ಬೈಲಹೊಂಗಲ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ (ಎನ್ ಇಪಿ) ಶಿಕ್ಷಣದಲ್ಲಿ ಮೂಲಭೂತ ಬದಲಾವಣೆಗಳಾಗಿ ಮಕ್ಕಳ ಕಲಿಕೆಗೆ ಪೂರಕವಾಗಲಿದ್ದು, ಜ್ಞಾನಾರ್ಜನೆಗೆ ಅನುಕೂಲವಾಗಲಿದೆ ಎಂದು ಶಿಕ್ಷಣ ತಜ್ಞ, ಕಲ್ಪವೃಕ್ಷ ಮಾಡೆಲ್ ಶಾಲೆಯ ಮಾರ್ಗದರ್ಶಕ ಡಾ| ಗುರುರಾಜ ಕರ್ಜಗಿ ಹೇಳಿದರು.
ಅವರು ಪಟ್ಟಣದ ಎ.ವಿ.ಢಮ್ಮಣ್ಣಗಿ ವಿಜನ್ ಪೌಂಡೇಷನ್‌ದ ಕಲ್ಪವೃಕ್ಷ ಮಾಡೆಲ್ ಶಾಲೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನ ಕುರಿತು ಪಾಲಕರೊಂದಿಗೆ ಸಂವಾದ ನಡೆಸಿ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಿಂದ ಗ್ರಾಮೀಣ ಮತ್ತು ನಗರ ಒಂದೆ ಸಮನವಾದ ಶಿಕ್ಷಣ ಹೊಂದಲಿದೆ. ಮೊದಲಿದ್ದ ಶಿಸ್ತನ್ನು ಈಗ ಮತ್ತೆ ಅದೇ ರೀತಿಗೆ ತರಲಾಗುತ್ತಿದೆ. ಈ ಶಿಕ್ಷಣ ನೀತಿ ಮಕ್ಕಳಿಗೆ ಪ್ರಯೋಜನವಾಗಲಿದೆ.
ಶಿಕ್ಷಣದ ವಿವಿದ ಘಟಕಗಳು ಎದುರಿಸುತ್ತಿರುವ ಸವಾಲುಗಳನ್ನು ಸಮರ್ಥವಾಗಿ ಮೆಟ್ಟಿ ನಿಲ್ಲುವಲ್ಲಿ ಮುಂದಿನ ಎರಡು ದಶಕಗಳ ಶೆ„ಕ್ಷಣಿಕ ಕ್ಷೇತ್ರಗಳ ಅವಕಾಶಗಳನ್ನು ಗಮನದಲ್ಲಿ ಇಟ್ಟುಕೊಂಡು ಸಮಗ್ರವಾದ ನೀತಿಗೆ ಸರಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಕಲ್ಪವೃಕ್ಷ ಶಾಲೆ ಸಿಬಿಎಸ್‌ಸಿ 11 ನೇ ತರಗತಿ ಪ್ರಾರಂಭಿಸಿ ನೂತನ ಶಿಕ್ಷಣ ನೀತಿ ಅಳವಡಿಸಿಕೊಂಡಿದೆ ಎಂದರು. ಮಕ್ಕಳಲ್ಲಿ ಅಗಾಧ ಪ್ರತಿಭೆ ಇರುತ್ತದೆ. ಪ್ರತಿಯೊಬ್ಬ ಮಗುವಿನಲ್ಲೂ ಇರುವ ವಿವಿಧ ಪ್ರತಿಭೆಗಳನ್ನು ಅರಗಿಸಿಕೊಂಡು ಶಿಕ್ಷಕರು ಪಾಠ ಮಾಡಬೇಕು.
ಮಕ್ಕಳನ್ನು ಸಮಾನತೆಯಿಂದ ಕಾಣುವ ಮನೋಭಾವನೆ ಶಿಕ್ಷಕರಲ್ಲಿ ಇರಲೇಬೇಕು. ಅಂದಾಗ ಮಾತ್ರ ಅವರು ಉತ್ತಮ ಶಿಕ್ಷಕರಾಗಲು ಯೋಗ್ಯರು ಎಂದರು. ಪ್ರಾಚಾರ್ಯ ಹಣಮೇಶ ದುಡ್ಯಾಳ ಮಾತನಾಡಿದರು.
ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕರಾದ ಹರ್ಷಾ ಬಾಬಣ್ಣ ಢಮ್ಮಣಗಿ, ಡಿ.ಆರ್. ಜೋಶಿ, ಆಡಳಿತಾಧಿ ಕಾರಿ ರಾಜಶೇಖರ ಕೋತಂಬ್ರಿ ಹಾಗೂ ಪಾಲಕರು ಇದ್ದರು. ವಿದ್ಯಾರ್ಥಿ ಭರತ ಪರವಿನಾಯ್ಕರ ಸ್ವಾಗತಿಸಿದರು. ವಿನಯ ಹಾದಿಮನಿ, ಭೂಮಿಕಾ ಬಡಿಗೇರ ನಿರೂಪಿಸಿದರು. ಮದನ ಸಿದ್ನಾಳ ವಂದಿಸಿದರು.