Advertisement
ಸ್ಮಾರ್ಟ್ ಫೋನ್ ಯುಗ ಆರಂಭವಾದ ಬಳಿಕ ಅಂಗೈಯಲ್ಲೇ ಜಗತ್ತು ಸೃಷ್ಟಿಯಾಗಿರುವುದಂತೂ ದಿಟ. ಕೇವಲ ಮಾತಿಗಷ್ಟೇ ಸೀಮಿತವಾಗಿದ್ದ ಮೊಬೈಲ್ ಫೋನ್‌ಗಳು ಎಲ್ಲೆಂದರಲ್ಲಿ ಜತೆಗೆ ಒಯ್ಯುವುದರೊಂದಿಗೆ ಇಡೀ ಜಗತ್ತಿನ ಆಗುಹೋಗು, ಇತಿಹಾಸ, ಭವಿಷ್ಯದ ಬಗ್ಗೆ ತಿಳಿದುಕೊಳ್ಳಲೂ ವೇದಿಕೆ ನಿರ್ಮಿಸಿಕೊಟ್ಟಿತು. ಇಂತಹ ಸ್ಮಾರ್ಟ್‌ಫೋನ್‌ಗಳು ಕೇವಲ ಅಸ್ತಿತ್ವಕ್ಕೆ ಬಂದು ಸುಮ್ಮನೇ ನಿಂತಿಲ್ಲ. ದಿನಕ್ಕೊಂದು ಹೊಸದರಂತೆ, ಹೆಚ್ಚುವರಿಫೀಚರ್ಸ್ ಗಳೊಂದಿಗೆ ಮಾರುಕಟ್ಟೆಗೆ ಆಗಮಿಸುತ್ತಲೇ ಇವೆ. ವಿಶೇಷ ದಿನಗಳಂದು, ಹಬ್ಬಗಳ ಸಂದರ್ಭದಲ್ಲಿ ಹೊಸ ಸ್ಮಾರ್ಟ್ ಫೋನ್ ಗಳು, ಹೊಸತಾದ ಉಪಕರಣ ಗಳೊಂದಿಗೆ, ಹಿಂದಿಗಿಂತಲೂ ಹೆಚ್ಚು ಸ್ಮಾರ್ಟ್ ಆಗಿ ಗ್ರಾಹಕರ ಕೈ ಸೇರುವುದು ನಡೆಯುತ್ತಲೇ ಇದೆ.
ಇನ್ನೇನು ದೀಪಾವಳಿ ಹಬ್ಬಕ್ಕಿರುವುದು ಎರಡು ವಾರ. ಎಲ್ಲ ಹಬ್ಬಗಳಿಗಿಂತಲೂ ದೀಪಾವಳಿಗೆ ಮಹತ್ವ ಹೆಚ್ಚು. ಹೀಗಿರುವಾಗ ಮೊಬೈಲ್ ಫೋನ್ ತಯಾರಕರೂ ಸ್ಮಾರ್ಟ್ ಫೋನ್‌ಗಳಲ್ಲಿ ಒಂದಷ್ಟು ಹೊಸ ಫಿಚರ್ ಗಳೊಂದಿಗೆ ನೂತನ ಮಾದರಿಯ ಸ್ಮಾರ್ಟ್ ಫೋನ್‌ಗಳನ್ನು ಜನರ ಕೈಗಿಡಲು ಸಿದ್ಧವಾಗಿದ್ದಾರೆ. ದೀಪಾವಳಿ ಸಂದರ್ಭದಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗುವ ಮೊಬೈಲ್ ಫೋನ್‌ಗಳಿಗಾಗಿ ಗ್ರಾಹಕರೂ ಕುತೂಹಲದಿಂದ ಕಾಯತೊಡಗಿದ್ದಾರೆ. ಸೆಲ್ಫಿ ಕೆಮರಾಕ್ಕೆ ಮಹತ್ವ
ಮುಖ್ಯವಾಗಿ ಮೊಬೈಲ್ ಖರೀದಿಗೂ ಮುನ್ನ ಜನ ನೋಡುವುದು ಆ ಮೊಬೈಲ್‌ನಲ್ಲಿ ಕೆಮರಾ ಹೇಗಿದೆ ಎಂಬುದಾಗಿ. ಸೆಲ್ಫಿ ಯುಗದಲ್ಲಿ ಸೆಲ್ಫಿ ಕ್ಲಿಕ್ಕಿಸುವುದಕ್ಕೆ ಆ ಮೊಬೈಲ್ ಪೂರಕವಾಗಿದೆಯೇ ಮತ್ತು ಅದರ ಕೆಮರಾ ಕ್ಲಾರಿಟಿ ಹೇಗಿದೆ ಎಂಬುದೇ ಜನರ ಕುತೂಹಲ ಮತ್ತು ಮೊಬೈಲ್ ಕೊಳ್ಳುವುದಕ್ಕೆ ಮುಖ್ಯ ಕಾರಣವಾಗುತ್ತದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿಯೇ ಮೊಬೈಲ್ ಕಂಪೆನಿಗಳು ಉತ್ತಮ ಗುಣಮಟ್ಟದ ಕೆಮರಾ ಸೌಲಭ್ಯವಿರುವ ಆ್ಯಂಡ್ರಾಯ್ಡ ಸ್ಮಾರ್ಟ್ ಫೋನ್‌ಗಳನ್ನು ಮಾರುಕಟ್ಟೆಗೆ ತರುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ವಿವೋ ಮತ್ತು ರೆಡ್ ಮೀ ಕಂಪೆನಿಗಳ ಹೊಸ ಮಾಡೆಲ್ ಮೊಬೈಲ್ ಫೋನ್‌ಗಳ ಕೊಳ್ಳುವಿಕೆಗೆ ಜನ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ ಎನ್ನುತ್ತಾರೆ ನಗರದ ಮೊಬೈಲ್ ಸಂಸ್ಥೆಯೊಂದರ ಸಿಬಂದಿ.
Related Articles
ವಿವೋ ವಿ11 ಪ್ರೊ ಮೊಬೈಲ್ 6 ಜಿಬಿ ರ್ಯಾಮ್ ಒಳಗೊಂಡಿದ್ದು, 64 ಜಿಬಿ ಸ್ಟೋರೇಜ್ ಸಾಮರ್ಥ್ಯವನ್ನು ಒಳಗೊಂಡಿದೆ. ಇದರಿಂದಾಗಿ ಫೋಟೋ, ವೀಡಿಯೋ ಸಹಿತ ಅಗತ್ಯ ವಿಷಯಗಳನ್ನು ಎಷ್ಟು ಬೇಕಾದರೂ ಇದರಲ್ಲಿ ಸಂಗ್ರಹಿಸಿ ಇರಿಸಿಕೊಳ್ಳಬಹುದು. ಅಲ್ಲದೆ ರೇರ್ ಡ್ಯುಯೆಲ್ ಕೆಮರಾ, ಫ್ರೆಂಟ್ 25 ಮೆಗಾ ಫಿಕ್ಸೆಲ್ ಸೆಲ್ಫಿ ಕೆಮರಾವನ್ನೂ ಇದು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್‌ನ ಇನ್ನೊಂದು ವೈಶಿಷ್ಟ್ಯವೆಂದರೆ ಫೋನ್ ಡಿಸ್‌ಪ್ಲೇನಲ್ಲೇ ಫಿಂಗರ್ ಪ್ರಿಂಟ್ ಅನ್ನು ಹೊಂದಿರುವುದು. ಸುಮಾರು 25,990 ರೂ. ಗಳಷ್ಟು ಬೆಲೆಯುಳ್ಳ ವಿವೋ ಕೆಮರಾಕ್ಕೆ ಉತ್ತಮ ಬೇಡಿಕೆಯೂ ಇದೆ.
Advertisement
ಇನ್ನು ದೀಪಾವಳಿ ಕೊಡುಗೆಯಾಗಿ ರೆಡ್‌ಮೀ- ಎ2, 6 ಪ್ರೊ ಗಳು ಬಿಡುಗಡೆಗೊಂಡಿದ್ದು, ಕ್ರಮವಾಗಿ 3ಜಿಬಿ, 4ಜಿಬಿ ರ್ಯಾಮ್ ಅನ್ನು ಹೊಂದಿದೆ. ಡುಯೆಲ್ ಕೆಮರಾದೊಂದಿಗೆ ಎರಡು ದಿನಗಳ ಬ್ಯಾಟರಿ ಸಾಮರ್ಥ್ಯ ಇದರಲ್ಲಿದೆ. 64 ಜಿಬಿ ಸ್ಟೋರೇಜ್ ಸಾಮರ್ಥ್ಯವನ್ನೂ ಇದು ಹೊಂದಿದ್ದು, ರ್ಯಾರ್ ಡ್ಯುಯೆಲ್ ಕೆ ಮರಾ ಇದರಲ್ಲಿದೆ. ಎರಡೂ ಮೊಬೈಲ್ ಫೋನ್‌ಗಳು ಕ್ರಮವಾಗಿ 11,490 ರೂ. ಮತ್ತು 13,490 ರೂ. ದರವನ್ನು ಹೊಂದಿದೆ.
ಬರಲಿದೆ ಹೊಸ ಹೊಸ ಸ್ಮಾರ್ಟ್ಫೋನ್ಮಾರುಕಟ್ಟೆಗೆ ಯಾವುದೇ ಹೊಸ ಮಾದರಿಯ ಮೊಬೈಲ್ ಫೋನ್‌ಗಳು ಬಿಡುಗಡೆಗೊಂಡರೂ, ಎಷ್ಟು ಹಣ ಕೊಟ್ಟಾದರೂ ಖರೀದಿಸಿ ನೋಡುವ ಖುಷಿ ಮೊಬೈಲ್ ಪ್ರಿಯರದ್ದು. ಹಾಗಾಗಿ ಈಗ ಬಿಡುಗಡೆಗೊಂಡಿರುವ ಹೊಸ ಮೊಬೈಲ್ ಫೋನ್‌ಗಳ ಬಗ್ಗೆಯೂ ಹಾಗೂ ಇನ್ನು ಬಿಡುಗಡೆಗೊಳ್ಳಲಿರುವ ಫೋನ್‌ಗಳ ಬಗ್ಗೆಯೂ ಕುತೂಹಲವಂತೂ ಇದ್ದೇ ಇರುತ್ತದೆ. ರ್ಯಾಮ್ ಹೆಚ್ಚಿಸಿಕೊಂಡು, ಕೆಮರಾ ಗುಣಮಟ್ಟವನ್ನು ವೃದ್ಧಿಸಿಕೊಂಡು, ಡಿಸ್‌ಪ್ಲೇ, ಬ್ಯಾಟರಿ ಸಾಮರ್ಥ್ಯ ಬದಲಾಯಿಸಿಕೊಂಡು ಇನ್ನಿತರ ವಿಶೇಷ ಫಿಚ ರ್ ಗ ಳೊಂದಿಗೆ ಮೋಟೋ ಎಕ್ಸ್4, ಮೋಟೋ ಜಿ7, ಹಾನರ್ 9, ಎಚ್‌ಟಿಸಿ ಯು 12 ಪ್ಲಸ್, ಸೋನಿ ಎಕ್ಸ್‌ಪೀರಿಯಾ ಎಕ್ಸ್ ಝಡ್2, ನೋಕಿಯಾ 81110ಜಿ, ಕ್ಸಿಯೋಮಿ ಎಂಐ ಎಂಐಎಸ್ 2ಎಸ್, ಕ್ಸಿಯೋಮಿ ಮಿ8 ಯೂತ್, ಹ್ಯಾವೀ ಮೇಟ್
20, ಎಲ್‌ಜಿ ವಿ40 ತಿಂಕ್, ನೋಕಿಯಾ 7.1, ಒನ್ ಪ್ಲಸ್ 6ಟಿ, ಆ್ಯಪಲ್ ಐಫೋನ್ ಎಸ ಇ2, ಲೆನೋವೋ ಝಡ್5 ಸಹಿತ ಇನ್ನೂ ಹಲವಾರು ಹೊಸ ಹೊಸ ಮೊಬೈಲ್‌ಗಳು ದೀಪಾವಳಿ ಹಬ್ಬದ ಸಂಭ್ರಮ ಹೆಚ್ಚಿ ಸಲು ಬಿಡುಗಡೆಗೆ ಕಾಯುತ್ತಿದೆ. ಧನ್ಯಾ ಬಾಳೆಕಜೆ