Advertisement

ಹೊಸ ಅಡಿಕೆ ಧಾರಣೆ 300 ರೂ.ನತ್ತ ಚಿತ್ತ

12:35 AM Aug 26, 2019 | Sriram |

ಸುಳ್ಯ: ಅಡಿಕೆ ಮಾರುಕಟ್ಟೆ ಕೆಲವು ದಿನಗಳಿಂದ ಧಾರಣೆ ಚೇತರಿಕೆ ಕಂಡಿದ್ದು, ಹೊಸ ಅಡಿಕೆ, ಸಿಂಗಲ್‌ ಚೋಲ್‌ ಧಾರಣೆ ಏರಿಕೆಯಾಗಿದೆ.

Advertisement

ಡಬ್ಬಲ್‌ ಚೋಲ್‌ ಧಾರಣೆ ಸ್ಥಿರವಾಗಿದ್ದು, ಹೊಸ ಅಡಿಕೆ ಧಾರಣೆ ಗರಿಷ್ಠ ಏರಿಕೆ ಕಂಡಿದೆ. ಸಿಂಗಲ್‌ ಚೋಲ್‌ ಕೂಡ ಊಧ್ವìಮುಖೀಯಾಗಿದೆ. ಹೊಸ ವರ್ಷದ ಆರಂಭದಲ್ಲಿ ಧಾರಣೆ ಮುಮ್ಮುಖ ಮತ್ತು ಹಿಮ್ಮುಖ ಚಲಿಸಿ ನಿರಾಶೆ ಮೂಡಿಸಿತ್ತು. ಈಗ ಧಾರಣೆ ಚೇತರಿಕೆ ಏರಿಕೆಯತ್ತ ಮುಖ ಮಾಡಿದ್ದು, ಹೊಸ ನಿರೀಕ್ಷೆ ಮೂಡಿಸಿದೆ.

ಏರಿಕೆ ಕಂಡ ಧಾರಣೆ
ಪುತ್ತೂರು ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಕೆಜಿಗೆ 260 ರೂ. ಇದ್ದರೆ, ಹೊರ ಮಾರುಕಟ್ಟೆಯಲ್ಲಿ 268 ರೂ. ತನಕ ಖರೀದಿಯಾಗಿದೆ. ಸಿಂಗಲ್‌ ಚೋಲ್‌ 300ರಿಂದ 305 ರೂ. ತನಕ ಖರೀದಿಸಲಾಗಿದೆ. ಡಬ್ಬಲ್‌ ಚೋಲ್‌ ಧಾರಣೆಯಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬಂದಿಲ್ಲ ಎನ್ನುತ್ತಾರೆ ಅಡಿಕೆ ಬೆಳೆಗಾರ ಗುಡ್ಡಪ್ಪ ಸುಳ್ಯ.

ಇದೇ ಎಪ್ರಿಲ್‌ನಲ್ಲಿ ಹೊಸ ಅಡಿಕೆ 230ರಿಂದ 235 ರೂ. ತನಕ ಖರೀದಿಯಾಗಿತ್ತು. ಸಿಂಗಲ್‌ ಚೋಲ್‌ 275ರಿಂದ 278 ರೂ.ಗಳಲ್ಲಿ ಖರೀದಿಸಲಾಗಿತ್ತು. ಮೂರು ತಿಂಗಳಲ್ಲಿ ಎರಡೂ ವರ್ಗಗಳ ಅಡಿಕೆಯಲ್ಲಿ 30 ರೂ.ನಷ್ಟು ಹೆಚ್ಚಳ ಕಂಡುಬಂದಿದೆ. ಅಡಿಕೆ ಖರೀದಿ ಸಹಕಾರ ಸಂಸ್ಥೆಗಳಿಗೆ ಹೋಲಿಸಿದರೆ, ಹೊರ ಮಾರುಕಟ್ಟೆಯಲ್ಲೇ ಧಾರಣೆ ಹೆಚ್ಚಾಗಿದೆ ಎನ್ನುತ್ತಾರೆ ಕೃಷಿಕ ಇಸ್ಮಾಯಿಲ್‌ ಬಿ.

ಮಂಗಳೂರು ಅಡಿಕೆ ಮಾರುಕಟ್ಟೆ ಲೆಕ್ಕಾಚಾರದ ಪ್ರಕಾರ ಕೆಲವೇ ದಿನಗಳಲ್ಲಿ ಹೊಸ ಅಡಿಕೆ ಧಾರಣೆ 300 ರೂ. ಗಡಿ ದಾಟುವ ಸಾಧ್ಯತೆಯಿದೆ. ಇದರ ಸುಳಿವು ಪಡೆದಿರುವ ಬೆಳೆಗಾರರು ಮಾರುಕಟ್ಟೆಗೆ ಹೊಸ ಅಡಿಕೆ ಪೂರೈಕೆಯನ್ನು ನಿಯಂತ್ರಿಸುತ್ತಿದ್ದು, ಏರಿಕೆ ಅವಲಂಬಿಸಿ ಮಾರಾಟ ತಂತ್ರ ಅನುಸರಿಸುತ್ತಿದ್ದಾರೆ.

Advertisement

ಹಳೆ ಅಡಿಕೆಯೋ? ಹೊಸ ಅಡಿಕೆಯೋ?
ಚೌತಿ ಬಳಿಕ ಆಯಾ ವರ್ಷದ ಹೊಸ ಅಡಿಕೆಯನ್ನುಮಾರುಕಟ್ಟೆಯಲ್ಲಿ ಹಳೆ ಅಡಿಕೆ ಎಂದು ಖರೀದಿಸುವ ಪದ್ಧತಿ ಹಿಂದಿನಿಂದಲೇ ಇದೆ. ಇತ್ತೀಚಿನ ವರ್ಷ ಗಳಲ್ಲಿ ಇದು ಜನವರಿಗೆ ವಿಸ್ತರಣೆಗೊಂಡಿದೆ.

ಇದರಿಂದ ಚೌತಿ ಕಳೆದು ಮೂರ್ನಾಲ್ಕು ತಿಂಗಳ ಕಾಲ ಹೊಸ ಅಡಿಕೆಯಾಗಿಯೇ ಮಾರಾಟ ಮಾಡಬೇಕಾದ ಸ್ಥಿತಿ ಬೆಳೆಗಾರನದ್ದು. ಆದರೆ ಇದನ್ನೇ ಬಳಿಕ ವ್ಯಾಪಾರಿ ಗಳು ಹಳೆ ಅಡಿಕೆಯಾಗಿ ಮಾರಾಟ ಮಾಡಿ ಲಾಭ ಗಳಿಸುವುದೂ ಇದೆ. ಇದರಿಂದ ಬೆಳೆಗಾರನಿಗೆ ಈಗಿನ ಮಾರುಕಟ್ಟೆಯ ಲೆಕ್ಕಾಚಾರದಲ್ಲಿ ಕೆಜಿಗೆ 40ರಿಂದ 50ರಷ್ಟು ರೂ. ನಷ್ಟ ಆಗುತ್ತದೆ ಎನ್ನುತ್ತಾರೆ ಬೆಳೆಗಾರರು.

ಕಾನೂನುಬಾಹಿರವಾಗಿ ಆಮದು ಆಗುತ್ತಿದ್ದ ಅಡಿಕೆ ಯನ್ನು ನಿಯಂತ್ರಿಸಿ ರು ವುದು, ಉತ್ತಮ ದರ್ಜೆಯ ಅಡಿಕೆ ಮಾರುಕಟ್ಟೆಗೆ ಪೂರೈಕೆ ಆಗುತ್ತಿರುವುದು, ಕಳೆದ ವರ್ಷ ಕೊಳೆರೋಗದಿಂದ ಉತ್ಪಾದನೆ ಕುಸಿತ ಕಂಡು ಬೇಡಿಕೆಗೆ ತಕ್ಕಷ್ಟು ಅಡಿಕೆ ಮಾರುಕಟ್ಟೆಗೆ ಪೂರೈಕೆ ಆಗದಿರುವುದು ಪ್ರಸ್ತುತ ಅಡಿಕೆ ಧಾರಣೆ ಏರಿಕೆಗೆ ಕಾರಣ.
– ಸತೀಶ್ಚಂದ್ರ ಎಸ್‌. ಆರ್‌.,
ಅಧ್ಯಕ್ಷರು, ಕ್ಯಾಂಪ್ಕೋ

– ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next