Advertisement
ಕಳೆದ ವರ್ಷಕ್ಕೆ ಹೋಲಿಸಿದರೆ ಅಡಿಕೆ ಬೆಲೆ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಪಠೊರಾ 200-210 ಖರೀದಿ ನಡೆಸುತ್ತಿದೆ. ಉಳ್ಳಿಗಡ್ಡೆ 90-110 ರೂ., ಕರಿಕೋಟು 80- 100 ರೂ. ಧಾರಣೆ ಪಡೆಯುತ್ತಿವೆ.
ಕಾಳುಮೆಣಸಿನ ಧಾರಣೆಯಲ್ಲಿ ಯಥಾಸ್ಥಿತಿ ಇದೆ. ಕೆಜಿ.ಗೆ 320 ರೂ. ತನಕ ಖರೀದಿಯಾಗಿದೆ. ಕೆಲ ಸಮಯಗಳ ಧಾರಣೆಯನ್ನೇ ಗಮನಿಸಿದರೆ, ಕಾಳುಮೆಣಸು ದೊಡ್ಡ ಮಟ್ಟಿನ ಧಾರಣೆ ಪಡೆದುಕೊಳ್ಳದೇ ಇರುವುದನ್ನು ಗಮನಿಸಬಹುದು. ಕಳೆದ ಎರಡು ವರ್ಷಗಳಿಂದ ಇಳಿಕೆಯ ಧಾರಣೆ ಮುಂದುವರೆದಿದೆ. ತೆಂಗು ಧಾರಣೆ
ಈ ವಾರ ತೆಂಗಿನ ಕಾಯಿ ಧಾರಣೆಯಲ್ಲಿ ಯಥಾಸ್ಥಿತಿ ಇದೆ. ತೆಂಗಿನಕಾಯಿ ಸಣ್ಣ ಗಾತ್ರ (ಕೆ. ಜಿ.ಗೆ) 20-24 ರೂ., ತೆಂಗಿನಕಾಯಿ ಮಧ್ಯಮ ಗಾತ್ರ (ಕೆ.ಜಿ.ಗೆ) 25-29 ರೂ., ತೆಂಗಿನಕಾಯಿ ದೊಡ್ಡ ಗಾತ್ರ (ಕೆ. ಜಿ. ಗೆ) 30-33 ರೂ. ಗೆ ಖರೀದಿಯಾಗಿದೆ.
Related Articles
ಈ ವಾರ ಕೊಕ್ಕೋ 50-53 ರೂ. ತನಕ ಖರೀದಿಯಾಗಿದೆ. ಕೃಷಿ ಉತ್ಪನ್ನಗಳ ಪೈಕಿ ಸ್ಥಿರತೆ ಸಾಧಿಸಿದ ಏಕೈಕ ಉತ್ಪನ್ನವೆಂದರೆ ಅದು ಕೊಕ್ಕೋ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಕೆಲವು ವರ್ಷಗಳಿಂದ ಕೊಕ್ಕೋ ಬೆಳೆಯುವ ಪ್ರಮಾಣವೂ ಧಾರಣೆಯ ಸ್ಥಿರತೆಯ ಕಾರಣದಿಂದ ಹೆಚ್ಚಾಗಿದೆ. ಆದರೆ ಈಗ ಮಾತ್ರ ಬೆಲೆ ಇಳಿಕೆಯಲ್ಲಿದೆ.
Advertisement
ರಬ್ಬರ್ ಯಥಾಸ್ಥಿತಿರಬ್ಬರ್ ಧಾರಣೆಯು ಈ ವಾರ 130 ರೂ.ಗೆ ಖರೀದಿಯಾಗಿದೆ. ಕರಾವಳಿ ಭಾಗದ ಬೆಳೆಗಾರರ ಪ್ರಮುಖ ವಾಣಿಜ್ಯ ಬೆಳೆ ಎಣಿಸಿಕೊಂಡಿರುವ ರಬ್ಬರ್‌ನ ಕೆಲವು ಸಮಯದ ಹಿಂದೆ ಚೇತೋಹಾರಿ ಏರಿಕೆಯನ್ನು ಕಂಡು ಬೆಳೆಗಾರರಲ್ಲಿ ಖುಷಿಯನ್ನು ತಂದಿತ್ತು. ರಬ್ಬರ್ ಬೆಲೆ ವರ್ಷಗಳ ಬಳಿಕ 150 ರೂ.ಗೆ ತಲುಪಿತ್ತು. ಆದರೆ ಕೆಲವು ವಾರಗಳಿಂದ ಇಳಿಕೆಯ ಹಾದಿಯಲ್ಲಿ ಸಾಗಿತ್ತು. ಆರ್‌ಎಸ್‌ಎಸ್ 4- 130 ರೂ., ಆರ್‌ಎಸ್‌ಎಸ್ 5 – 124 ರೂ.ಗೆ ಖರೀದಿಯಾಗಿದೆ. – ರಾಜು