Advertisement
ಎಲ್ಲೆಡೆ ಜುಮ್ಮೆನಿಸುವ ಚಳಿ. ಇಂಥ ಸಂದರ್ಭದಲ್ಲಿ ಹೆಚ್ಚು ತಲೆ ನೋವು ಎನಿಸುವುದು ಎರಡೇ ಸಂಗತಿಗಳಿಗೆ. ಒಂದು ಚರ್ಮದ ಆರೋಗ್ಯ ಮತ್ತು ಧರಿಸುವ ದಿರಿಸುಗಳ ಆರೋಗ್ಯ. ಚಳಿಗಾಲದಲ್ಲಿ ಧರಿಸುವ ದಿರಿಸುಗಳು ಹೇಗಿದ್ದರೆ ಚೆನ್ನ ಮತ್ತು ಸೂಕ್ತ ಎಂಬುದರ ಜತೆಗೆ ಚರ್ಮದ ಆರೋಗ್ಯವನ್ನೂ ಕಾಪಾಡಬಲ್ಲವೂ ಎಂಬುದೂ ಮುಖ್ಯವಾದುದು. ಚಳಿಗಾಲದಲ್ಲಿ ಬೆಚ್ಚಗಿನ ಬಟ್ಟೆ ಧರಿಸಿ ಎನ್ನುವುದು ಸಹಜವಾಗಿ ಸಿಗುವ ಸಾಮಾನ್ಯ ಸಲಹೆ. ಇಂದಿನ ಟ್ರೆಂಡ್ ಯುಗದಲ್ಲಿ ಬರೀ ದಿರಿಸು ಎಂದರೆ ಸಾಕೇ? ಅದರ ಗುಣಮಟ್ಟ, ಬಣ್ಣ, ಡಿಸೈನ್ ಎಲ್ಲವೂ ಕಾಲಕ್ಕೆ ತಕ್ಕಂತೆ ಒಪ್ಪಬೇಕಲ್ಲ. ಇಲ್ಲದೆ ಇದ್ದರೆ ನೀನು ಟ್ರೆಂಡ್‌ಗೆ ಹೊಂದಿಕೊಂಡಿಲ್ಲ ಎಂದು ತಿರಸ್ಕರಿಸುವ, ಮೂಗು ಮುರಿಯುವ ಸ್ನೇಹಿತರ ಗುಂಪು ಇದ್ದೇ ಇರುತ್ತದೆ.ಹಾಗಾಗಿ ಮೈ ಕೊರೆಯುವ ಚಳಿಯಲ್ಲೂ ಈ ಕ್ಷಣ(ಟ್ರೆಂಡ್)ಕ್ಕೆ ಹೊಂದಿ ಕೊಂಡಂತೆ ಕಾಣಿಸಲು ಎಷ್ಟೆಲ್ಲ ಯೋಚಿಸಬೇಕು.
ಚಳಿಗಾಲದಲ್ಲಿ ನಮ್ಮ ಉತ್ತಮ ಸ್ನೇಹಿತರಲ್ಲಿ ಸ್ಕಾಫ್ì ಕೂಡ ಒಂದು. ವಿವಿಧ ಬಗೆಯ ವಿನ್ಯಾಸಗಳ ಸ್ಕಾಫ್ì ಗಳು ಇಂದು ಲಭ್ಯ. ಆದರೆ ಚಳಿಗಾಲದಲ್ಲಿ ಬ್ಲಾಂಕೆಟ್ ಸ್ಕಾಫ್ìನ ಆಯ್ಕೆ ಹೆಚ್ಚು ಸೂಕ್ತ. ಅನಾ ರ್ಕಲಿ ಡ್ರೆಸ್, ಚೂಡಿದಾರ ಉಡುಪಿನ ಜತೆಗೆ ಕತ್ತಿನ ಜತೆಗೆ ಬೆರೆಯುವ ಶೈಲಿಯ ಬ್ಲಾಂಕೆಟ್ ಸ್ಕಾಫ್ì ಸುತ್ತಿಕೊಂಡರೆ ಚಳಿಯೂ ಮಾಯ. ಜತೆಗೆ ಆಕರ್ಷಕ ವಾಗಿಯೂ ಕಾಣಲು ಸಾಧ್ಯ. ಪ್ರಿಂಟೆಡ್ ಅಥವಾ ಹೂವಿನ ವಿನ್ಯಾಸದ ಸ್ಕಾಫ್ìಗಿಂತಲೂ ಚೌಕಳಿ ವಿನ್ಯಾಸದ ಬ್ಲಾಂಕೆಟ್ ಸ್ಕಾಫ್ì ಹೆಚ್ಚು ಟ್ರೆಂಡಿ. ಕಂದು, ಕಡು ಹಸಿರು ಬಣ್ಣಗಳು ಈ ಋತುವಿಗೆ ಹೊಂದಿಕೊಳ್ಳುವಂಥವು. ಸ್ವೆಟ್ ಶರ್ಟ್ ಮತ್ತು ಸ್ವೆಟರ್
ಜೀನ್ಸ್ ಪ್ಯಾಂಟ್ ಜತೆಗೆ ಸ್ವೆಟ್ ಶರ್ಟ್ ಧರಿಸಿ ಬಿಳಿಯ ಬಣ್ಣದ ಸ್ನೀಕರ್ಸ್ ಧರಿಸುವುದು ಸೂಕ್ತ. ಇದೇ ಶೈಲಿಯನ್ನು ಸೆಮಿ ಫಾರ್ಮಲ್ ಆಗಿಯೂ ಬಳಸಬಹುದು, ಬಿಳಿ ಶರ್ಟ್ ನ ಕಾಲರ್ ಹೊರಗೆ ಕಾಣುವಂತೆ ಹಾಕಿ ಅದರ ಮೇಲೆ ಸ್ವೆಟ್ ಶರ್ಟ್ ಹಾಕಿಕೊಂಡರೆ ಅಂದ ಹೆಚ್ಚುತ್ತದೆ.
Related Articles
ಸ್ವೆಟರ್ ಮತ್ತು ಶ್ರಗ್ ಮಾದರಿಯ ಉಡುಗೆ, ತುಂಬು ತೋಳುಳ್ಳ, ಬಟನ್ ಇಲ್ಲದಿರುವ ಕಾರ್ಡಿಗನ್ ಹೆಚ್ಚು ಬಳಕೆಯಲ್ಲಿವೆ. ಸ್ಟ್ರೈಪ್‌ನ ಪ್ರಿಂಟೆಡ್ ವಿನ್ಯಾಸದ ಬ್ಲೆಜರ್, ಮಂಡಿವರೆಗೆ ಸಡಿಲವಾಗಿ ನಿಲ್ಲುವ ಪ್ಯಾಂಟ್, ಶೂಗಳನ್ನು ಧರಿಸಿದರೆ ಸ್ಟೈಲಿಶ್ ಆಗಿ ಕಾಣಬಹುದು.
Advertisement
ಚಳಿಗೆ ಲೆಗಿಂಗ್ಸ್ , ಸಾಕ್ಸ್ಪ್ರಿಂಟೆಡ್ ಲೆಗಿಂಗ್ಸ್ ಜತೆ ಆಕರ್ಷಕ ಸಾಕ್ಸ್ ಧರಿ ಸುವುದರಿಂದ ಆಕರ್ಷಕವಾಗಿ ಕಾಣಲು ಸಾಧ್ಯ. ಸ್ಯಾಟಿನ್ ಉಡುಪುಗಳು
ಸ್ಯಾಟಿನ್ ಉಡುಪುಗಳು ವಿಭಿನ್ನವಾಗಿ ಗಮನ ಸೆಳೆ ಯುತ್ತವೆ. ಸೀರೆ, ಪ್ಯಾಂಟ್, ಸೂಟ್ಸ್ , ಫ್ರಾಕ್, ವಿವಿಧಬಗೆಯ ಉಡುಪು ಚಳಿಗಾಲಕ್ಕೆ ಹೇಳಿ ಮಾಡಿಸಿದ್ದು. ಈ ಮೊದಲು ಇದನ್ನು ನೈಟ್ ವೇರ್ ಆಗಿ ಬಳ ಸುತ್ತಿದ್ದರು. ಸೆಲಬ್ರಿಟಿಗಳಂತು ಇದಕ್ಕೆ ಫಿದಾ. ಪ್ಯಾರಲಲ್ ಬಾಟಂ
ಪ್ಲಾಜೋ ಪ್ಯಾಂಟ್‌ನಂತೆ ಕಾಣುವ ಪ್ಯಾರರಲ್ ಈಗಿನ ಟ್ರೆಂಡ್. ಹಳೆ ಕಾಲದಂತೆ ಕಾಣುವ ಈ ಉಡುಪು ಎಲ್ಲರಿಗೂ ಅಚ್ಚುಮೆಚ್ಚು,. ಚಳಿಗಾಲದಲ್ಲಿ ಕಾಟನ್ ಪ್ಯಾರಲಲ್ ಪ್ಯಾಂಟ್ ಧರಿಸಿ ಪ್ಯಾಂಟಿನ ಬಣ್ಣದ ಶರ್ಟ್ ಧರಿಸಿ, ಜೀನ್ಸ್ ಪ್ಯಾರಲಲ್ ಮೇಣೆ ಉಣ್ಣೆಯ ಸ್ವೆಟ್ ಶರ್ಟ್ ಕೂಡ ಧರಿಸಬಹುದು. ಸ್ಟೈಲಿಶ್ ಸ್ವೆಟರ್
ಸ್ವೆಟರ್‌ನಲ್ಲಿ ಸಾವಿರ ಬಗೆ, ಉಣ್ಣೆ, ಕಾಟನ್‌ನಿಂದ ತಯಾರಿಸಿದ ಸ್ವೆಟರ್, ಇದರಲ್ಲಿ ಕ್ರಾಸ್ ಬಟನ್ , ಲೆಸ್ ವರ್ಕ್, ಜಿಪ್ ಇನ್ನಿತರ ವಿಧಗಳಲ್ಲಿÉ ಲಭ್ಯ. ನೆಕ್ ಸ್ವೆಟರ್‌ನ ಸೊಂಟದ ಭಾಗದಲ್ಲಿ ಬೆಲ್ಟ್ ಬಳಸಿದರೂ ಸೊಗಸಾಗಿ ಕಾಣಬಲ್ಲದು. ಜಾಕೆಟ್‌ಗಳ ಸೊಬಗು
ಕೆಲವೊಮ್ಮೆ ಸ್ವೆಟರ್ ತೊಡುವುದು ಹಳೆಯ ಫ್ಯಾಷನ್ ಎನ್ನಿಸುವುದರಿಂದ ಜಾಕೆಟ್ ಅನ್ನು ವಿವಿಧ ಉಡುಪುಗಳ ಮೇಲೆ ಧರಿಸುವುದು ಜನಪ್ರಿಯವಾಗುತ್ತಿದೆ. ಲೆದರ್ ಜಾಕೆಟ್, ಡೆನಿಮ್ ಜಾಕೆಟ್‌ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಸೀರೆಯ ಮೇಲೂ ಜಾಕೆಟ್ ತೊಡುವುದು ಹೆಚುª ಪ್ರಸಿದ್ಧವಾಗುತ್ತಿದೆ. ಸೀರೆಗೆ ಹೊಂದಿಕೊಳ್ಳುವಂತಹ ಜಾಕೆಟ್ ತೊಡಬಹುದು. ಇಲ್ಲವಾದಲ್ಲಿ ಜಾಕೆಟ್ ಅನ್ನು ಹೋಲುವಂಥ ಬ್ಲೌಸ್ ತೊಡಬಹುದು. ಹಾಗೆಯೇ ಚಳಿಗಾಲದಲ್ಲಿ ನಾವೆಷ್ಟು ಸುಂದರವಾಗಿ ಕಾಣುತ್ತೇವೆ ಅನ್ನುವುದು ಒಂದಾದರೆ, ಚರ್ಮದ ಆರೈಕೆಯು ಅಷ್ಟೇ ಮುಖ್ಯವಾಗಿರುತ್ತದೆ. ಧರಿಸುವ ಚೂಡಿದಾರ, ಅನಾರ್ಕಲಿ ಕುರ್ತಾ ಟಾಪ್‌ಗ್ಳು ಮೊಣಕಾಲಿನವರೆಗೂ ಇರಲಿ. ಹಾಗೆಯೇ ಉದ್ದ ತೋಳುಗಳಿರುವ ಉಡುಪು ಧರಿಸುವುದು ಈ ಋತುಮಾನಕ್ಕೆ ಇನ್ನಷ್ಟುಉತ್ತಮ. ಚೈನ್ ಟ್ರಿಮ್ ಉಣ್ಣೆ ಸ್ವೆಟರ್
ಕುತ್ತಿಗೆಯ ಭಾಗದಲ್ಲಿ ಚೈನ್ ಮಾದರಿಯ ಉಣ್ಣೆಯ ಸ್ವೆಟರ್ ಚಳಿಗಾಲಕ್ಕೆ ಹೇಳಿ ಮಾಡಿಸಿದಂತೆ, ನಮ್ಮ ಸೌಂದರ್ಯದ ಜತೆಗೆ ಚಳಿಯಿಂದ ನಮ್ಮನ್ನು ರಕ್ಷಿಸುತ್ತದೆ. ಒಳ್ಳೆಯ ಆಯ್ಕೆಯು ಸಹ. ಗಿಗಿ ಕ್ರಾಪ್ಡ್ ಕಾರ್ಡಿಜನ್
ಹತ್ತಿಯಿಂದ ಮಾಡಲ್ಪಟ್ಟ ಈ ಸ್ವೆಟರ್ ತುಂಬಾ ಆಕರ್ಷಕವಾಗಿ ಕಾಣುವುದರ ಜತೆಗೆ ಈಗ ಟ್ರೆಂಡಿಯಾಗಿದೆ. ಬಟನ್ ಇರುವ ಮತ್ತು ಇಲ್ಲದಿರುವ ಸ್ವೆಟರ್‌ಗಳು ಈಗ ಎಲ್ಲರನ್ನೂ ಆಕರ್ಷಿಸುತ್ತಿವೆ. ನಮ್ಮನ್ನು ಬೆಚ್ಚಗಿಡುವ ಸ್ವೆಟರ್‌ಗಳನ್ನು ಇತ್ತೀಚಿನ ಉಡುಪಿನ ಜತೆಗೂ ಧರಿಸಬಹುದು.