Advertisement

ಹೊಸ ನಂಬರ್‌ ಪ್ಲೇಟ್ ಕಡ್ಡಾಯ

01:16 AM Jul 04, 2019 | mahesh |

ನವದೆಹಲಿ: ಷೋರೂಂಗಳಿಂದ ಖರೀದಿಸಲ್ಪಡುವ ಯಾವುದೇ ಹೊಸ ವಾಹನಗಳಿಗೆ ಹೈ ಸೆಕ್ಯೂರಿಟಿ ನಂಬರ್‌ ಪ್ಲೇಟ್ಗಳನ್ನು (ಎಚ್ಎಸ್‌ಆರ್‌ಪಿ) ಅಳವಡಿಸದಿದ್ದಲ್ಲಿ ಹಾಗೂ ವಾಹನದ ಮಾಹಿತಿಗಳನ್ನು ರಾಷ್ಟ್ರವ್ಯಾಪಿ ಜಾಲವಾದ ವಾಹನ್‌ ಡೇಟಾಬೇಸ್‌ನಲ್ಲಿ ಸೇರ್ಪಡೆಗೊಳಿಸದಿದ್ದಲ್ಲಿ ಅಂಥ ವಾಹನಗಳ ನೋಂದಾವಣೆಗೆ ಅವಕಾಶವಿಲ್ಲ ಎಂದು ಕೇಂದ್ರ ಸಾರಿಗೆ ಇಲಾಖೆ ಕಟ್ಟುನಿಟ್ಟಾಗಿ ಹೇಳಿದೆ.

Advertisement

ಏಪ್ರಿಲ್ನಿಂದ ಜಾರಿಯಾಗಿರುವ ಎಚ್ಎಸ್‌ಆರ್‌ಪಿ ಹಾಗೂ ವಾಹನ್‌ ಡೇಟಾಬೇಸ್‌ಗೆ ಕಡ್ಡಾಯ ಮಾಹಿತಿ ಸೇರ್ಪಡೆ ನಿಯಮಗಳನ್ನು ಕೆಲವು ವಾಹನ ತಯಾರಕಾ ಕಂಪನಿಗಳು ಹಾಗೂ ಡೀಲರ್‌ಗಳು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುತ್ತಿದ್ದಾರೆಂದು ಸಾರಿಗೆ ಇಲಾಖೆಗೆ ಕೆಲವು ದೂರುಗಳು ಬಂದಿದ್ದು, ಈ ಹಿನ್ನೆಲೆಯಲ್ಲಿ ಇಲಾಖೆ ಈ ಸ್ಪಷ್ಟನೆ ನೀಡಿದೆ. ಎಚ್ಎಸ್‌ಆರ್‌ಪಿಗಳನ್ನು ವಾಹನ ಉತ್ಪಾದಕ ಕಂಪನಿಗಳು ನೀಡಬೇಕೆಂದೂ ಇಲಾಖೆ ಸ್ಪಷ್ಟವಾಗಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next