಬಿಜೆಡಿ ಯು ಬಿಜೆಪಿಯಿಂದ ಸವಾಲು ಎದುರಿಸುತ್ತಿದೆ.
ಸಂಪುಟದಿಂದ ಕೈಬಿಡಲಾದ ಶಾಸಕರೆಂದರೆ, ಬಿಕ್ರಮ್ ಕೇಶರಿ ಅರುಖಾ, ಪದ್ಮನಾಭ ಬೆಹೆರಾ, ಪ್ರತಾಪ್ ಜೆನಾ, ಅರುಣ ಕುಮಾರ್ ಸಾಹೂ, ಸುದಮ್ ಮಾರ್ಂಡಿ, ಸುಶಾಂತ ಸಿಂಗ್, ದಿಬ್ಯಾ ಶಂಕರ್ ಮಿಶ್ರಾ, ಜ್ಯೋತಿ ಪ್ರಕಾಶ್ ಪಾಣಿಗ್ರಾಹಿ, ಪ್ರೇಮಾನಂದ ನಾಯಕ್, ರಘುನಂದನ್ ದಾಸ್ ಮತ್ತು ಪದ್ಮಿನಿ ಡಿಯಾನ್ ಅವರಾಗಿದ್ದಾರೆ.
ಹೊಸದಾಗಿ ಸೇರ್ಪಡೆಯಾದ ಕ್ಯಾಬಿನೆಟ್ ಮಂತ್ರಿಗಳು – ಜಗನ್ನಾಥ್ ಸರಕಾ, ನಿರಂಜನ್ ಪೂಜಾರಿ, ರಣೇಂದ್ರ ಪ್ರತಾಪ್ ಸ್ವೈನ್, ಪ್ರಮೀಳಾ ಮಲ್ಲಿಕ್, ಉಷಾ ದೇವಿ, ಪ್ರಫುಲ್ಲ ಕುಮಾರ್ ಮಲ್ಲಿಕ್, ಪ್ರತಾಪ್ ಕೇಶರಿ ದೇಬ್, ಅತಾನು ಸಬ್ಯಸಾಚಿ ನಾಯಕ್, ಪ್ರದೀಪ್ ಕುಮಾರ್ ಅಮತ್, ನಬಾ ಕಿಶೋರ್ ದಾಸ್, ಅಶೋಕ್ ಚಂದ್ರ ಪಾಂಡಾ, ತುಕುನಿ ಸಾಹು ಮತ್ತು ರಾಜೇಂದ್ರ ಧೋಲಾಕಿಯಾ ಅವರಾಗಿದ್ದಾರೆ.
ಮೂವರು ಮಹಿಳಾ ಶಾಸಕರಾದ ಪ್ರಮೀಳಾ ಮಲ್ಲಿಕ್, ಉಷಾದೇವಿ ಮತ್ತು ತುಕುನಿ ಸಾಹು ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ.
23 ವರ್ಷಗಳ ಅಧಿಕಾರವನ್ನು ಪೂರ್ಣಗೊಳಿಸಿದ ಪಟ್ನಾಯಕ್ ಅವರು 2024 ರ ಲೋಕಸಭೆ ಮತ್ತು ವಿಧಾನಸಭೆಗೆ ಚುನಾವಣೆಗೆ ಮುನ್ನ ತಮ್ಮ ಸಚಿವಾಲಯಕ್ಕೆ ಹೊಸ ರೂಪವನ್ನು ನೀಡಿದ್ದಾರೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಒಡಿಶಾದ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಲ್ಲಾ ಸಚಿವರು ರಾಜೀನಾಮೆ ನೀದಿರುವುದು ಹೊಸ ರಾಜಕೀಯ ಇತಿಹಾಸವಾಗಿತ್ತು.