Advertisement
ಕೆ.ಆರ್.ಮಾರುಕಟ್ಟೆಯ ಒಳ ಪ್ರದೇಶದಲ್ಲಿ ಸುಮಾರು 800 ಮಳಿಗೆಗಳು ಹಾಗೂ ಹೊರಭಾಗದಲ್ಲಿಯೂ ನೂರಾರು ಮಳಿಗೆಗಳಿದ್ದು, ಕಟ್ಟಡದಲ್ಲಿನ ಫ್ಲೋರಿಂಗ್ ಹಾನಿಗೊಳಗಾಗಿದೆ. ಇದರಿಂದ ವ್ಯಾಪಾರಸ್ಥರಿಗೆ ಹಾಗೂ ಗ್ರಾಹಕರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಮಾರುಕಟ್ಟೆಯ ಒಳಾಂಗಣದ ಫ್ಲೋರಿಂಗ್ ಗೆ ಗ್ರ್ಯಾನೈ ಟ್ ಹಾಕಲಾಗುತ್ತಿದೆ ಎಂದು ಸ್ಮಾರ್ಟ್‌ಸಿಟಿ ಯೋಜನೆಯ ಅಧಿಕಾರಿ ತಿಳಿಸುತ್ತಾರೆ.
Related Articles
ಸುಮಾರು 168 ನಾಲ್ಕುಚಕ್ರದ ವಾಹನ ಮತ್ತು 279 ದ್ವಿಚಕ್ರ ವಾಹನ ಗಳನ್ನು ನಿಲ್ಲಿಸಬಹುದಾಗಿದೆ.
Advertisement
ಜನರಿಗೆ ಹಾಗೂ ಸರಕು ಸಾಗಣೆಗೆ ಪ್ರತ್ಯೇಕ ಲಿಫ್ಟ್ ಜತೆಗೆ, ಮಾರುಕಟ್ಟೆಯ ಎಲ್ಲರಿಗೂ ಅನುಕೂಲವಾಗಲೆಂದು ನಾಲ್ಕು ಭಾಗಗಳಲ್ಲಿ ನಾಲ್ಕು ಜನರಿಗೆ ಹಾಗೂ ಎರಡು ಗೂಡ್ಸ್ ಸಾಗಿಸುವ ಲಿಫ್ಟ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಜನರ ಸುರಕ್ಷತೆಗಾಗಿ ಕಬ್ಬಣದ ಕಂಬಿ ಹಾಗೂ ಇತರೆ ವಸ್ತುಗಳನ್ನು ತೆಗೆದು, ಸ್ಟೀಲ್ ವಸ್ತುಗಳನ್ನು ಬಳಕೆ ಮಾಡಲಾಗಿದೆ. ಜೊತೆಗೆ ಮಳೆಯ ನೀರು ಒಳಗೆ ಬರದಂತೆ ಮಾರುಕಟ್ಟೆಯ ಮುಂಭಾಗದಲ್ಲಿ ದಪ್ಪ ಹಾಗೂ ಗುಣಮಟ್ಟದ ಗಾಜು ಬಳಸಲಾಗಿದ್ದು, ಈಗಾಗಲೇ ಗಾಜು ಛಾವಣಿಯ ಕೆಲಸ ಶೇ.90ರಷ್ಟು ಪೂರ್ಣಗೊಂಡಿದೆ. ಒಟ್ಟು 1,200 ಅಡಿ ಪ್ರದೇಶವನ್ನು ವಾಟರ್‌ಪ್ರೂಫ್ ವ್ಯವಸ್ಥೆ ಮಾಡಲಾಗುತ್ತಿದೆ ಎನ್ನುತ್ತಾರೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಕೆ.ಆರ್. ಮಾರುಕಟ್ಟೆಯ ಕಟ್ಟಡದ ಅಭಿವೃದ್ಧಿ ಕಾಮಗಾರಿಯು ಕೊರೊನಾ ಹಾಗೂ ಮಳೆಯ ಕಾರಣದಿಂದಾಗಿ ತಡವಾಗಿದ್ದರೂ, ಈಗಾಗಲೇ ಶೇ.80ರಷ್ಟು ಕಾಮಗಾರಿ ಮುಗಿದಿದ್ದು, ನವೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವ ಯೋಚನೆಯಿದೆ.
●ವಿನಾಯಕ್ ಸೂಗರ್, ಸ್ಮಾರ್ಟ್ ಸಿಟಿ ಯೋಜನೆ
ಮುಖ್ಯ ಇಂಜಿನಿಯರ್ ಕೆ.ಆರ್.ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಯೂ ಕೋವಿಡ್, ಮಳೆ ಕಾರಣದಿಂದ ನಿಧಾನಗತಿಯಲ್ಲಿ ನಡೆಯುತ್ತಿದ್ದು, ಆದಷ್ಟು ಬೇಗ ಕಾಮಗಾರಿಯನ್ನು ಪೂರ್ಣಗೊಳಿಸಿದರೆ, ವ್ಯಾಪಾರಸ್ಥರಿಗೆ ಮತ್ತು ಗ್ರಾಹಕರಿಗೆ ಅನುಕೂಲವಾಗುತ್ತದೆ.
●ದಿವಾಕರ್, ಕೆ.ಆರ್.ಮಾರುಕಟ್ಟೆ ಅಧ್ಯಕ್ಷ ●ಭಾರತಿ ಸಜ್ಜನ್