Advertisement

ಕಾಮಿಡಿ ಧರ್ಮನ ಹೊಸ ಲುಕ್

04:55 AM Jun 04, 2020 | Lakshmi GovindaRaj |

ಡಿ. ಸತ್ಯ ಪ್ರಕಾಶ್ ನಿರ್ದೇಶನದ ರಾಮ ರಾಮ ರೇ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ನಟ ಧರ್ಮಣ್ಣ ಕಡೂರ್ ನಂತರ ವಿಭಿನ್ನ ಹಾಸ್ಯ ಪಾತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಹಾಸ್ಯನಟರಾಗಿ ಗುರುತಿಸಿಕೊಂಡವರು. ಇತ್ತೀಚೆಗೆ ವಿಶೇಷವಾಗಿ ವಿನ್ಯಾಸಗೊಳಿಸಿದ ಬೈಕ್‍ನಲ್ಲಿ ಧರ್ಮಣ್ಣ ಕಡೂರ್ ಕುಳಿತು ತಿರುಗಾಡುವ ಕಿರು ಪ್ರೋಮೋ ಸಾಕಷ್ಟು ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

Advertisement

ಈ ಮೂಲಕ ಧರ್ಮಣ್ಣ ತಮ್ಮ ಮುಂದಿನ ಚಿತ್ರ ಐ ಆಮ್ ಪ್ರೆಗ್ನೆಂಟ್‍ನಲ್ಲಿನ ಪಾತ್ರದ ಪರಿಚಯ ಬಹಿರಂಗಪಡಿಸಿದ್ದಾರೆ. ಇನ್ನು ಈ ಚಿತ್ರದಲ್ಲಿ ಬೈಕು ಕೂಡ ಪ್ರಮುಖ ಪಾತ್ರವಹಿಸಲಿದೆಯಂತೆ. ಈ ಚಿತ್ರವನ್ನು ಸಂಜಯ್ ಎನ್ ಟಿ ನಿರ್ದೇಶನ ಮಾಡುತ್ತಿದ್ದು, ಅನು ಸಿನೆಮಾಸ್ ಬ್ಯಾನರ್ ಅಡಿಯಲ್ಲಿ ಅನಿತಾ ಸಂಜಯ್ ನಿರ್ಮಿಸಲಿದ್ದಾರೆ. ಐ ಆಮ್ ಪ್ರೆಗ್ನೆಂಟ್ ಚಿತ್ರ ಹಾಸ್ಯ ಮನರಂಜನೆ. ಇದರಲ್ಲಿ ಬೆಂಕಿಪಟ್ಟಣ ನಟ ಪ್ರತಾಪ್ ನಾರಾಯಣ್ ಮುಖ್ಯ ಪಾತ್ರದಲ್ಲಿದ್ದರೆ, ಅರ್ಪಿತಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡುವ ಧರ್ಮಣ್ಣ ಕಡೂರ್, ನಾನು ಪಾತ್ರವರ್ಗದ ಭಾಗವಾಗಿರುವ ಚೈತ್ರ ಕೊಟೂರ್ ಗೆ ನಾನು ಜೋಡಿಯಾಗಿದ್ದೇನೆ. ಈ ಚಿತ್ರದಲ್ಲಿ ಬೈಕ್‍ಗೆ ಉತ್ತಮ ಸ್ಥಾನವಿದೆ. ಬೈಕು ಬದಲಾದ ಬಜಾಜ್ ಚೇತಕ್ ಆಗಿದೆ. ಇದರ ವಿನ್ಯಾಸಕ್ಕಾಗಿ 2 ಲಕ್ಷ ವೆಚ್ಚವಾಗಿದೆ ಎಂದಿದ್ದಾರೆ. ಸದ್ಯ ಈ ಚಿತ್ರ ಈಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಐ ಆಮ್ ಪ್ರೆಗ್ನೆಂಟ್ ಚಿತ್ರಕ್ಕೆ ಎಸ್ ಪ್ರದೀಪ್ ವರ್ಮಾ ಸಂಗೀತ ಸಂಯೋಜಿಸಿದ್ದಾರೆ. ಪುಗುಲ್ ಪಾಂಡ್ಯನ್ ಅವರ ಛಾಯಾಗ್ರಹಣವಿದೆ. ಈ ಚಿತ್ರದಲ್ಲಿ ಪ್ರಿಯಾಂಕಾ, ಶ್ರೀಧರ್ ಮತ್ತು ಮಾತಾ ಕೊಪ್ಪಳ ಇತರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next