Advertisement

ದಿಯಾ ಹುಡುಗನ ಹೊಸ ಸಿನ್ಮಾ

10:00 AM Mar 28, 2020 | Suhan S |

ಇತ್ತೀಚೆಗೆ ಬಂದ “ದಿಯಾ’ ಸಿನಿಮಾ ನೋಡಿದವರಿಗೆ ಆದಿ ಎಂಬ ಪಾತ್ರ ಮಾಡಿದ್ದ ಲವಲವಿಕೆಯ ಹುಡುಗ ಗೊತ್ತಿರುತ್ತಾನೆ. ಎಲ್ಲರೂ ಆ ಹುಡುಗನ ಪಾತ್ರವನ್ನು ಮೆಚ್ಚಿಕೊಂಡಿದ್ದರು.

Advertisement

ಹೆಸರು ಪೃಥ್ವಿ ಅಂಬರ್‌. “ದಿಯಾ’ ಸಿನಿಮಾ ಎಲ್ಲರಿಂದಲೂ ಪ್ರಶಂಸೆ ಪಡೆದಿತ್ತು. ಆ ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದ ಪೃಥ್ವಿ ಅಂಬರ್‌ ಕೂಡ ಮೆಚ್ಚುಗೆಗೆ ಪಾತ್ರವಾಗಿದ್ದರು. ಈಗ ಅವರು ಹೊಸ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಆ ಚಿತ್ರಕ್ಕೆ “ಫಾರ್‌ ರಿಜಿಸ್ಟ್ರೇಷನ್‌’ ಎಂಬ ಶೀರ್ಷಿಕೆ ಇಡಲಾಗಿದೆ. ಇನ್ನೂ ನೋಂದಣಿ ಆಗದ ಬೈಕ್‌ ಅಥವಾ ಕಾರುಗಳ ಹಿಂದೆ, ಮುಂದೆ “ಫಾರ್‌ ರಿಜಿಸ್ಟ್ರೇಷನ್‌’ ಎಂಬ ಬೋರ್ಡ್‌ ಇದ್ದೇ ಇರುತ್ತೆ. ಅದೇ ಹೆಸರು ಈಗ ಚಿತ್ರಕ್ಕೂ ಇಡಲಾಗಿದೆ.

ಅಂದಹಾಗೆ, ನಿಶ್ಚಲ್‌ ಫಿಲಂಸ್‌ ಬ್ಯಾನರ್‌ನಲ್ಲಿ ನವೀನ್‌ ರಾವ್‌ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ದ್ವಾರಕನಾಥ್‌ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ನಿರ್ದೇಶಕ ದ್ವಾರಕನಾಥ್‌ ಅವರು, ಐದು ಕಿರುಚಿತ್ರಗಳನ್ನು ನಿರ್ದೇಶಿಸಿದ್ದರು. ಅದೇ ಅನುಭವದ ಮೇಲೆ ಈಗ ಈ ಚಿತ್ರಕ್ಕೆ ಆ್ಯಕ್ಷನ್‌-ಕಟ್‌ ಹೇಳುತ್ತಿದ್ದಾರೆ. ಇನ್ನು, ಕಥೆಯ ಬಗ್ಗೆ ಹೇಳುವುದಾದರೆ, ಇದೊಂದು ರೊಮ್ಯಾಂಟಿಕ ಲವ್‌ಸ್ಟೋರಿ ಹೊಂದಿರುವ ಸಿನಿಮಾ. ಜೊತೆಗೆ ಕಾಮಿಡಿ ಕೂಡ ಇರಲಿದೆ.

ಸದ್ಯಕ್ಕೆ ಪೃಥ್ವಿ ಅಂಬರ್‌ ಹೀರೋ ಆಗಿದ್ದಾರೆ. ನಾಯಕಿಯ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. ಚಿತ್ರದಲ್ಲಿ ತಬಲಾನಾಣಿ ಕೂಡ ನಟಿಸುತ್ತಿದ್ದಾರೆ. ಚಿತ್ರಕ್ಕೆ ವಿವೇಕ್‌ ಕೆ.ಎಸ್‌. ಅವರ ಛಾಯಾಗ್ರಹಣವಿದೆ. ಆರ್‌.ಹರೀಶ್‌ ಅವರ ಸಂಗೀತ ನಿರ್ದೇಶನವಿದೆ. ಮೇನಲ್ಲಿ ಚಿತ್ರಕ್ಕೆ ಚಾಲನೆ ಸಿಗಲಿದ್ದು, ಎರಡು ಹಂತದ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next