Advertisement
ಇದು ಫ್ಯಾಷನ್ ಲೋಕದಲ್ಲಿ ಹೊಸ ಅಧ್ಯಾಯ ರೂಪಿಸಿದ್ದು ಚಳಿಗಾಲ ಒಂದೇ ಅಲ್ಲ ಬೇಸಗೆ ಕಾಲದಲ್ಲಿಯೂ ಬೂಟ್‌ಗಳನ್ನು ಧರಿಸಿ ಬಬ್ಲಿ ಬಬ್ಲಿಯಾಗಿ ಕಾಣುವುದು ಹೆಣ್ಣು ಮಕ್ಕಳಿಗೆ ಎಲ್ಲಿಲ್ಲದ ಖುಷಿಯಾಗಿ ಬಿಟ್ಟಿದೆ. ಫಾಷ್ಯನ್ ಲೋಕದಲ್ಲಿ ದಿನೇ ದಿನೇ ಹೊಸ ಹೊಸ ಟ್ರೆಂಡ್ ಹುಟ್ಟಿಕೊಳ್ಳುತ್ತಿದ್ದು ಹೊಸ ವರ್ಷಕ್ಕೆ ಬೂಟ್‌ಗಳ ಹಾವಳಿ ಶುರುವಾಗಿದ್ದು, ಆನ್‌ಲೈನ್ ಸೇರಿದಂತೆ ಬೂಟ್ ಅಂಗಡಿಗಳಲ್ಲಿ ಖರೀದಿ ಜೋರಾಗಿದೆ.
ಚೆನ್ನಾಗಿ ಕಾಣಬೇಕೆಂದು ಕಾಲಿಗೆ ಹೊಂದದ ಶೂಗಳನ್ನು ಧರಿಸುವುದರಿಂದ ಪಾದಕ್ಕೆ ಆರಾಮವೂ ಇಲ್ಲದೆ ಕಸಿವಿಸಿ ಉಂಟಾಗುತ್ತದೆ. ಅದರ ಬದಲು ದಿರಿಸಿಗೆ ಹೊಂದುವಂಥ ಶೂಗಳನ್ನು ಕರಿದಿಸಿ, ಅದು ನಿಮ್ಮ ಕಾಲಿಗೂ ಆರಾಮದಾಯಕವಾಗಿರಲಿ. ಚೆಂದವಾಗಿ ಕಾಣಿಸುತ್ತದೆ ಎಂಬ ಕಾರಣಕ್ಕಾಗಿ ಖರೀದಿಸುವ ಬದಲು ಹೇಗೆ ಬಾಳಿಕೆ ಮತ್ತು ಅದನ್ನು ಧರಿಸುವುದರಿಂದ ನಿಮ್ಮ ಅಂಗಾಲುಗಳಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಪರೀಕ್ಷಿಸಿ ಆಯ್ದುಕೊಳ್ಳಿ. ಒರಟು ತ್ವಚೆಯಾದರೆ ಪ್ಲಾಸ್ಟಿಕ್ ಅಂಶ ಜಾಸ್ತಿ ಇರುವ ಬೂಟ್ ಬಳಸುವುದನ್ನು ಕಡಿಮೆ ಮಾಡಿ. ಏಕೆಂದರೆ ಇದು ನಡೆಯಲು ಕಷ್ಟಕರವಾಗಿ ಗಾಯಗಳಾಗುವ ಸಂಭವವಿರುತ್ತದೆ. ವಿವಿಧ ರೀತಿಯ ಬೂಟ್‌ಗಳು
ಬೂಟ್‌ಗಳಲ್ಲಿ ರಬ್ಬರ್, ಪ್ಲಾಸ್ಟಿಕ್, ಬಟ್ಟೆ, ಚರ್ಮಗಳಿಂದ ಮಾಡಿದ ಬೂಟ್ ಮಾರುಕಟ್ಟೆಗಳಿಗೆ ಲಗ್ಗೆ ಇಟ್ಟಿದ್ದು ವಿಭಿನ್ನ ಡಿಸೈನ್‌ಗಳ ಆಯ್ಕೆಯೂ ಇದೆ. ಶೂಗಳು ಎಲ್ಲ ಡ್ರೆಸ್‌ಗಳಿಗೂ ಹೊಂದುವುದಿಲ್ಲ ಆದರೆ ಬೂಟ್‌ಗಳು ಶಾರ್ಟ್ಸ್, ತ್ರೀ ಫೋರ್ಥ್, ಸ್ಕರ್ಟ್, ಫ್ರಾಕ್ ಹೀಗೆ ಎಲ್ಲ ಬಟ್ಟೆಗಳಿಗೂ ಸುಂದರವಾಗಿ ಕಾಣುತ್ತದೆ. ಇದರಲ್ಲಿಯೂ ಆ್ಯಂಕಲ್ ಬೂಟ್, ಮೊಣಕಾಲು ಬೂಟ್, ಹೀಗೆ ನಿಮ್ಮ ಅಭಿರುಚಿಗೆ ತಕ್ಕುದಾದ ಬೂಟ್‌ಗಳನ್ನು ನೀವು ಧರಿಸಬಹುದಾಗಿದೆ. ಶಾರ್ಟ್ ಫ್ರಾಕ್ ಅಥವಾ ಮಿನಿ ಸ್ಕರ್ಟ್ ಧರಿಸುವಾಗ ಲೆದರ್ ಬೂಟ್‌ಗಳನ್ನು ಧರಿಸಿ ಇದು ಬರ್ಡೆ ಪಾರ್ಟಿ, ಅಥವಾ ಸಿಂಪಲ್ ಸಂಮಾರಂಭಗಳಿಗೆ ಗ್ಲಾಮರಸ್ ಲುಕ್ ನೀಡುತ್ತದೆ. ಗಿಡ್ಡ ಕಾಲಿನವರು ಆ್ಯಂಕಲ್ ಲೆಂತ್ ಬೂಟ್ ಮತ್ತು ಉದ್ದ ಕಾಲಿನವರು ಲಾಂಗ್ ಲೆಂತ್ ಬೂಟ್ಸ್ ಬಳಸಿದರೆ ಉತ್ತಮ.
Related Articles
ಜಿಪ್, ಬಟನ್, ಲೇಸ್, ಹ್ಯಾಂಗಿಂಗ್, ಮ್ಯಾಗ್ನೆಟ್ ಹೀಗೆ ಹಲವಾರು ಆಯ್ಕೆಗಳಿದ್ದು, ಬೂಟ್‌ಗಳ ಮೇಲೆ ಹೆಸರು, ಭಾವಚಿತ್ರ, ನಿಮ್ಮ ಪ್ರೀತಿ ಪಾತ್ರರ ಹೆಸರು, ಪ್ರಾಣಿಗಳ ಹೆಸರು, ನೆಚ್ಚಿನ ನಟ, ನಟಿಯರ ಹೆಸರನ್ನು ಬೂಟ್‌ಗಳ ಮೇಲೆ ಮೂಡಿಸಬಹುದಾಗಿದೆ. ಇತ್ತೀಚೆಗೆ ಇದಕ್ಕೆ ಆನ್‌ಲೈನ್ ಸೇವೆ ಹೆಚ್ಚುತ್ತಿದೆ. ಆದರೆ ಕಸ್ಟಮೈಸ್ಡ್ ಬೂಟ್‌ಗಳ ಸೇವೆ ಸ್ವಲ್ಲ ದುಬಾರಿಯೇ.
Advertisement
– ಪ್ರೀತಿ ಭಟ್ ಗುಣವಂತೆ