Advertisement

ಸಿಆರ್‌ಸಿ ಕಟ್ಟಡಕ್ಕೆ ಹೊಸ ರೂಪ

03:41 PM Jan 24, 2021 | Team Udayavani |

ಕುಮಟಾ: ತಾಲೂಕಿನ ಹೊಲನಗದ್ದೆಯಲ್ಲಿರುವ ಸಿಆರ್‌ಸಿ ಕಟ್ಟಡಕ್ಕೆ ಹೊಸರೂಪ ನೀಡಲಾಗಿದ್ದು, ಬಣ್ಣ ಕಳೆದುಕೊಂಡು ಮಸುಕಾದ ಕಟ್ಟಡವೀಗ ಸುಣ್ಣ ಬಣ್ಣಗಳಿಂದ ಅಲಂಕೃತಗೊಂಡಿದೆ.

Advertisement

ಕಟ್ಟಡದ ಹೊರ ಆವರಣದ ಗೋಡೆಗಳು ಗ್ರಾಮೀಣ ಸೊಗಡಿನ ವರ್ಲಿ ಚಿತ್ರಗಳಿಂದ ಸುಂದರವಾಗಿ ಕಂಗೊಳಿಸುತ್ತಿದೆ. ಒಳ ಗೋಡೆಗಳು ದೇಶದ ಮಹಾಪುರುಷರ ಚಿತ್ರ ಹಾಗೂ ಕನ್ನಡ ನಾಡಿನ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಚಿತ್ರಗಳನ್ನು ಹೊಂದಿದ್ದು, ಇದರ ಜೊತೆಗೆ ಕ್ಲಸ್ಟರ್‌ನ ಅವಶ್ಯಕ ಮಾಹಿತಿಗಳನ್ನೂ ಒಳಗೊಂಡಿದ್ದು, ಕಟ್ಟಡದ ಸುರಕ್ಷತೆ ದೃಷ್ಟಿಯಿಂದ ಸ್ಲ್ಯಾಪ್‌ ಮೇಲೆ ಹಂಚಿನ ಹೊದಿಕೆ ಅಳವಡಿಸಲಾಗಿದೆ.

ಇದನ್ನೂ ಓದಿ:ಸೋಡಿಗದ್ದೆ ಮಹಾಸತಿ ಜಾತ್ರೋತ್ಸವ ಆರಂಭ

ಒಟ್ಟಿನಲ್ಲಿ ಅಧಿಕಾರಿಗಳಲ್ಲಿ ಇಚ್ಛಾಶಕ್ತಿ ಇದ್ದರೆ ತಮ್ಮ ಕಾರ್ಯಾಲಯವನ್ನು ಹೇಗೆ ಆಕರ್ಷಣೀಯ ಕೇಂದ್ರವನ್ನಾಗಿ ಪರಿವರ್ತಿಸಬಲ್ಲರು ಎಂಬುದಕ್ಕೆ ಹೊಲನಗದ್ದೆ ಸಿಆರ್‌ಸಿ ಕಟ್ಟಡ ಉತ್ತಮ ಉದಾಹರಣೆಯಾಗಿದೆ. ಇಲ್ಲಿ ಕಳೆದ ಮೂರು ವರ್ಷಗಳಿಂದ ಸಿಆರ್‌ ಪಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರದೀಪ ನಾಯಕರು ತಮ್ಮ ಸಕಾರಾತ್ಮಕ ನಿರ್ಧಾರದಿಂದ ಈ ಬದಲಾವಣೆಗೆ ಕಾರಣರಾಗಿದ್ದಾರೆ. ಅವರ ಈ ಕಾರ್ಯಕ್ಕೆ ಶೈಕ್ಷಣಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next